ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ | ಮೋದಿ ನೋಡಲು ಬಂದಿದ್ದ ವ್ಯಕ್ತಿ ಸಾವು!

Published 1 ಮೇ 2024, 15:33 IST
Last Updated 1 ಮೇ 2024, 15:33 IST
ಅಕ್ಷರ ಗಾತ್ರ

ಬಾಗಲಕೋಟೆ: ಲೋಕಸಭಾ ಚುನಾವಣಾ ಪ್ರಚಾರಕ್ಕೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ನೋಡಲು ಬಂದಿದ್ದ ವ್ಯಕ್ತಿಯೊಬ್ಬರು ಮೃತರಾಗಿರುವ ವಿಷಯ ವಿಳಂಬವಾಗಿ ಗೊತ್ತಾಗಿದೆ.

ವಿಜಯಪುರ ಜಿಲ್ಲೆಯ ನಿಡಗುಂದಿ ತಾಲ್ಲೂಕಿನ ಹೆಬ್ಬಾಳ ಗ್ರಾಮದ ಶ್ರೀಶೈಲ ದೇಸಾಯಿ (45) ಮೃತರು. ಸೋಮವಾರ ನಗರದಲ್ಲಿ ವಿಜಯ ಸಂಕಲ್ಪ ಸಮಾವೇಶ ನಡೆದಿತ್ತು.

ಮಂಗಳವಾರ ಹಂದಿಗಳು ಶವವನ್ನು ಎಳೆದಾಡಿವೆ. ಶವ ನೋಡಿದ ಸ್ಥಳೀಕರು ಮಾಹಿತಿ ನೀಡಿದ ಮೇಲೆ ವ್ಯಕ್ತಿ ಮೃತನಾಗಿರುವುದು ಗೊತ್ತಾಗಿದೆ. ಬಾಗಲಕೋಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

‘ಹೆಬ್ಬಾಳದಿಂದ ಸ್ನೇಹಿತರೊಂದಿಗೆ ವಾಹನದಲ್ಲಿ ಬಂದಿದ್ದ ಅವರಿಗೆ ಎರಡು ದಿನಗಳಿಂದ ಆರೋಗ್ಯ ಸರಿ ಇರಲಿಲ್ಲ. ವಾಹನ ನಿಲುಗಡೆ ಮಾಡುವಲ್ಲಿಯೇ ನನಗೆ ಸುಸ್ತಾಗಿದೆ. ನೀವೇ ಹೋಗಿ ಬನ್ನಿ ಎಂದು ಸ್ನೇಹಿತರನ್ನು ಕಳುಹಿಸಿದ್ದರು. ಸಮಾವೇಶ ಮುಗಿದ ಮೇಲೆ ಸ್ನೇಹಿತರು ಫೋನ್‌ ಮಾಡಿದಾಗ ವ್ಯಾಟರ್ ಟ್ಯಾಂಕ್ ಬಳಿ ಇರುವುದಾಗಿ ಹೇಳಿದ್ದರು. ಹುಡುಕಾಡಿದಾಗ ಸಿಕ್ಕಿರಲಿಲ್ಲ. ಬಸ್‌ಗೆ ಬರುವಂತೆ ತಿಳಿಸಿ ಸ್ನೇಹಿತರು ಹೊರಟಿದ್ದರು’ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಅಮರನಾಥ ರೆಡ್ಡಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT