ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾದಗಿ: ಕಾರಹುಣ್ಣಿಮೆಗೆ ಖರೀದಿ ಜೋರು

Published 1 ಜೂನ್ 2023, 12:29 IST
Last Updated 1 ಜೂನ್ 2023, 12:29 IST
ಅಕ್ಷರ ಗಾತ್ರ

ಕಲಾದಗಿ: ಉತ್ತರ ಕರ್ನಾಟಕದಲ್ಲಿ ವರ್ಷದ ಮೊದಲ ಹಬ್ಬವಾಗಿ ಆಚರಿಸುವ ಕಾರಹುಣ್ಣಿಮೆ ಅಂಗವಾಗಿ ರೈತರು ಕರಿ ಹರಿಯುವ ಎತ್ತುಗಳ ಅಲಂಕಾರಕ್ಕೆ ಸಾಮಗ್ರಿಗಳನ್ನು ಖರೀದಿಸಿದರು.

ರೈತಾಪಿ ಮಂದಿ ಬಸವಣ್ಣ ಅಂತ ನಂಬಿರುವ ಎತ್ತುಗಳಿಗೆ ಹೊಸ ಹಗ್ಗ ಕಾಂಡಾ (ಕೊರಳಿಗೆ ಕಟ್ಟುವ ಹಗ್ಗ ) ಮುಗುದಾನಿ, ಕೋಡಿಗೆ ಕಟ್ಟುವ ರಿಬ್ಬನ್ ಗೋಂಡೆ ಖರೀದಿ ಮಾಡಿದರು. ಕಾರ ಹುಣ್ಣಿಮೆಯಂದು ಎತ್ತುಗಳಿಗೆ ಸ್ಥಾನ ಮಾಡಿಸಿ, ಅಲಂಕರಿಸಿ ನೈವೇದ್ಯ ಸಲ್ಲಿಸುವುದು ಸಂಪ್ರದಾಯ.

ಕರಿ ಹರಿಯುವ ವಿಶೇಷತೆ: ಕಾರ ಹುಣ್ಣಿಮೆ ದಿನದಂದು ಸಂಜೆಯಾಗುತ್ತಿದ್ದಂತೆ ಕರಿ ಹರಿಯಲಾಗುತ್ತದೆ. ಊರ ಅಗಸಿಯಲ್ಲಿ ಬೇವಿನ ತಪ್ಪಲಿನ ತೋರಣದ ನಡುವೆ ಕೊಬ್ಬರಿ ಕಟ್ಟಲಾಗಿರುತ್ತದೆ. ಕರಿ ಹರಿಯು ಬಿಳಿ ಹಾಗೂ ಕಂದು ಬಣ್ಣದ ಎತ್ತುಗಳು ಇದರಲ್ಲಿ ಭಾಗವಹಿಸುತ್ತವೆ. ಅಗಸಿಯ ಎದುರಿಗೆ ಎತ್ತುಗಳೊಂದಿಗೆ ರೈತರು ತಾ ಮುಂದು ನೀ ಮುಂದೆ ಎಂದು ಓಡುತ್ತಾ ಕರಿಹರಿಯುತ್ತಾರೆ. ಜನರು ಕೇಕೆ ಹಾಕಿ ಉತ್ಸಾಹ ತುಂಬುತ್ತಾರೆ. ಯಾವ ಬಣ್ಣದ ಬೆಳೆ ಚೆನ್ನಾಗಿ ಬರುತ್ತದೆ ಎನ್ನುವ ನಂಬಿಕೆ ರೈತರದ್ದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT