ರಬಕವಿ ಬನಹಟ್ಟಿ: ಬನಹಟ್ಟಿಯ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ₹ 400ಕ್ಕೆ ಕೆ.ಜಿಯಂತೆ ಮಾರಾಟವಾಗುತ್ತಿದ್ದು, ಗ್ರಾಹಕರು ಸ್ವಲ್ಪ ಪ್ರಮಾಣದಲ್ಲಿ ಮಾತ್ರ ಖರೀದಿ ಮಾಡುತ್ತಿದ್ದಾರೆ.

ಒಣಗಿದ ಉತ್ತಮ ಗುಣಮಟ್ಟದ ಜವಾರಿ ಬೆಳ್ಳುಳ್ಳಿ ₹ 400 ಮತ್ತು ಹೈಬ್ರಿಡ್ ಬೆಳ್ಳುಳ್ಳಿ ₹ 360ಕ್ಕೆ ಕೆ.ಜಿ.ಯಂತೆ ಮಾರಾಟವಾಗುತ್ತಿದೆ. ಕಳೆದ ನಾಲ್ಕೈದು ವಾರಗಳಿಂದ ಬೆಲೆ ಏರಿಕೆಯಾಗುತ್ತಿದೆ. ದರ ₹ 400 ಕ್ಕೆ ತಲುಪಿರುವುದರಿಂದ ಮಾರಾಟಗಾರರು ಮತ್ತು ಖರೀದಿದಾರರು ಸಮಸ್ಯೆ ಎದುರಿಸುತ್ತಿದ್ದಾರೆ.

ಈ ಭಾಗದಲ್ಲಿ ಬೆಳ್ಳುಳ್ಳಿ ಮಧ್ಯ ಪ್ರದೇಶ ಮತ್ತು ಗುಜರಾತ ರಾಜ್ಯದಿಂದ ಬರುತ್ತದೆ. ಸ್ಥಳೀಯ ರೈತರು ಸ್ವಲ್ಪ ಪ್ರಮಾಣದಲ್ಲಿ ಬೆಳೆಯುತ್ತಾರೆ. ಆ ರಾಜ್ಯಗಳಲ್ಲಿ ಇದು ಮುಂಗಾರು ಬೆಳೆಯಾಗಿದ್ದರೆ, ಇಲ್ಲಿ ಹಿಂಗಾರು ಬೆಳೆಯಾಗಿದೆ. ಮಧ್ಯಪ್ರದೇಶ ಮತ್ತು ಗುಜರಾತ್‌ನಲ್ಲಿ ಮಳೆಯಿಂದಾಗಿ ಬೆಳೆ ಹಾಳಾಗಿದೆ. ಹೀಗಾಗಿ ಬೆಲೆ ಏರಿಕೆಯಾಗಿದೆ ಎಂದು ರೈತ ಸದಾಶಿವ ಬಂಗಿ ತಿಳಿಸಿದರು.

ಬೆಲೆ ಹೆಚ್ಚಳವಾಗಿರುವುದರಿಂದ ಈ ಭಾಗದ ರೈತರು ತಮ್ಮಲ್ಲಿಯ ಹಸಿಯಾಗಿರುವ ಬೆಳ್ಳುಳ್ಳಿಯನ್ನೇ ತಂದು ಮಾರಾಟ ಮಾಡುತ್ತಿದ್ದಾರೆ. ಇದು ₹ 300 ಕ್ಕೆ ಕೆ.ಜಿ.ಯಂತೆ ಮಾರಾಟವಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.