ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭಾ ಚುನಾವಣೆ | ಅಭ್ಯರ್ಥಿಗಳ, ನಾಯಕರ ಹೃದಯ ಬಡಿತ ಜೋರು

ಮತ ಎಣಿಕೆಗೆ 24 ಗಂಟೆಗಳಷ್ಟೇ ಬಾಕಿ
Published 3 ಜೂನ್ 2024, 5:22 IST
Last Updated 3 ಜೂನ್ 2024, 5:22 IST
ಅಕ್ಷರ ಗಾತ್ರ

ಬಾಗಲಕೋಟೆ: ಲೋಕಸಭಾ ಚುನಾವಣೆಯ ಮತ ಎಣಿಕೆಗೆ ಕೇವಲ ಒಂದು ದಿನ ಉಳಿದಿದೆ. ಗೆಲುವಿನ ಲೆಕ್ಕಾಚಾರ ಹಾಕುತ್ತಿರುವ ಅಭ್ಯರ್ಥಿಗಳ, ಪಕ್ಷಗಳ ನಾಯಕರ, ಕಾರ್ಯಕರ್ತರ, ರಾಜಕೀಯ ಆಸಕ್ತರ ಹೃದಯ ಬಡಿತ ಜೋರಾಗಿದೆ.

ಮತಯಂತ್ರಗಳನ್ನು ಸೇರಿದ್ದ 13 ಲಕ್ಷ ಮತದಾರರ ತೀರ್ಮಾನ ಮಂಗಳವಾರ ಮಧ್ಯಾಹ್ನದ ವೇಳೆಗೆ ಬಹಿರಂಗವಾಗಲಿದೆ. ಅಲ್ಲಿಯವರೆಗೆ ಲೆಕ್ಕಾಚಾರಗಳು ಮುಂದುವriಯುತ್ತಲೇ ಇರುತ್ತವೆ.

ಮತದಾನದ ನಂತರ ಅಭ್ಯರ್ಥಿಗಳು ಗೆಲುವಿನ ಒಂದು ಲೆಕ್ಕ ಹಾಕಿಕೊಂಡು ತಾವೇ ಗೆಲ್ಲುವುದಾಗಿ ಸಮಾಧಾನ ಪಟ್ಟುಕೊಂಡಿದ್ದರು. 7ನೇ ಹಂತದ ಮತದಾನ ಮುಕ್ತಾಯದ ನಂತರ ವಿವಿಧ ಸಂಸ್ಥೆಗಳು ನಡೆಸಿರುವ ಮತಗಟ್ಟೆಗಳ ಸಮೀಕ್ಷೆಗಳು ಹೃದಯ ಬಡಿತವನ್ನು ತೀವ್ರಗೊಳಿಸಿವೆ.

ರಾಜ್ಯದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಬಹಳಷ್ಟು ಸಂಸ್ಥೆಗಳು ಹೇಳಿರುವುದರಿಂದ ಬಿಜೆಪಿ ಅಭ್ಯರ್ಥಿ ಹಾಗೂ ನಾಯಕರು ಸ್ವಲ್ಪ ಸಮಾಧಾನ ತಂದಿದ್ದು, ನಿಟ್ಟುಸಿರು ಬಿಟ್ಟಿದ್ದಾರೆ. ಅದರಲ್ಲೂ ಕೆಲವು ಸಂಸ್ಥೆಗಳು ಬಾಗಲಕೋಟೆಯಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಹೇಳಿರುವುದರಿಂದ ಹಲವು ನಾಯಕರು ಸಾಮಾಜಿಕ ಜಾಣದಲ್ಲಿ ‘ಫಲಿತಾಂಶ ಬಂದಾಗಿದೆ, ಮತ ಎಣಿಕೆಯಷ್ಟೇ ಬಾಕಿ ಉಳಿದಿದೆ’ ಎಂದು ಸಂಭ್ರಮ ಪಡುತ್ತಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಪ್ರಧಾನಿಯಾಗಬೇಕು ಎನ್ನುವ ಅಂಶ, ಮೋದಿಯ ಹವಾ ಮತ್ತೆ ಕೈಹಿಡಿಯಲಿದೆ ಎನ್ನುವುದು ಬಿಜೆಪಿ ನಾಯಕರ ಆತ್ಮವಿಶ್ವಾಸಕ್ಕೆ ಪ್ರಬಲ ಕಾರಣವಾಗಿದೆ. ವಿಧಾನಸಭೆಯಲ್ಲಿ ಸೋತಿದ್ದರೂ ಸಹ ಪ್ರಧಾನಿಗೆ ಮೋದಿ ಜನರ ಆಯ್ಕೆಯಾಗಿದೆ. ಆದ್ದರಿಂದ ಗೆಲುವು ಸಿಗಲಿದೆ. ಐದನೇ ಬಾರಿಗೆ ಪಿ.ಸಿ. ಗದ್ದಿಗೌಡರ ಗೆದ್ದು ಹೊಸ ದಾಖಲೆ ಬರೆಯಲಿದ್ದಾರೆ ಎಂಬುದು ಅವರ ವಿಶ್ವಾಸವಾಗಿದೆ.

ಮತಗಟ್ಟೆ ಸಮೀಕ್ಷೆಗಳನ್ನು ‘ಗ್ಯಾರಂಟಿ’ ಪ್ರಭಾವ ಸುಳ್ಳಾಗಿಸಲಿದೆ. ಮಹಿಳಾ ಮತದಾರರು ಹಿಂದೆಂದಿಗಿಂತ ಹೆಚ್ಚಿನ ಒಲವನ್ನು ಕಾಂಗ್ರೆಸ್‌ನಡೆಗೆ ತೋರಿಸಿದ್ದಾರೆ ಎಂಬುದು  ಎಂಬುದು ಕಾಂಗ್ರೆಸ್‌ ನಾಯಕರ ಲೆಕ್ಕಾಚಾರ. ಸತತ ನಾಲ್ಕು ಸೋಲುಗಳ ಸುಳಿಯಿಂದ ಈ ಬಾರಿ ಹೊರಬರಲಿದ್ದೇವೆ ಎಂಬುದು ಅವರ ಅನಿಸಿಕೆ.

ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಐವರು ಶಾಸಕರಿದ್ದರು. ಆರಂಭದಲ್ಲಿ ಅಪಸ್ವರಗಳಿದ್ದರೂ, ಕೊನೆಯಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಿದ್ದೇವೆ. ಸಚಿವ ಶಿವಾನಂದ ಪಾಟೀಲ, ತಮ್ಮ ಪುತ್ರಿ ಸಂಯುಕ್ತಾ ಪಾಟೀಲ ಗೆಲುವಿಗೆ ತಮ್ಮ ರಾಜಕೀಯ ಅನುಭವ ಧಾರೆ ಎರೆದಿದ್ದಾರೆ. ಇದು ಗೆಲುವಿನ ದಡ ಸೇರಿಸಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಕ್ಷೇತ್ರಯ ವ್ಯಾಪ್ತಿಯ ಮತಗಟ್ಟೆ, ವಿಧಾನಸಭಾವಾರು ಲೆಕ್ಕಚಾರ ಹಾಕಿ ಗೆಲುವು ತಮ್ಮದೇ ಎನ್ನುವುದು ಎರಡೂ ಪಕ್ಷಗಳ ನಾಯಕರ ಅಭಿಪ್ರಾಯವಾಗಿದೆ. ಅದಕ್ಕೆ ಇನ್ನೂ 24 ಗಂಟೆಗಳಷ್ಟೇ ಕಾಯಬೇಕಿದೆ.

ಸಂಯುಕ್ತಾ ಪಾಟೀಲ
ಸಂಯುಕ್ತಾ ಪಾಟೀಲ

ಗೆಲುವಿನ ಚರ್ಚೆ ಮತ್ತೆ ತೀವ್ರ ಮತಗಟ್ಟೆ ಸಮೀಕ್ಷೆ ಬಗ್ಗೆ ವಿಭಿನ್ನ ವ್ಯಾಖ್ಯಾನ ಮತ ಎಣಿಕೆಗೆ ದಿನವಷ್ಟೇ ಬಾಕಿ

ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ 2 ಲಕ್ಷಕ್ಕೂ ಹೆಚ್ಚು ಮತಗಳಿಂದ ಐದನೇ ಬಾರಿಗೆ ಗೆಲುವು ಸಾಧಿಸಲಿದ್ದಾರೆ. ಕ್ಷೇತ್ರದ ಜನತೆ ಮೋದಿ ಕೈ ಬಲಪಡಿಸಲಿದ್ದಾರೆ
ಶಾಂತಗೌಡ ಪಾಟೀಲ ಅಧ್ಯಕ್ಷ ಜಿಲ್ಲಾ ಘಟಕ ಬಿಜೆಪಿ
ಗ್ಯಾರಂಟಿ ಯೋಜನೆಗಳು ಕೈ ಹಿಡಿಯಲಿದ್ದು 20 ಸಾವಿರಕ್ಕೂ ಹೆಚ್ಚುಮತಗಳಿಂದ ಕಾಂಗ್ರೆಸ್‌ಗೆ ಗೆಲುವು ಸಾಧಿಸಲಿದೆ. ರಾಜ್ಯ ಸರ್ಕಾರದ ಆಡಳಿತ ಜನರಿಗೆ ಮೆಚ್ಚುಗೆಯಾಗಿದೆ
ಎಸ್‌.ಜಿ. ನಂಜಯ್ಯನಮಠ ಅಧ್ಯಕ್ಷ ಜಿಲ್ಲಾ ಘಟಕ ಕಾಂಗ್ರೆಸ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT