ಮಂಗಳವಾರ, ಫೆಬ್ರವರಿ 18, 2020
15 °C

‘ಮಾವಾ‘ಗೆ ಕಡಿವಾಣ: ಪೊಲೀಸರ ಹರಸಾಹಸ

ಆರ್.ಎಸ್.ಹೊನಗೌಡ Updated:

ಅಕ್ಷರ ಗಾತ್ರ : | |

Prajavani

ಜಮಖಂಡಿ: ನಗರದ ವಿವಿಧೆಡೆ ಮಾವಾ (ತಂಬಾಕು ಮಿಶ್ರಿತ ಅಡಿಕೆ) ತಯಾರಿಸುವ ಅಂಗಡಿ, ಮನೆಗಳ ಮೇಲೆ ಪೊಲೀಸರು ದಾಳಿ ಮಾಡಿ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಳ್ಳುತ್ತಿದ್ದಾರೆ.

ಇಲ್ಲಿನ ಜಂಬಗಿ ರಸ್ತೆಯ  ನೂರಾನಿ ಕಾಲೊನಿಯಲ್ಲಿ ಇಬ್ಬರು ಮತ್ತು ನಗರದ ವಿವಿಧೆಡೆ ಎಂಟು ಜನರನ್ನು ಬಂಧಿಸಿ ನಾಲ್ಕು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಬೂಬಕರ್ ಮಂಗಳವಾಡೆ, ಸೋಯೆಲ್ ಗೋಕಾಕ, ಸಿಕಂದರ್ ಶೇಖ್, ಮೌಲಾಸಾಬ್ ಪಠಾಣ, ಮಂಜು ಕಾಂಬಳೆ, ಪ್ರವೀಣ ಮರೇಗುದ್ದಿ, ಇರ್ಫಾನ್ ಅಂಬಿ, ಬಂದೇನವಾಜ್ ಮಕಾನ್‌ದಾರ ಬಂಧಿತರು.

ಮಾವಾ ತಯಾರಿಕೆ ಅಡ್ಡೆಯ ಮೇಲೆ ಪೊಲೀಸರು ದಾಳಿ ಮಾಡಿದಾಗ ನಾಲ್ಕು ಅಡಿಕೆ ಒಡೆದು ಮಾವಾ ಸಿದ್ಧಪಡಿಸುವ ಯಂತ್ರಗಳು, ತಂಬಾಕು, ಅಡಿಕೆ, ಸುಣ್ಣ, ಮಾವಾ ತಿಕ್ಕಲು ಬಳಸುವ ಪ್ಲಾಸ್ಟಿಕ್ ಹಾಳೆ ವಶಪಡಿಸಿಕೊಂಡಿದ್ದಾರೆ.

ಮಾವಾ ಮಾರಾಟ ನಿಷೇಧವಿದ್ದರೂ ನಗರದಲ್ಲಿ ಕದ್ದು ಮುಚ್ಚಿ ವ್ಯಾಪಾರ ಮಾತ್ರ ನಿಂತಿರಲಿಲ್ಲ. ಶಿಕ್ಷಕರು, ಪೊಲೀಸರು, ಯುವಕರು, ಕಾಲೇಜ್ ವಿದ್ಯಾರ್ಥಿಗಳು, ಗೌಂಡಿಗಳು ಹೆಚ್ಚಾಗಿ ಮಾವಾ ತಿನ್ನುತ್ತಾರೆ. ಪೊಲೀಸರ ದಾಳಿಯ ಆತಂಕದಿಂದ ಗ್ರಾಮೀಣ ಪ್ರದೇಶದಲ್ಲಿ ತಯಾರಿಸಿ, ಬೈಕ್ ಮೇಲೆ ತೆರಳಿ ಮನೆಮನೆಗೆ ಮುಟ್ಟಿಸುತ್ತಿದ್ದರು. ಮೊದಲು ₹20-30ಕ್ಕೆ ಸಿಗುತ್ತಿದ್ದ ಮಾವಾ ಈಗ ₹50ಕ್ಕೆ ಬೆಲೆ ಏರಿಕೆಯಾಗಿದೆ.

ಮಾವಾದಲ್ಲಿ ನಿಕೋಟಿನ್: ಕಳೆದ ವರ್ಷ ವಶಪಡಿಸಿಕೊಂಡಿದ್ದ ಮಾವಾ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಅಲ್ಲಿಂದ ವರದಿ ಬಂದಿದೆ. ಅದರಲ್ಲಿ ನಿಕೋಟಿನ್ ಪ್ರಮಾಣ ಇದ್ದು ಆರೋಗ್ಯಕ್ಕೆ ಹಾನಿಕಾರ ಎಂದು ವರದಿ ತಿಳಿಸಿದೆ.  ನಿಕೋಟಿನ್ ಇರುವ ವಸ್ತುಗಳ ಮಾರಾಟವನ್ನು ಈಗಾಗಲೇ ರಾಜ್ಯ ಸರ್ಕಾರ ನಿಷೇಧಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು