ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಯಾವುದೇ ಪಕ್ಷಕ್ಕೆ ಮತಹಾಕಿ; ಹಿಂದುಗಳೆಲ್ಲ ಒಂದಾಗಿ’

ಹಿಂದೂಪರ ಸಂಘಟನೆಗಳ ಪ್ತತಿಭಟನೆ
Published : 24 ಸೆಪ್ಟೆಂಬರ್ 2024, 15:45 IST
Last Updated : 24 ಸೆಪ್ಟೆಂಬರ್ 2024, 15:45 IST
ಫಾಲೋ ಮಾಡಿ
Comments

ಮುಧೋಳ: ‘ಹಿಂದೂ ಸಂಘಟನೆಗಳು ಯಾವುದೇ ರಾಜಕೀಯ ಪಕ್ಷ ಹಾಗೂ ರಾಜಕಾರಣಿಗಳನ್ನು ನಂಬುವುದಿಲ್ಲ. ನೀವು ಯಾವ ಪಕ್ಷಕ್ಕಾದರೂ ಮತ ಚಲಾಯಿಸಿ, ಆದರೆ ಹಿಂದುತ್ವಕ್ಕೆ ಅನ್ಯಾಯವಾದಾಗ ಸಂಘಟಿತರಾಗಿ, ದೇಶದ್ರೋಹಿಗಳಿಗೆ ತಕ್ಕ ಉತ್ತರ ನೀಡಲು ಸನ್ನದ್ಧರಾಗಿ’ ಎಂದು ಧರ್ಮ ಜಾಗಣರ ಪ್ರಾಂತ ಮುಖಂಡ ಹನಮಂತ ಮಳಲಿ ಹೇಳಿದರು.

ನಗರದ ಶಿವಾಜಿ ಮಹಾರಾಜ ವೃತ್ತದಲ್ಲಿ ತಾಲ್ಲೂಕಿನ ಆರ್.ಎಸ್.ಎಸ್, ಹಿಂದೂ ಜಾಗಣರ ವೇದಿಕೆ, ವಿಶ್ವ ಹಿಂದೂ ಪರಿಷತ್, ಭಜರಂಗದಳ, ವೀರಸಾವರ್ಕರ ಸಂಘಟನೆ ಹಾಗೂ ಬಿಜೆಪಿ ಕಾರ್ಯಕರ್ತರು ನಗರದಲ್ಲಿ, ಮುಸ್ಲಿಂ ಸಮಾಜದವರು ಈಚೆಗೆ ನಡೆಸಿದ ಪ್ರತಿಭಟನೆಯಲ್ಲಿ ಶಾಸಕ ಯತ್ನಾಳ ಅವರಿಗೆ ಅವಾಚ್ಯವಾಗಿ ನಿಂದಿಸಿದ ಬಗ್ಗೆ ಹಾಗೂ ಹಿಂದೂ ಬಾಲಕಿಯ ಮೇಲೆ ಅತ್ಯಾಚಾರ ಎಸಗಲು ಪ್ರಯತ್ನಸಿದ ಮುಸ್ಲಿಂ ಯುವಕರ ಕೃತ್ಯ ಖಂಡಿಸಿ ಮಂಗಳವಾರ ನಡೆದ ಸಭೆಯಲ್ಲಿ ಮಾತನಾಡಿದರು.

‘ಸರ್ಕಾರ ಪೊಲೀಸರನ್ನು ರಾಜಕೀಯಕ್ಕೆ ಅನುಗುಣವಾಗಿ ಬಳಸಿಕೊಳ್ಳಬಾರದು. ಪೊಲೀಸರು ಯಾವುದೋ ಪುಟಗಾಸಿ ರಾಜಕಾರಣಿಯ ಮಾತು ಕೇಳದೇ, ನ್ಯಾಯದ ಪರ ನಿಲ್ಲಬೇಕು’ ಎಂದರು.

‘ಶಾಸಕ ಬಸನಗೌಡ ಪಾಟೀಲರು ಔರಂಗಜೇಬನ ಬಗ್ಗೆ ಮಾತನಾಡಿದ್ರೆ ಇವರಿಗೆ ಹೊಟ್ಟೆ ಉರಿ, ಹಿಂದೂ ಸಮಾಜದ ದೇವಾಲಯಗಳನ್ನು ನಾಶ ಮಾಡಿದ್ದರ ಬಗ್ಗೆ ಯತ್ನಾಳ ಮಾತಾಡಿದ್ರೆ ನಿಮಗೆ ಯಾಕೆ ಹೊಟ್ಟೆ ಉರಿ’ ಎಂದು ಪ್ರಶ್ನಿಯಿಸಿದರು.

ಶ್ರೀರಾಮ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಹಾಲಿಂಗಪ್ಪ ಗುಂಜೆಗಾವಿ, ನಗರಸಭೆ ಮಾಜಿ ಅಧ್ಯಕ್ಷ ಗುರುಪಾದ ಕುಳಲಿ ಮಾತನಾಡಿದರು.

ಮುಖಂಡರಾದ ಅನಂತರಾವ ಘೋರ್ಪಡೆ, ಬಸವರಾಜ ಮಹಾಲಿಂಗೇಶ್ವರಮಠ, ಆನಂದ ಬನ್ನೂರ, ಸದಾ ಜಾದವ, ಶಂಕರಗೌಡ ಪಾಟೀಲ, ಪರಶು ನಿಗಡೆ, ಬಸವರಾಜ ಗಣಿ, ಶಿವು ಗುರವ, ಕಾರ್ಯಕರ್ತರು ಭಾಗವಹಿಸಿದ್ದರು.

ಜಡಗಣ್ಣ ಬಾಲಣ್ಣ ವೃತ್ತದಿಂದ ಆರಂಭವಾದ ಪ್ರತಿಭಟನಾ ಮರವಣಿಗೆ ಕಲ್ಮೇಶ್ವರ ವೃತ್ತ, ಮಹಾತ್ಮಗಾಂಧಿ ವೃತ್ತದಿಂದ ಶಿವಾಜಿ ಮಹಾರಾಜ ವೃತ್ತದಲ್ಲಿ ಸಭೆಯಾಗಿ ಮಾರ್ಪಟ್ಟಿತು.

ಮುಧೋಳದ ಛತ್ರಪತಿ ಶಿವಾಜಿ ಮಾಹಾರಾಜ ವೃತ್ತದಲ್ಲಿ ಹಿಂದು ಪರ ಸಂಘಟನೆಗಳು ನಡೆಸಿದ ಸಭೆಯಲ್ಲಿ ಮುಖಂಡ ಹಣಮಂತ ಮಳಲಿ ಮಾತನಾಡಿದರು
ಮುಧೋಳದ ಛತ್ರಪತಿ ಶಿವಾಜಿ ಮಾಹಾರಾಜ ವೃತ್ತದಲ್ಲಿ ಹಿಂದು ಪರ ಸಂಘಟನೆಗಳು ನಡೆಸಿದ ಸಭೆಯಲ್ಲಿ ಮುಖಂಡ ಹಣಮಂತ ಮಳಲಿ ಮಾತನಾಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT