ಬಾಗಲಕೋಟೆ: ಬಾಗಲಕೋಟೆ ವಿಧಾನಸಭಾ ಕ್ಷೇತದ ಜನರು ಶಾಶ್ವತ ನೆನಪಿಡುವಂಥ ಕೆಲಸ ಮಾಡಿ ಅವರ ಋಣ ತೀರಿಸುವ ಕೆಲಸ ಮಾಡುವೆ ಎಂದು ಶಾಸಕ ಎಚ್.ವೈ. ಮೇಟಿ ಹೇಳಿದರು.

ನವನಗರದ ಸೆಕ್ಟರ್ ನಂ.10ರಲ್ಲಿ ಬಿಟಿಡಿಎದಿಂದ ಕೈಗೆತ್ತಿಕೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಮತದಾರರ ಋಣ ತೀರಿಸಲು ಆಗಲ್ಲ. ಆದರೂ, ಕ್ಷೇತ್ರದಲ್ಲಿ ಶಾಶ್ವತ ಅಭಿವೃದ್ಧಿ ಕಾರ್ಯ ಮಾಡುವ ಮೂಲಕ ಅವರ ನೆನಪಿನಲ್ಲಿರುವಂತಹ ಕೆಲಸ ಮಾಡುವೆ. ಕ್ಷೇತ್ರದಲ್ಲಿ ಶೀಘ್ರವೇ ₹100 ಕೋಟಿಗೂ ಅಧಿಕ ಮೊತ್ತದ ಯೋಜನೆಗಳಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ಕೊಳವೆಬಾವಿ ಮತ್ತು ಪೆರಿಫೆರಲ್ ಆರ್ಸಿಸಿ ಚರಂಡಿ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಲಾಗಿದೆ. ಕಳಪೆ ಕಾಮಗಾರಿ ನಡೆಸಿದರೆ, ಗುತ್ತಿಗೆದಾರರು ಹಾಗೂ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸೆಕ್ಟರ್ ನಂ.10ರಲ್ಲಿ ಕೊರೆಸಿದ ಕೊಳವೆಬಾವಿಯಿಂದ ಸರಿಯಾದ ನೀರು ಪೂರೈಕೆ ಆಗದಿರುವ ಹಾಗೂ ನಲ್ಲಿ ನೀರು ಪೂರೈಕೆ ಕುರಿತು ನಿವಾಸಿಗಳು ಮನವಿ ಸಲ್ಲಿಸಿದ ಕಾರಣ ಎರಡು ದಿನಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಬಿಟಿಡಿಎ ಅಧಿಕಾರಿಗಳಿಗೆ ಸೂಚಿಸಿದರು.

5.98 ಕೋಟಿ ಕಾಮಗಾರಿಗೆ ಚಾಲನೆ:

ಬಿಟಿಡಿಎ ಉಪ ವಿಭಾಗ-2ರ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್ ಆರ್.ಬಿ. ವಟವಟಿ ಮಾತನಾಡಿ, ನವನಗರ ಯುನಿಟ್-1ರ ಸೆಕ್ಟರ್ ನಂ.8, 10, 12, 14, 54 ಹಾಗೂ 55ರಲ್ಲಿ, ಯುನಿಟ್-2ರ ಸೆಕ್ಟರ್ ನಂ.64, 72, 88, 92 ಹಾಗೂ 110ರಲ್ಲಿ ತಲಾ ಒಂದು ಹೊಸ ಕೊಳವೆಬಾವಿ ಕೊರೆಯಿಸಿ, ಉದ್ಯಾನ, ಶಾಲೆ ಹಾಗೂ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು. ಇದಕ್ಕಾಗಿ ₹1.03 ಕೋಟಿ ಅನುದಾನ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.

ನವನಗರ ಯುನಿಟ್-1ರ ಸೆಕ್ಟರ್ ನಂ.8, 10, 12 ಹಾಗೂ 14ರಲ್ಲಿ ಫೆರಿಫೆರಲ್ ರಸ್ತೆಗೆ ಆರ್ಸಿಸಿ ಬದಿ ಚರಂಡಿ ನಿರ್ಮಾಣಕ್ಕೆ ₹4.95 ಕೋಟಿ ಅನುದಾನ ನಿಗದಿಪಡಿಸಲಾಗಿದೆ ಎಂದು ಹೇಳಿದರು.

ನಗರಸಭೆ ಅಧ್ಯಕ್ಷೆ ಸವಿತಾ ಲೆಂಕೆಣ್ಣವರ, ಬಿಟಿಡಿಎ ಎಸ್ಇ ಎಸ್.ಎಸ್. ಡೊಳ್ಳಿ, ವಿಭಾಗ-1ರ ಇಇ ಸೋಮಲಿಂಗ ನೋಟಗಾರ, ಎಇಇಗಳಾದ ಎಸ್.ಆರ್. ತೆಗ್ಗಿ, ಪ್ರಶಾಂತ ಲೋಕಾಪುರ, ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾ ಅಧ್ಯಕ್ಷ ನಾಗರಾಜ ಹದ್ಲಿ, ನಗರ ಬ್ಲಾಕ್ ಅಧ್ಯಕ್ಷ ರಜಾಕ ಬೇಣ್ಣೂರ, ಗ್ರಾಮೀಣ ಬ್ಲಾಕ್ ಅಧ್ಯಕ್ಷ ಎಸ್.ಎನ್. ರಾಂಪುರ, ನಗರಸಭೆ ಮಾಜಿ ಸದಸ್ಯ ಹನಮಂತ ರಾಕುಂಪಿ, ರಾಜು ಹುಲ್ಯಾಳ, ಶಂಕರ ತಪಶೆಟ್ಟಿ ಉಪಸ್ಥಿತರಿದ್ದರು.

ಹೊಸ ಕೊಳವೆಬಾವಿ ಮಂಜೂರು ಚರಂಡಿ ನಿರ್ಮಾಣ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಕ್ರಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.