ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

mava preparation

ADVERTISEMENT

‘ಮಾವಾ‘ಗೆ ಕಡಿವಾಣ: ಪೊಲೀಸರ ಹರಸಾಹಸ

ಜಮಖಂಡಿನಗರದ ವಿವಿಧೆಡೆಮಾವಾ ತಯಾರಿಸುವ ಅಂಗಡಿ, ಮನೆಗಳ ಮೇಲೆ ಪೊಲೀಸರು ದಾಳಿ ಮಾಡಿ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಳ್ಳುತ್ತಿದ್ದಾರೆ. ಇಲ್ಲಿನ ಜಂಬಗಿ ರಸ್ತೆಯ ನೂರಾನಿ ಕಾಲೊನಿಯಲ್ಲಿ ಇಬ್ಬರು ಮತ್ತು ನಗರದ ವಿವಿಧೆಡೆ ಎಂಟು ಜನರನ್ನು ಬಂಧಿಸಿ ನಾಲ್ಕು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಬೂಬಕರ್ ಮಂಗಳವಾಡೆ, ಸೋಯೆಲ್ ಗೋಕಾಕ, ಸಿಕಂದರ್ ಶೇಖ್, ಮೌಲಾಸಾಬ್ ಪಠಾಣ, ಮಂಜು ಕಾಂಬಳೆ, ಪ್ರವೀಣ ಮರೇಗುದ್ದಿ, ಇರ್ಫಾನ್ ಅಂಬಿ, ಬಂದೇನವಾಜ್ ಮಕಾನ್‌ದಾರ ಬಂಧಿತರು. ಮಾವಾ ತಯಾರಿಕೆ ಅಡ್ಡೆಯ ಮೇಲೆ ಪೊಲೀಸರು ದಾಳಿ ಮಾಡಿದಾಗ ನಾಲ್ಕು ಅಡಿಕೆ ಒಡೆದು ಮಾವಾ ಸಿದ್ಧಪಡಿಸುವ ಯಂತ್ರಗಳು, ತಂಬಾಕು, ಅಡಿಕೆ, ಸುಣ್ಣ, ಮಾವಾ ತಿಕ್ಕಲು ಬಳಸುವ ಪ್ಲಾಸ್ಟಿಕ್ ಹಾಳೆ ವಶಪಡಿಸಿಕೊಂಡಿದ್ದಾರೆ.
Last Updated 11 ಡಿಸೆಂಬರ್ 2019, 14:07 IST
‘ಮಾವಾ‘ಗೆ ಕಡಿವಾಣ: ಪೊಲೀಸರ ಹರಸಾಹಸ
ADVERTISEMENT
ADVERTISEMENT
ADVERTISEMENT
ADVERTISEMENT