ಜಮಖಂಡಿ: ರಾಜ್ಯದಲ್ಲಿ 80 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿದ ಪಂಚಮಸಾಲಿ ಸಮಾಜ ಸಂಘಟನೆ ಉದ್ದೇಶದಿಂದ ಮೂರು ಪೀಠಗಳನ್ನು ಸ್ಥಾಪಿಸಿ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಬೇಕು ಎಂಬ ಉದ್ದೇಶ ಹೊಂದಲಾಗಿದೆ. ಈಗ ಯಾವುದೇ ಪೀಠದಲ್ಲಿ ಭಿನ್ನಾಭಿಪ್ರಾಯವಿಲ್ಲದೆ ಎಲ್ಲರೂ ಒಗ್ಗಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದರು.

ಇಲ್ಲಿನ ಮೈಗೂರ ರಸ್ತೆಯಲ್ಲಿರುವ ಪಂಚಮಸಾಲಿ ಸಮುದಾಯ ಭವನದಲ್ಲಿ ಭಾನುವಾರ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ ತಾಲ್ಲೂಕು ಪಂಚಮಸಾಲಿ ನೌಕರರ ಸಮಾವೇಶ ಹಾಗೂ ಸಾಧಕ ನೌಕರರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಮೂರು ಪೀಠದ ಸ್ವಾಮಿಜೀಗಳನ್ನು ಒಂದೇ ವೇದಿಕೆಯಲ್ಲಿ ಆಮಂತ್ರಿಸುವಂತಾಗಬೇಕು. ಪೀಠ ಸ್ಥಾಪನೆ ಉದ್ದೇಶ ಸಮಾಜದ ಸಂಘಟನೆಯ ಬಲವರ್ಧನೆಗೆ ಮಾತ್ರ ಸೀಮಿತ ಮತ್ತು 2ಎ ಮೀಸಲಾತಿ ಪಡೆಯುವ ಉದ್ದೇಶವಾಗಿದೆ ಎಂದರು.

ವಿಧಾನ ಪರಿಷತ್ತು ಸದಸ್ಯ ಹಣಮಂತ ನಿರಾಣಿ ಮಾತನಾಡಿ, ಸಮಾಜ ಸಂಘಟನೆ ಜೊತೆ ನೌಕರರು ಸಂಘಟಿತರಾಗಿ ಸಮಾಜ ಬಲವರ್ಧನೆಗೊಳಿಸಬೇಕು. ಈ ಸಂಘಟನೆಯಿಂದ ಸಮಸ್ಯೆ, ಕಷ್ಟ ಸುಖ ಪರಸ್ಪರ ಹಂಚಿಕೊಳ್ಳುವುದರ ಜೊತೆಗೆ ಪರಿಹರಿಸುವ ಕಾರ್ಯ ಕೈಗೊಳ್ಳಬೇಕು ಎಂದರು.

ಪಂಚಮಸಾಲಿ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಸೋಮನಗೌಡ ಪಾಟೀಲ ಮಾತನಾಡಿ, 12 ಜಿಲ್ಲೆಗಳಲ್ಲಿ ಪಂಚಮಸಾಲಿ ನೌಕರರ ಸಂಘ ಸ್ಥಾಪಿಸಲಾಗಿದೆ. ಆರು ಸಾವಿರ ಜನ ಅಜೀವ ಸದಸ್ಯತ್ವ ಪಡೆದುಕೊಂಡಿದ್ದಾರೆ. ನೌಕರರಿಗಾಗಿ ಬ್ಯಾಂಕ್ ಸ್ಥಾಪಿಸಲಾಗಿದೆ. ಬರುವ ದಿನಗಳಲ್ಲಿ ಜಮಖಂಡಿಯಲ್ಲಿ ಶಾಖೆ ಪ್ರಾರಂಭಿಸುವ ಯೋಜನೆ ಹೊಂದಲಾಗಿದೆ ಎಂದರು.

ಮುಖಂಡ ಬಿ.ಎಸ್. ಸಿಂಧೂರ ಮಾತನಾಡಿ, ಸಮಾಜದ ಮುಖಂಡರು ರಾಜಕಾರಣಿಗಳು ಒಂದೇ ಸಮಾಗಮವಾದರೆ ರಾಜ್ಯದಲ್ಲಿ ಪಂಚಮಸಾಲಿ ಸಮಾಜ ಬಲಿಷ್ಠವಾಗಿ ಎಲ್ಲ ಕ್ಷೇತ್ರಗಳಲ್ಲಿ ಸ್ಥಾನಮಾನ ಪಡೆದುಕೊಳ್ಳಲು ಸಾಧ್ಯ ಎಂದರು.

ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ರವಿ ಉಚ್ಚಂಗಿ ಮಾತನಾಡಿ, ರಾಜ್ಯದಲ್ಲಿ 1 ಲಕ್ಷಕ್ಕೂ ಅಧಿಕ ಸಮಾಜದವರು ಸರ್ಕಾರಿ ನೌಕರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.

ಕುಂಚನೂರ ಕಮರಿಮಠದ ಸಿದ್ದಲಿಂಗದೇವರು, ಚೆನ್ನಮ್ಮನ ಕಿತ್ತೂರ ಬಾಲಕಿಯರ ಪ್ರೌಢಶಾಲೆಯ ಉಪಪ್ರಾಂಶುಪಾಲ ಮಹೇಶ ಚನ್ನಂಗಿ, ತಾಲ್ಲೂಕು ಅಧ್ಯಕ್ಷ ಮಹಾಂತೇಶ ನರಸನಗೌಡ್ರ ಮಾತನಾಡಿದರು. ಸಂಗಮೇಶ ನಿರಾಣಿ, ಉಮೇಶ ಮಹಾಬಳಶೆಟ್ಟಿ, ಪ್ರಕಾಶ ಪಾಟೀಲ, ಸಿದ್ದು ಕೊಣ್ಣೂರ, ಶ್ರೀಶೈಲ ಕಂಕಣವಾಡಿ, ಸಂಗಣ್ಣ ಪಿಡಶೆಟ್ಟಿ, ಪ್ರಶಾಂತ ಹೊಸಮನಿ, ಈಶ್ವರ ವಾಳೆನ್ನವರ, ಲಿಂಗರಾಜ ಪಾಟೀಲ, ಸಂತೋಷ ಬಾಡಗಿ, ವಿಜಯಕುಮಾರ ಕುಳಲಿ, ಮಹಾನಂದಾ ಜನವಾಡ, ಸುನೀತಾ ಬಳಗಾರ, ನಿರ್ಮಲಾ ಮಿರ್ಜಿ ಇದ್ದರು. ಎಸ್ ಆರ್. ಪಾಟೀಲ ಸ್ವಾಗತಿಸಿದರು. ರಮೇಶ ಅವಟಿ ಪ್ರಾಸ್ತಾವಿವಾಗಿ ಮಾತನಾಡಿದರು, ಗಿರೀಶ ಮನಗೂಳಿ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.