ಗುಳೇದಗುಡ್ಡ: ನಾಡಪ್ರಭು ಎಂದೆ ಹೆಸರುವಾಸಿಯಾದ ಕೆಂಪೇಗೌಡರು ಬೆಂಗಳೂರು ಕಟ್ಟಿದರು. ಜೊತೆಗೆ ನಾಡುಕಟ್ಟುವ ಮನೋಭೂಮಿಕೆಯನ್ನು ನಮಗೆ ಕಲಿಸಿದ್ದಾರೆ. ನಾಡು ಕಟ್ಟುವ, ಸಂಘಟನಾತ್ಮಕವಾದ ಅವರ ಕ್ರೀಯಾಶೀಲತೆ ಎಲ್ಲರಿಗೂ ಅನುಕರಣೀಯವಾಗಿದೆ ಎಂದು ತಹಶೀಲ್ದಾರ್ ಮಹೇಶ ಗಸ್ತೆ ಹೇಳಿದರು.

ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಶುಕ್ರವಾರ ಜರುಗಿದ ಕೆಂಪೇಗೌಡರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಾವೆಲ್ಲೂ ನಾಡನ್ನು ಪ್ರೀತಿಸಬೇಕು. ಅಭಿಮಾನ ಮೂಢಿಸಿಕೊಳ್ಳುವುದರ ಜೊತೆಗೆ ನಾಡಿನ ಅಭಿವೃದ್ಧಿಗೆ ಕಂಕಣಬದ್ದರಾಗಿ ಕೆಲಸಮಾಡಬೇಕಾಗಿದೆ ಎಂದರು.

ಆರಂಭದಲ್ಲಿ ನಾಡಪ್ರಭು ಕೆಂಪೆಗೌಡರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಲಾಯಿತು. ಕಂದಾಯ ನಿರೀಕ್ಷಕ ಶಿವರಾಯಪ್ಪ ಜೋಗಿನ, ಉಪ ತಹಶೀಲ್ದಾರ ಜಿ.ವಿ.ರಜಪೂತ, ಮಲ್ಲಿಕಾರ್ಜುನ ತುಪ್ಪದ ಹಾಗೂ ಕಚೇರಿ ಸಿಬ್ಬಂದಿ ಇದ್ದರು. ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಶುಕ್ರವಾರ ಕೆಂಪೇಗೌಡರ ಜಯಂತಿ ಆಚರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.