ಜಮಖಂಡಿ: ‘ಮೂರು ವರ್ಷದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತವನ್ನು ಕೇಂದ್ರ ಸರ್ಕಾರ ಒಪ್ಪಿದರೆ ಪೂರ್ಣಗೊಳಿಸುತ್ತೇವೆ’ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ತಾಲ್ಲೂಕಿನ ತುಂಗಳ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಲಕ್ಷ್ಮಿ-ವೆಂಕಟೇಶ್ವರ ದೇವಸ್ಥಾನ ನೂತನ ಗೋಪುರ, ಕಳಸಾರೋಹಣ ಉದ್ಘಾಟಿಸಿ ಮಾತನಾಡಿದ ಅವರು, ‘ಕೃಷ್ಣಾ ಮೇಲ್ದಂಡೆ ಯೋಜನೆಯಿಂದ ಉತ್ತರ ಕರ್ನಾಟಕ ಭಾಗಕ್ಕೆ ಬಹುದೊಡ್ಡ ಬದಲಾವಣೆ ಬಂದಿದೆ. 12.5 ಲಕ್ಷ ಎಕರೆ ಪ್ರದೇಶ ಜಮಿನು ನೀರಾವರಿಯಾಗಲಿದೆ. ಬರದ ನಾಡಾಗಿದ್ದ ಈ ಭಾಗಕ್ಕೆ ನೀರಾವರಿ ಯೋಜನೆಗಳಿಂದ ಇಂದು ಸಮೃದ್ಧ ನಾಡಾಗಿ ಪರಿವರ್ತನೆಯಾಗಿದೆ. ರೈತರ ಬದುಕು ಎತ್ತರ ಮಟ್ಟಕ್ಕೆ ಬೆಳೆಯುತ್ತಿದೆ’ ಎಂದರು.

‘ನಮ್ಮ ಸರ್ಕಾರ ಬಡವರನ್ನು ಬಡತನದಿಂದ ಹೊರತರುವಲ್ಲಿ ಗ್ಯಾರಂಟಿ ಯೋಜನೆಗಳನ್ನು ನೀಡಿದೆ. ಇದರಿಂದ ಪ್ರತಿಯೊಂದು ಬಡ ಕುಟುಂಬಕ್ಕೆ ಪ್ರತಿ ತಿಂಗಳು ಸರಾಸರಿ 5 ಸಾವಿರ ನೀಡಿದಂತಾಗುತ್ತಿದೆ. ಪ್ರತಿ ವರ್ಷಕ್ಕೆ 60 ಸಾವಿರ ನೀಡಿದಂತಾಗುತ್ತದೆ’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಮಾತನಾಡಿ, ‘ಬಿಗರೂ ದೂರ ಇರಬೇಕು, ನೀರು ಸಮಿಪ ಇರಬೇಕು’ ಎಂಬ ಗಾದೆ ಇದೆ. ಆದರೆ ತುಂಗಳ ಗ್ರಾಮಕ್ಕೆ ಬಿಗರೆ ನೀರು ತಂದುಕೊಟ್ಟಿದ್ದಾರೆ. ಕೃಷ್ಣಾ ಮೇಲ್ದಂಡೆ ಯೋಜನೆಯ 3 ಹಂತಕ್ಕೆ ನೀರಾವರಿ ಜಮೀನಿಗೆ ₹40 ಲಕ್ಷ, ಒಣಬೆಸಾಯ ಭೂಮಿಗೆ ₹30 ಲಕ್ಷ ನಿಗದಿ ಪಡಿಸಿದೆ. ಮೂರು ವರ್ಷಗಳಲ್ಲಿ ಯೋಜನೆ ಪೂರ್ಣ ಮಾಡುವ ಯೋಜನೆ ಇದಾಗಿದೆ’ ಎಂದರು.

ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮಾತನಾಡಿ, ‘ಕೃಷ್ಣಾ ಮೇಲ್ದಂಡೆ ಯೋಜನೆ ಘೋಷಣೆ ಮಾಡಿದರೆ ಸಾಲದು, ಅದನ್ನು ಯಾವ ದಿನಾಂಕದಲ್ಲಿ ಪೂರ್ಣಗೊಳಿಸುತ್ತಿರಿ ಅದನ್ನು ರೈತರಿಗೆ ತಿಳಿಸಿ’ ಎಂದರು.

ಮಾಜಿ ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ‘ತುಂಗಳ ಭಾಗಕ್ಕೆ ಸಂಪೂರ್ಣ ನೀರಾವರಿ ಯೋಜನೆಗೆ ಒಳಪಡಿಸಬೇಕು ಎಂದು ತುಬಚಿಯಿಂದ ತುಂಗಳ ವರೆಗೆ ನೀರು ಸರಬರಾಜು ಮಾಡಲು ₹35 ಕೋಟಿ ವೆಚ್ಚದ ಯೋಜನೆ ಅನುಮೋದನೆ ಆಗುವುದಿದೆ. ಸಣ್ಣ ನೀರಾವರಿ ಇಲಾಖೆ ಈಗಾಗಲೇ ಸರ್ವೆ ಕಾರ್ಯ ಮಾಡಿದೆ. ಆಲಮಟ್ಟಿ ಯೋಜನೆ ಪೂರ್ಣ ಆಗುವುದಿಲ್ಲ ಎಂದು ರೈತರಲ್ಲಿ ಆಶಾಭಾವನೆ ಇತ್ತು. ಆದರೆ ಸಿ.ಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ ನುಡಿದಂತೆ ನಡೆದಿದ್ದಾರೆ’ ಎಂದರು.

ಬೀಳಗಿ ಶಾಸಕ ಜೆ.ಟಿ. ಪಾಟೀಲ ಮಾತನಾಡಿದರು. ಕಾಡಸಿದ್ಧೇಶ್ವರ ಮಠದ ಗುರುಶಾಂತಲಿಂಗ ದೇಶಿಕೇಂದ್ರ ಶ್ರೀ, ಅನುಸೂಯಾತಾಯಿ, ರಾಜಯೋಗಿನಿ ಬಿ.ಕೆ. ವೈಷ್ಣವಿ ಅಕ್ಕ, ಅರ್ಚಕ ಶಂಕರ ಕುಲಕರ್ಣಿ, ಶ್ರೀಶೈಲ ದಳವಾಯಿ, ಸುಶೀಲಕುಮಾರ ಬೆಳಗಲಿ, ರಾಹುಲ ಕಲೂತಿ, ಯೋಗಪ್ಪ ಸವದಿ, ದಯಾನಂದ ಪಾಟೀಲ, ಮುತ್ತಣ್ಣ ಹಿಪ್ಪರಗಿ, ಕಲ್ಲಪ್ಪ ಗಿರಡ್ಡಿ, ವರ್ಧಮಾನ ನ್ಯಾಮಗೌಡ, ಅರ್ಜುನ ದಳವಾಯಿ, ಸದುಗೌಡ ಪಾಟೀಲ, ಅರುಣಕುಮಾರ ಶಹಾ, ಫಕೀರಸಾಬ ಬಾಗವಾನ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.