ಬಾಗಲಕೋಟೆ: ‘ತೆಲಂಗಾಣದಲ್ಲಿ ಇದಕ್ಕಿಂತ ದೊಡ್ಡ ನೀರಾವರಿ ಯೋಜನೆಯನ್ನು ಮುಖ್ಯಮಂತ್ರಿಯಾಗಿದ್ದ ಕೆ.ಸಿ.ಆರ್ ಕಾಲಮಿತಿಯಲ್ಲಿ ಪೂರ್ಣಗೊಳಿಸುವ ಇಚ್ಛಾಶಕ್ತಿ. ಅಂತಹ ಇಚ್ಚಾಶಕ್ತಿಯನ್ನು ರಾಜ್ಯದ ನಾಯಕರೂ ಪ್ರದರ್ಶಿಸಬೇಕು. ಅವರ ಆದರ್ಶ ಅಳವಡಿಸಿಕೊಳ್ಳಲಿ’ ಎಂದು ಶ್ರೀಶೈಲ ಪೀಠದ ಚೆನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸಲಹೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಕೃಷ್ಣಾ ಮೇಲ್ದಂಡೆ ಯೋಜನೆಯ ಸಂತ್ರಸ್ತರ ಹೋರಾಟ ಸಮಿತಿಯಿಂದ ಒಂಬತ್ತು ದಿನಗಳಿಂದ ನಡೆದಿರುವ ಅಹೋರಾತ್ರಿ ಹೋರಾಟಕ್ಕೆ ಗುರುವಾರ ಬೆಂಬಲಿಸಿ ಮಾತನಾಡಿದ ಅವರು, ‘ತೆಲಂಗಾಣದ ಬಜೆಟ್ ರಾಜ್ಯಕ್ಕಿಂತ ಸಣ್ಣದಿದೆ. ಅವರಿಗಿಂತ ರಾಜ್ಯ ದೊಡ್ಡ ಬಜೆಟ್ ದೊಡ್ಡದಾಗಿದೆ. ಆದರೆ, ಅಧಿಕಾರಸ್ಥರ ಇಚ್ಛಾಶಕ್ತಿ ಕೊರತೆಯಿಂದಲೇ 60 ವರ್ಷಗಳಾದರೂ ಯುಕೆಪಿ ಪೂರ್ಣಗೊಳ್ಳುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಉತ್ತರ ಕರ್ನಾಟದ ಬಗ್ಗೆ ನಿರ್ಲಕ್ಷ್ಯ ಧೋರಣೆ ಮುಂದುವರೆದಿದೆ. ದಕ್ಷಿಣ ಕರ್ನಾಟಕಕ್ಕೆ ನೀಡುವ ಆದ್ಯತೆಯನ್ನು ಉತ್ತರ ಕರ್ನಾಟಕಕ್ಕೂ ನೀಡಬೇಕು. ಆಡಳಿತ ನಡೆಸುವವರ ನಿರ್ಲಕ್ಷ್ಯದಿಂದಾಗಿ ಪ್ರತ್ಯೇಕ ರಾಜ್ಯದ ಕೂಗು ಕೇಳಿ ಬರುತ್ತಿದೆ. ರಾಜ್ಯಕ್ಕೆ ಬರುವ ಆದಾಯ ಸಮನಾಗಿ ಹಂಚಿಕೆಯಾಗಬೇಕು. ಎಲ್ಲ ಭಾಗದವರಿಗೆ ನ್ಯಾಯ ಸಿಗಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.