ಬಾಗಲಕೋಟೆ: ಕಾರ್ಯಕರ್ತರು ಗೊಂದಲಕ್ಕೆ ಒಳಗಾಗಬೇಕಿಲ್ಲ ಎಂದು ಶಾಸಕರಾಗಿದ್ದ ಎಚ್.ವೈ. ಮೇಟಿ ಅವರ ಪುತ್ರರಿಬ್ಬರೂ ಸಂದೇಶ ನೀಡಿದ ಬೆನ್ನಲ್ಲೇ ಮೇಟಿ ಅವರ ಪುತ್ರಿ ಮಹಾದೇವಿ ಹುಲ್ಲಪ್ಪ ಮೇಟಿ ಅಭಿಮಾನಿಗಳು ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾಗುತ್ತಿರುವ ಸಂದೇಶಗಳು ಹೊಸ ಚರ್ಚೆಗೆ ನಾಂದಿ ಹಾಡಿವೆ.

ಶಾಸಕರಾಗಿದ್ದ ಎಚ್.ವೈ. ಮೇಟಿ ಅವರ ನಿಧನದಿಂದ ಉಪಚುನಾವಣೆಯ ಸಿದ್ಧತೆಗಳನ್ನು ಚುನಾವಣಾ ಆಯೋಗ ಭರದಿಂದ ನಡೆಸಿದೆ. ಕಾಂಗ್ರೆಸ್ನಿಂದ ಮೇಟಿ ಕುಟುಂಬದಲ್ಲಿಯೇ ಪುತ್ರರಾದ ಮಲ್ಲಿಕಾರ್ಜು, ಉಮೇಶ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಬಾಯಕ್ಕ ಮೇಟಿ ಪೈಕಿ ಮೂವರಲ್ಲಿ ಒಬ್ಬರು ಸ್ಪರ್ಧಿಸಬಹುದು ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಸಾಮಾಜಿಕ ಜಾಲತಾಣದ ಸಂದೇಶಗಳನ್ನು ಓದಿದಾಗ ನಾಲ್ಕನೇಯವರು ಸಜ್ಜಾಗಿರುವಂತಿದೆ.

ಮೇಟಿ ಕುಟುಂಬದ ಇಬ್ಬರು ಪುತ್ರರಲ್ಲಿ ಒಬ್ಬರಿಗೆ ಟಿಕೆಟ್ ನೀಡಬೇಕು ಎನ್ನುವುದು ಕಾಂಗ್ರೆಸ್ಸಿನ ಬಹುತೇಕ ಮುಖಂಡರ ಅಪೇಕ್ಷೆಯಾಗಿದೆ. ಇತ್ತೀಚೆಗೆ ಸಚಿವ ಸತೀಶ ಜಾರಕಿಹೊಳಿ ಅವರ ಮುಂದೆಯೂ ಮೇಟಿ ಕುಟುಂಬದವರಿಗೆ ಟಿಕೆಟ್ ನೀಡಬೇಕು ಎಂಬ ಒತ್ತಾಯ ಕೇಳಿ ಬಂದಿತ್ತು. ಆದರೆ, ಕುಟುಂಬದ ಸದಸ್ಯರ ನಡುವೆಯೇ ಪೈಪೋಟಿ ಏರ್ಪಟಿದೆಯಾ ಎಂಬ ಅನುಮಾನ ಮೂಡುತ್ತಿದೆ.

ಮೇಟಿ ಅವರ ಪುತ್ರರಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎಂದು ಸರ್ವೆಯೊಂದು ಪಕ್ಷದಿಂದ ನಡೆದಿದೆ. ಅದರ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆಯಾಗುವ ಮುನ್ನವೇ ಮತ್ತೊಬ್ಬರು ಆಕಾಂಕ್ಷಿಯಾಗಿ ಮುಂದೆ ಬಂದಿದ್ದಾರೆ.

‘ಗುಳೇದಗುಡ್ಡದ ವ್ಯಕ್ತಿಯ ಹಸ್ತಕ್ಷೇಪವಿಲ್ಲದೇ ನಾನು ನನ್ನ ಕ್ಷೇತ್ರದ ಜನರಿಗಾಗಿ ಕೆಲಸ ಮಾಡುತ್ತೇನೆ. ನನ್ನ ರಾಜಕೀಯಕ್ಕೆ ಗುಳೇದಗುಡ್ಡದ ಅವಲಂಬನೆ ಇಲ್ಲ. ಬಾಗಲಕೋಟೆ ಜನರೇ ನನ್ನ ಶಕ್ತಿ’ ಎಂಬ ಪೋಸ್ಟ್ನ್ನು ಹಾಕಲಾಗಿದ್ದು, ಅದರಲ್ಲಿ ಮೇಟಿ ಹಾಗೂ ಅವರ ಪುತ್ರಿ ಮಹಾದೇವಿ ಮೇಟಿ ಅವರ ಭಾವಚಿತ್ರ ಹಾಕಲಾಗಿದೆ.

‘ಕ್ಷೇತ್ರ ಜನರಿಗಾಗಿ ಸಂಪೂರ್ಣ ಮನಸ್ಸಿನಿಂದ ದೃಢ ನಿಷ್ಠೆ, ಪ್ರಾಮಾಣಿಕತೆಯಿಂದ ಆಡಳಿತ ನೀಡುವ ಸಂಕಲ್ಪ ನನ್ನದು’ ಎಂದಿರುವುದು ಹಲವು ಚರ್ಚೆಗಳಿಗೆ ಕಾರಣವಾಗಿದೆ.

ಮೇಟಿ ಪುತ್ರರ ನಡುವೆ ಟಿಕೆಟ್ ಯಾರಿಗೆ ಎಂಬ ಚರ್ಚೆ ನಡೆದಾಗ ಪ್ರಕಟಣೆ ಮೂಲಕ ‘ನಮ್ಮ ತಂದೆ ಎಚ್.ವೈ. ಮೇಟಿ ಅವರ ನಿಧನದ ನೋವಿನಲ್ಲಿ ಇಡೀ ಕುಟುಂಬ ಹಾಗೂ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಇದ್ದೇವೆ. ಉಪಚುನಾವಣೆಯಲ್ಲಿ ಯಾರಿಗೆ ಟಿಕೆಟ್ ಎಂಬ ವಿಚಾರ ಮಾಡಿಲ್ಲ. ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ಮೇಟಿ ಕುಟುಂಬ ಬದ್ಧವಾಗಿದೆ. ಕಾರ್ಯಕರ್ತರು ಗೊಂದಲ ಮಾಡಿಕೊಳ್ಳುವುದು ಬೇಡ’ ಎಂದಿದ್ದರು.

‘ಉಪಚುನಾವಣೆಯಲ್ಲಿ ಟಿಕೆಟ್ ನೀಡುವ ನಿಟ್ಟಿನಲ್ಲಿ ಕಾರ್ಯಕರ್ತರ ಅಭಿಲಾಷೆ, ಪಕ್ಷದ ಹೈಕಮಾಂಡ್ ನಿರ್ಧಾರವೇ ಅಂತಿಮ. ಅವರೆಲ್ಲರ ನಿರ್ಧಾರದಂತೆ ಇಡೀ ಮೇಟಿ ಕುಟುಂಬ ನಡೆದುಕೊಳ್ಳುತ್ತದೆ. ‘ನಮ್ಮ ಕುಟುಂಬದಲ್ಲಿ ಯಾವುದೇ ಗೊಂದಲ ಅಥವಾ ಭಿನ್ನಾಭಿಪ್ರಾಯವಿಲ್ಲ’ ಎಂದಿದ್ದರು. ಅದರ ಬೆನ್ನಲ್ಲೇ ನಾಲ್ಕೈದು ದಿನಗಳಲ್ಲಿ ಪೋಸ್ಟ್ಗಳನ್ನು ಹಾಕಲಾಗುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಲಾಗುತ್ತಿದ್ದರೂ ಮೇಟಿ ಕುಟುಂಬದವರನ್ನು ಇದರ ಬಗ್ಗೆ ಮಾತನಾಡದಿರುವುದು ಎಲ್ಲವೂ ಸರಿಯಿಲ್ಲವೇ ಎಂಬ ಚರ್ಚೆ ಮುನ್ನಲೆಗೆ ಬಂದಿದೆ.