ಬೀಳಗಿ: ಕರ್ನಾಟಕ ಸರ್ಕಾರವು ರೈತರ ಜಮೀನುಗಳ ಪಹಣಿ ತಿದ್ದುಪಡಿ ಮತ್ತು ಪೋಡಿ ಸರ್ವೆ ಕಾರ್ಯವನ್ನು ಗ್ರಾಮ ಮಟ್ಟದಲ್ಲೇ ಪೂರ್ಣಗೊಳಿಸಿ, ಪ್ರತ್ಯೇಕ ಪಹಣಿ ನೀಡುವ ಮೂಲಕ ಭೂ ವಿವಾದಗಳನ್ನು ತಗ್ಗಿಸುವ ಮಹತ್ವದ ಯೋಜನೆ ಪೋಡಿ ಮುಕ್ತ ಗ್ರಾಮ ಯೋಜನೆಯಾಗಿದೆ ಎಂದು ಭೂ ದಾಖಲೆಗಳ ಸಹಾಯಕ ನಿರ್ದೇಶಕ ರವಿಶಂಕರ.ಕೆ ಹೇಳಿದರು.

ತಾಲ್ಲೂಕಿನ ತೋಳಮಟ್ಟಿ ಗ್ರಾಮದಲ್ಲಿ ಏರ್ಪಡಿಸಿದ್ದ ಪೋಡಿ ಮುಕ್ತ ಗ್ರಾಮ ಅಭಿಯಾನದಲ್ಲಿ ಭಾಗವಹಿಸಿ ರೈತರನ್ನು ಉದ್ದೇಶಿಸಿ ಮಾತನಾಡಿದರು.

2015ರಲ್ಲಿ ಆರಂಭವಾದ ಈ ಅಭಿಯಾನವನ್ನು 2024-25ರಲ್ಲಿ ‘ನನ್ನ ಭೂಮಿ’ ಅಡಿಯಲ್ಲಿ ತೀವ್ರಗೊಳಿಸಲಾಗಿದ್ದು ದಶಕಗಳಿಂದ ಬಾಕಿ ಇರುವ ಪೋಡಿ ಪ್ರಕರಣಗಳನ್ನು ವೇಗವಾಗಿ ವಿಲೇವಾರಿ ಮಾಡಲಾಗುತ್ತಿದೆ ಎಂದರು.

ಶಾಸಕ ಜೆ. ಟಿ.ಪಾಟೀಲ ಅವರ ನಿರ್ದೇಶನದ ಮೇರೆಗೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಪೋಡಿ ಮುಕ್ತ ಗ್ರಾಮ ಅಭಿಯಾನವನ್ನು ನಡೆಸುವ ಮೂಲಕ ಸಾರ್ವಜನಿಕರಿಗೆ ಉಚಿತವಾಗಿ ಪಹಣಿಗಳನ್ನು ಪೋಡಿ ಮಾಡಿಕೊಳ್ಳುವ ಕುರಿತು ಮಾಹಿತಿ ನೀಡಲಾಯಿತು.

ಭೂದಾಖಲೆಗಳ ತಪಾಸಕರು, ಭೂಮಾಪನ ಅಧಿಕಾರಿಗಳು ಸೇರಿದಂತೆ ಕಂದಾಯ ಇಲಾಖೆಯ ಅನಗವಾಡಿ ಹೋಬಳಿಯ ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಆಡಳಿತ ಅಧಿಕಾರಿಗಳು ಮತ್ತು ಗ್ರಾಮ ಸಹಾಯಕರುಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.