ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜಮಖಂಡಿ: ಚಾವಣಿ ಕುಸಿದು ವ್ಯಕ್ತಿ ಸಾವು

Published 13 ಜೂನ್ 2024, 13:19 IST
Last Updated 13 ಜೂನ್ 2024, 13:19 IST
ಅಕ್ಷರ ಗಾತ್ರ

ಜಮಖಂಡಿ: ರಾತ್ರಿ ಮಲಗಿದಾಗ ಮಳೆಯಿಂದ ನೆನೆದ ಚಾವಣಿ ಕುಸಿದು ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಬುಧವಾರ ತಡರಾತ್ರಿ ನಡೆದಿದೆ.

ನಗರದ ಮೊಮಿನಗಲ್ಲಿಯ ಮುಸ್ತಾಕ ಮಕಬುಲ ಮೊಮಿನ (42) ಮೃತಪಟ್ಟವರು. ಒಂದು ವಾರದಿಂದ ನಗರದಲ್ಲಿ ಆಗಾಗ ಮಳೆಯಾಗುತ್ತಿದ್ದು, ಹಲವು ಕಡೆ ಮನೆಗಳು ಸೋರುತ್ತಿವೆ. ಇವರ ಮನೆಯೂ ಅಲ್ಪ ಸ್ವಲ್ಪ ಸೋರುತ್ತಿದ್ದ ಕಾರಣ ಪತ್ನಿ ಹಾಗೂ ಮಕ್ಕಳು ಬೇರೆ ಕಡೆ ಮಲಗಿದ್ದರು. ಆದರೆ ಮುಸ್ತಾಕ ಮನೆಯಲ್ಲೇ ಮಲಗಿದ್ದರು.

ಬೆಳಿಗ್ಗೆ ಮುಸ್ತಾಕ ತಡವಾದರೂ ಬಾಗಿಲು ತೆಗೆಯದಿರುವದನ್ನು ಗಮನಿಸಿ ಪತ್ನಿ ಬಾಗಿಲು ಬಡಿದರು. ಮೇಲಿಂದ ಮಣ್ಣು ಬಿದ್ದಿರುವುದನ್ನು ಗಮನಿಸಿ ಸ್ಥಳೀಯರನ್ನು ಕರೆದು ಬಾಗಿಲು ತೆಗೆಸಿದಾಗ ಮೃತಪಟ್ಟಿರುವುದು ಕಂಡು ಬಂತು. ಇವರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ.

ಸ್ಥಳಕ್ಕೆ ತಹಶೀಲ್ದಾರ್‌ ಸದಾಶಿವ ಮಕ್ಕೋಜಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತರ ಕುಟುಂಬಕ್ಕೆ ಸರ್ಕಾರದಿಂದ ಸಿಗುವ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT