ಗುಳೇದಗುಡ್ಡ: ‘ಮನುಷ್ಯನಿಗೆ ಕಣ್ಣು ಕೊಟ್ಟಿರುವುದು ಉತ್ತಮವಾದದ್ದು ನೋಡಲು, ಕಿವಿ ಕೊಟ್ಟಿರುವುದು ಉತ್ತಮವಾದದ್ದನ್ನು ಕೇಳಲು, ಕೈ ಇರುವುದು ಉತ್ತಮ ಕೆಲಸಮಾಡಲು. ಮನುಷ್ಯ ಉತ್ತಮ ಬದುಕನ್ನು, ಸಮಾಜವನ್ನು ಕಟ್ಟಬೇಕೇ ಹೊರತು ನರಕಯಾತನೆ ಪಡಬಾರದು’ ಎಂದು ನಿಜಗುಣಪ್ರಭು ತೋಂಟದಾರ್ಯ ಶ್ರೀ ಹೇಳಿದರು.

ಪಟ್ಟಣದ ಗುರುಸಿದ್ಧೇಶ್ವರ ಬೃಹನ್ಮಠದ ಗುರುಸಿದ್ಧ ಪಟ್ಟದಾರ್ಯ ಶ್ರೀಗಳ 39ನೇ ವಾರ್ಷಿಕ ಪುಣ್ಯಾರಾಧನೆಯ ಅಂಗವಾಗಿ ಏರ್ಪಡಿಸಿರುವ ಮಾಸಿಕ ಪ್ರವಚನದದಲ್ಲಿ ಬುಧವಾರ ಅವರು ಮಾತನಾಡಿದರು.

‘ಅಕ್ಕಮಹಾದೇವಿ ರಾಜ ಕೌಶಿಕನನ್ನು ತೊರೆದು ಕಲ್ಯಾಣಕ್ಕೆ ಬಂದಾಗ ಶರಣ ಸಂಕುಲವೇ ಅವಳನ್ನು ಸ್ವಾಗತಿಸಿತು. ಆಗ ಪ್ರಭುದೇವರು ನೀನು ಯಾರು?, ನಿನ್ನ ಗಂಡನ ಹೆಸರೇನು? ಯಾವ ಕಾರಣಕ್ಕಾಗಿ ಬಂದೆ ಎಂದು ಕೇಳಿದಾಗ, ಅದನ್ನೇ ಅರಿಯಲು ಪ್ರಯತ್ನಿಸುತ್ತಿದ್ದೇನೆ ಎಂದುತ್ತರಿಸಿದರು. ಇದಕ್ಕೆ ಪ್ರಭುದೇವರು ಮಾನವ ಅರಿವಿನ ಪ್ರಯತ್ನದಲ್ಲಿ ಸೋತಿದ್ದಾನೆ. ಅದನ್ನು ಮೀರಿ ಬೆಳೆದವಳು ಮಹಾದೇವಿ ಎಂದಿದ್ದರು’ ಎಂದು ತಿಳಿಸಿದರು.

‘ಸೂರ್ಯನುದಯ ತಾವರೆಗೆ ಜೀವಾಳ, ಚಂದ್ರನುದಯ ನೈದಿಲೆಗೆ ಜೀವಾಳ, ಕೂಪರ ಠಾವಿನಲ್ಲಿ ಕೂಟ ಜೀವಾಳ, ಒಲಿದ ಠಾವಿನಲ್ಲಿ ನೋಟ ಜೀವಾಳವಯ್ಯಾ; ಕೂಡಲಸಂಗನ ಶರಣರ ಬರವೆಮಗೆ ಪ್ರಾಣ ಜೀವಾಳವಯ್ಯ’ ಎಂದು ಬಸವಣ್ಣ ಹೇಳಿದ್ದರು. ಶರಣರು ಬರುತ್ತಾರೆಂದರೆ ಜೀವ ಚೈತನ್ಯ ಬರುತ್ತದೆ. ಅದಕ್ಕಾಗಿ ಶರಣರ ಸಂಗವಿರಬೇಕು. ಬದುಕಿಗೆ ಅಧ್ಯಾತ್ಮ ಚಿಂತನೆ, ಶರಣರ ಮಾರ್ಗದರ್ಶನ ಅಗತ್ಯ’ ಎಂದರು.

‘ಇಂದು ಎಲ್ಲರ ಮನೆಯಲ್ಲಿ ಪಾಶ್ಚಾತ್ಯರ ಬದುಕು ಇದೆ. ಅದು ದೇಶಿಯವಾಗಿ ಜನರ ಬದುಕು ಬದಲಾಗಬೇಕು. ಇಂದಿನ ಮದುವೆಗಳು ನಾಗರಿಕತೆ ಮತ್ತು ಆದರ್ಶಗಳಿಗೆ ದಾರಿಯಾಗಬೇಕು’ ಎಂದು ಹೇಳಿದರು.

‘ಹಣ, ಅಂತಸ್ತಿಗೆ ಒಳಗಾಗುವುದನ್ನು ಅಲ್ಲಮಪ್ರಭುಗಳು ಹೆಣ್ಣಿಗಾಗಿ ಸತ್ತವರು ಕೋಟಿ, ಹೊನ್ನಿಗಾಗಿ ಸತ್ತವರು ಕೋಟಿ, ಮಣ್ಣಿಗಾಗಿ ಸತ್ತವರು ಕೋಟಿ, ನಿನಗಾಗಿ ಸತ್ತವರನ್ನು ಕಾಣೆ ಗುಹೇಶ್ವರ ಎಂದಿದ್ದಾರೆ. ಇಂದಿನ ಮಾನವನ ಬದುಕು ಸ್ವಾರ್ಥದಿಂದ ಕೂಡಿದ್ದು, ಅದರಿಂದ ಹೊರಬಂದು ಶರಣರ ಸಂಗ ಹೊಂದಿದರೆ ಮುಕ್ತಿ ಸಾಧ್ಯ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.