ಜಮಖಂಡಿ: ಗೋಶಾಲೆ ಸೇರಿದ ಜಾನುವಾರುಗಳು

7
ಕಸಾಯಿಖಾನೆಗೆ ಸಾಗಿಸುತ್ತಿದ್ದಾಗ ತಡೆ

ಜಮಖಂಡಿ: ಗೋಶಾಲೆ ಸೇರಿದ ಜಾನುವಾರುಗಳು

Published:
Updated:
Deccan Herald

ಜಮಖಂಡಿ: ಸ್ಥಳೀಯ ಎಪಿಎಂಸಿ ಆವರಣದಿಂದ ಗೂಡ್ಸ್‌ ವಾಹನದಲ್ಲಿ ಕಸಾಯಿಖಾನೆಗೆ ಜಾನುವಾರುಗಳನ್ನು ಬುಧವಾರ ಸಾಗಿಸುತ್ತಿದ್ದಾಗ ಅದನ್ನು ತಡೆದ ಯುವಕರ ತಂಡ ಒಂಬತ್ತು ಜಾನುವಾರುಗಳನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ.

ಬೋಲೆರೊ ಪಿಕ್‌ಅಪ್‌ ವಾಹನದಲ್ಲಿ 9 ಜಾನುವಾರುಗಳನ್ನು ಸಾಗಿಸುತ್ತಿದ್ದುದನ್ನು ಕಂಡು ಅನುಮಾನದಿಂದ ವಾಹನ ಚಾಲಕನನ್ನು ಯುವಕರ ತಂಡ ವಿಚಾರಿಸಿದ್ದಾರೆ. ಆಗ ಕಸಾಯಿಖಾನೆಗೆ ಸಾಗಿಸುತ್ತಿರುವುದು ಗೊತ್ತಾಗಿದೆ.  ವಾಹನ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಯುವಕರು ಜಾನುವಾರುಗಳನ್ನು ನಗರ ಪೊಲೀಸ್‌ ಠಾಣೆಗೆ ತಂದು, ವಶಕ್ಕೆ ನೀಡಿದ್ದಾರೆ.  3 ಹೋರಿಕರು, 2 ಆಕಳು ಕರು ಹಾಗೂ 4 ಆಕಳುಗಳು ಇವೆ.

ಡಿವೈಎಸ್ಪಿ ರಾಮನಗೌಡ ಹಟ್ಟಿ ಅವರ ನೇತೃತ್ವದಲ್ಲಿ ವಶಕ್ಕೆ ಪಡೆದ ಜಾನುವಾರುಗಳನ್ನು ಪೊಲೀಸರು ಮುಧೋಳ ಗೋಶಾಲೆಗೆ ಕಳುಹಿಸಿದ್ದಾರೆ. ಜಾನುವಾರುಗಳ ಸಾಗಾಟಕ್ಕೆ ಬಳಸಿದ್ದ ವಾಹನವನ್ನು ಸಹ ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ.

ಪಿಎಸ್‌ಐ ದಿನೇಶ ಜವಳಕರ, ಪೊಲೀಸ್‌ ಸಿಬ್ಬಂದಿಗಳಾದ ಶೇಖರ ನಾಯಿಕ, ಬಿ.ಜಿ. ಮದರಖಂಡಿ, ಮಸಗಿ ಜಾನುವಾರುಗಳನ್ನು ಗೋಶಾಲೆಗೆ ಸಾಗಿಸುವಲ್ಲಿ ಸಹಕರಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !