ಜಮಖಂಡಿ: ‘ನಮ್ಮ ಸರ್ಕಾರ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದು ಅಭಿವೃದ್ಧಿ ಮಾಡುತ್ತಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.

ತಾಲ್ಲೂಕಿನ ಹುಣಸಿಕಟ್ಟಿ ಗ್ರಾಮದಲ್ಲಿ ಸೋಮವಾರ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವತಿಯಿಂದ ಹುಣಸಿಕಟ್ಟಿ ಜಿಗಿನಿ ಕೆರೆ ತುಂಬಿಸುವ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಅಭಿವೃದ್ಧಿ ಕೆಲಸ ಮಾಡಿದ್ದು ಹೇಳಿಕೊಳ್ಳಬೇಕಲ್ಲ. ಪ್ರಧಾನಮಂತ್ರಿ ಮಾಡಿದ್ದು ಹೇಳಿಕೊಳ್ಳುವುದಿಲ್ವಾ? ಅಭಿವೃದ್ಧಿ ಮಾಡಿದ್ದು ವೈಯಕ್ತಿಕವಾಗಿರುವುದಿಲ್ಲ. ಗ್ರಾಮ, ಸಾರ್ವಜನಿಕರ ಪರವಾಗಿರುತ್ತವೆ’ ಎಂದರು.

ಮಾಜಿ ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ‘ಅಭಿವೃದ್ಧಿ ವಿಷಯದಲ್ಲಿ ಎಂದೂ ರಾಜಕೀಯ ಮಾಡಿಲ್ಲ. ಕ್ಷೇತ್ರಕ್ಕೆ ಬೇಕಾದ ಎಲ್ಲ ಯೋಜನೆಗಳನ್ನು ತರುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಆದರೆ, ನಾನು ಶಾಸಕನಾಗಿದ್ದಾಗ ಬಿಜೆಪಿ ಸರ್ಕಾರ ಇತ್ತು. ಅಂದಿನ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಸಹಕಾರ ನೀಡುತಿದ್ದರು. ಕ್ಷೇತ್ರದ ಅಭಿವೃದ್ಧಿಗೆ ವೈಯಕ್ತಿಕ ಪ್ರತಿಷ್ಠೆ ಮುಖ್ಯವಲ್ಲ’ ಎಂದರು.

ಮುಖಂಡ ತೌಫೀಕ್ ಪಾರ್ಥನಳ್ಳಿ, ಮಹಾದೇವ ಪಾಟೀಲ, ಪರಮಾನಂದ ಗವರೋಜಿ, ಸದುಗೌಡ ಪಾಟೀಲ, ಸಿದ್ದು ಮೀಶಿ, ಮಹೇಶ ಕೋಳಿ, ಅಬೂಬಕರ್ ಕುಡಚಿ, ದಾನೇಶ ಘಾಟಗೆ, ಮಾದೇಗೌಡರು ಇದ್ದರು.

ವೇದಿಕೆ ಹತ್ತದ ಶಾಸಕ: ಗ್ರಾಮದಲ್ಲಿ ನಡೆದ ಕೆರೆ ತುಂಬುವ ಯೋಜನೆಯ ಕಾರ್ಯಕ್ರಮದ ವೇದಿಕೆಯಲ್ಲಿ ಶಿಷ್ಟಾಚಾರ ಪಾಲನೆ ಮಾಡಬೇಕು. ಮಾಜಿ ಶಾಸಕ ಆನಂದ ನ್ಯಾಮಗೌಡ ಅವರನ್ನು ವೇದಿಕೆಯಿಂದ ಕೆಳಗಿಳಿಸಬೇಕು ಎಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು. ಮಾಜಿ ಶಾಸಕ ಆನಂದ ನ್ಯಾಮಗೌಡ ವೇದಿಕೆಗೆ ಬನ್ನಿ ಎಂದು ಕರೆದಿದ್ದರಿಂದ ಶಾಸಕ ಜಗದೀಶ ಗುಡಗುಂಟಿ ವೇದಿಕೆ ಏರದೇ ತೆರಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.