ಮಹಾಲಿಂಗಪುರ: ಪಟ್ಟಣದ ವಿವಿಧೆಡೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಆರಂಭಿಸಿರುವ ಉದ್ಯಾನಗಳು ಸಮರ್ಪಕ ನಿರ್ವಹಣೆ ಇಲ್ಲದೆ ಪಾಳು ಬಿದ್ದಿದ್ದು, ಕುಡುಕರ ಆಶ್ರಯ ತಾಣವಾಗಿ ಮಾರ್ಪಟ್ಟಿವೆ.

ಮಹಾಂತೇಶ ನಗರ, ರಬಕವಿ ರಸ್ತೆ, ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದ ಬಳಿ ತಲಾ ಒಂದು ಹಾಗೂ ಶಾಂತಿನಿಕೇತನ ಕಾಲೋನಿಯಲ್ಲಿ ಎರಡು ಉದ್ಯಾನಗಳಿದ್ದು, ಒಂದೊಂದು ಉದ್ಯಾನದ್ದು ಒಂದೊಂದು ರೀತಿಯ ಅವ್ಯವಸ್ಥೆಗಳು ಗೋಚರಿಸುತ್ತವೆ. ಜಯನಗರ ಬಡಾವಣೆಯಲ್ಲಿ ಉದ್ಯಾನಕ್ಕೆ ಜಾಗ ಮೀಸಲಿಟ್ಟು ಹತ್ತು ವರ್ಷವಾದರೂ ಆರಂಭವಾಗಿಲ್ಲ.

ಆಸನಗಳೇ ಇಲ್ಲ: ರಬಕವಿ ರಸ್ತೆಯಲ್ಲಿ 2008ರಲ್ಲಿ ಆರಂಭಿಸಿರುವ ಸಾರ್ವಜನಿಕ ಉದ್ಯಾನದಲ್ಲಿ ಕುಳಿತುಕೊಳ್ಳಲು ಆಸನಗಳೇ ಇಲ್ಲ. 24 ವಿದ್ಯುತ್ ದೀಪಗಳನ್ನು ಅಳವಡಿಸಿದ್ದು, ಎಲ್ಲವೂ ಸ್ಥಗಿತಗೊಂಡಿವೆ. ರಾತ್ರಿಯಾದರೆ ಸಾಕು ಕತ್ತಲು ಪ್ರದೇಶವಾಗಿ ಗೋಚರಿಸುತ್ತದೆ. ಉದ್ಯಾನದ ಕಂಪೌಂಡ್ಗಳನ್ನು ಪಕ್ಕದ ಮನೆಯವರು ಬಟ್ಟೆ ಒಣಗಿಸಲು ಬಳಕೆ ಮಾಡುತ್ತಿದ್ದಾರೆ. ಇರುವ ಐದಾರು ಸಲಕರಣೆಗಳು ಸಹ ಉಪಯೋಗಕ್ಕೆ ಬರದಂತಾಗಿವೆ. ಇರುವ ಕಾರಂಜಿಯೂ ಹಾಳಾಗಿದೆ. ಕುಡುಕರ ತಾಣವಾಗಿ ಗೋಚರಿಸುತ್ತದೆ.

ಹಾಳಾದ ಸಲಕರಣೆಗಳು: ಸಿದ್ದಾರೂಢ ಬ್ರಹ್ಮವಿದ್ಯಾಶ್ರಮದ ಬಳಿ 2016ರಲ್ಲಿ ‘ಸ್ವಾಮಿ ವಿವೇಕಾನಂದ ಚಿಣ್ಣರ ಉದ್ಯಾನ’ ಉದ್ಘಾಟನೆಗೊಂಡಿದೆ. ಹೆಸರಿಗೆ ತಕ್ಕಂತೆ ಮಕ್ಕಳಿಗೆ ಆಟವಾಡಲು ಸಲಕರಣೆ ಇರಿಸಲಾಗಿದೆಯಾದರೂ ಎಲ್ಲವೂ ಹಾಳಾಗಿವೆ. ಸಲಕರಣೆಗಳಿಗೆ ಗಿಡಗಂಟಿಗಳು ಬೆಳೆದು ನಿಂತಿವೆ. ಬೀದಿ ನಾಯಿಗಳ ವಾಸಸ್ಥಾನವಾಗಿ ಉದ್ಯಾನ ಮಾರ್ಪಟ್ಟಿದೆ. ನೀರಿನ ಕಾರಂಜಿಯ ನಿಂತ ಕಲುಷಿತ ನೀರು, ಕಸ, ಪ್ಲಾಸ್ಟಿಕ್ ಬಾಟಲಿಗಳು ತೇಲಾಡುತ್ತಿವೆ. ಕುಳಿತುಕೊಳ್ಳಲು ಸರಿಯಾದ ಆಸನಗಳೇ ಇಲ್ಲ. 20 ವಿದ್ಯುತ್ ದೀಪಗಳಿದ್ದರೂ ಹೆಸರಿಗೆ ಮಾತ್ರ ಎಂಬಂತಾಗಿದೆ. ಬಹುತೇಕ ದೀಪಗಳು ಕಿತ್ತುಹೋಗಿವೆ. ನಡಿಗೆ ಪಥದ ಇಂಟರ್ಲಾಕ್ ಟೈಲ್ಸ್ ಸುತ್ತ ಗಿಡಗಂಟಿಗಳು ಬೆಳೆದಿವೆ.

ಕುರುಹುಗಳೇ ಇಲ್ಲ: ಜಯನಗರ ಬಡಾವಣೆಯಲ್ಲಿ ಹತ್ತು ವರ್ಷದ ಹಿಂದೆ ಉದ್ಯಾನ ಆರಂಭಕ್ಕೆ ಜಾಗ ಬಿಡಲಾಗಿದೆ. ಆದರೆ, ಉದ್ಯಾನವಿರುವ ಯಾವೊಂದು ಕುರುಹುಗಳೂ ಇಲ್ಲ. ಕಸಕಡ್ಡಿಗಳು ಬೆಳೆದುನಿಂತಿವೆ. ನಿಷ್ಪ್ರಯೋಜಕ ವಸ್ತುಗಳನ್ನು ಎಸೆಯಲಾಗಿದೆ.

ಪಾರ್ಕಿಂಗ್ ಸ್ಥಳವಾದ ಉದ್ಯಾನ

ಮಹಾಂತೇಶ ನಗರದಲ್ಲಿರುವ ಉದ್ಯಾನ ವಾಹನಗಳ ಪಾರ್ಕಿಂಗ್ ಸ್ಥಳವಾಗಿ ಮಾರ್ಪಡಾಗಿದೆ. ಉದ್ಯಾನದಲ್ಲಿ ಅಳವಡಿಸಿರುವ ಸಲಕರಣೆಗಳು ಹಾಳಾಗಿವೆ. ಇದರ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 2017-18ನೇ ಸಾಲಿನ ಸಾಮಾನ್ಯ ಯೋಜನೆಯಡಿ ಸಾಂಸ್ಕೃತಿಕ ಭವನ ನಿರ್ಮಿಸಲಾಗಿದೆ. ಅದಕ್ಕೆ ಪತ್ರಾಸ್ ಶೆಟರ್ ಹಾಕಲಾಗಿದೆ. ಇದಕ್ಕೆ ಅಂಟಿಕೊಂಡಂತೆ ಶುದ್ಧ ನೀರಿನ ಘಟಕ ಸ್ಥಾಪಿಸಲಾಗಿದೆ. ಸಮರ್ಪಕ ಬೆಳಕಿನ ವ್ಯವಸ್ಥೆಯೂ ಇಲ್ಲಿಲ್ಲ.

ತುಂಬಿಕೊಂಡ ಕಸ: ಶಾಂತಿನಿಕೇತನ ಕಾಲೋನಿಯಲ್ಲಿ ಆರಂಭಿಸಿರುವ ಉದ್ಯಾನವೂ ಪಾಳು ಬಿದ್ದಿದೆ. ಕುಳಿತುಕೊಳ್ಳಲು ಇರುವ ಆಸನಗಳಲ್ಲಿ ಕಸ ತುಂಬಿಕೊಂಡಿದೆ. ಹೆಸರಿಗಷ್ಟೇ ಉದ್ಯಾನವಾಗಿ ಗೋಚರಿಸುತ್ತದೆ. ಯಾವುದೇ ಸಲಕರಣೆಗಳು ಇಲ್ಲಿಲ್ಲ.

ಕಿತ್ತುಹೋದ ಗೇಟ್: ಶಾಂತಿನಿಕೇತನ ಕಾಲೋನಿಯ ವೈದ್ಯರ ಸಭಾಭವನದ ಬಳಿ 2021ರಲ್ಲಿ ₹7 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಉದ್ಯಾನದಲ್ಲಿ ಅಳವಡಿಸಿರುವ ಸಲಕರಣೆಗಳಲ್ಲಿ ಕೆಲವು ಹಾಳಾಗಿವೆ. ಕುಳಿತುಕೊಳ್ಳಲು ಇರುವ ಎರಡು ಸಿಮೆಂಟ್ ಬೆಂಚುಗಳು ಮುರಿದಿವೆ. ಗೇಟ್ ಕಿತ್ತುಹೋಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.