ಇಳಕಲ್: ಪತ್ರಿಕಾ ದಿನಾಚರಣೆಯ ನಿಮಿತ್ತ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ತಾಲ್ಲೂಕು ಘಟಕವು ಇಲ್ಲಿಯ ವಿಜಯ ಮಹಾಂತೇಶ್ವರ ಮಠದಲ್ಲಿ ಗುರುಮಹಾಂತ ಶ್ರೀಗಳ ಮೂಲಕ ಪತ್ರಿಕಾ ವಿತರಕರಿಗೆ ರೇನ್ ಕೋಟ್ ವಿತರಿಸಿದರು.

ಈ ಸಂದರ್ಭದಲ್ಲಿ ವಿಜಯಮಹಾಂತೇಶ್ವರಮಠದ ಗುರುಮಹಾಂತ ಸ್ವಾಮೀಜಿ ಮಾತನಾಡಿ, 'ಸಮಾಜದ ಜಾಗೃತಿಗೆ ಅಗತ್ಯವಾದ ಲೋಕಶಿಕ್ಷಣವನ್ನು ಪತ್ರಿಕೆಗಳ ಮೂಲಕ ಪತ್ರಕರ್ತರು ನೀಡುತ್ತಾರೆ. ಸಮಾಜದ ಓರೆಕೋರೆಗಳಿಗೆ ಕನ್ನಡಿ ಹಿಡಿದು, ತಿದ್ದುವ ಕಾರ್ಯ ಮಾಡುತ್ತಾರೆ. ಸಮಾಜ ಪತ್ರಕರ್ತರ ಕೆಲಸ ಗುರುತಿಸಿ, ಪ್ರೋತ್ಸಾಹಿಸಬೇಕು' ಎಂದು ಹೇಳಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಇಳಕಲ್ ಘಟಕದ ಸದಸ್ಯರು ಪತ್ರಿಕೆಗಳನ್ನು ಮಳೆ, ಚಳಿ ಎನ್ನದೇ ಮನೆ ಮನೆಗೆ ಮುಟ್ಟಿಸುವ ವಿತರಕರಿಗೆ ಉಪಯುಕ್ತವಾದ ಕೊಡುಗೆ ನೀಡಿರುವುದು ಶ್ಲಾಘನೀಯ' ಎಂದರು.

ಅಬ್ದುಲ್ ಸಾಬ್ ಮುಲ್ಲಾ ಮಾತನಾಡಿದರು. ಇದೇ ಸಂದರ್ಭದಲ್ಲಿ ಗುರುಮಹಾಂತ ಶ್ರೀಗಳನ್ನು ಸನ್ಮಾನಿಸಲಾಯಿತು. ಕಾನಿಪ ಧ್ವನಿ ತಾಲ್ಲೂಕು ಘಟಕದ ಅಧ್ಯಕ್ಷ ಶರಣಪ್ಪ ಹೊದ್ನೂರ, ಶರಣಗೌಡ ಕಂದಕೂರ, ವಿಜಯ ಗವಿಮಠ, ಗುಂಡಪ್ಪ ಲಾಟಿ, ಸಿದ್ಧಾರ್ಥ ಚಲವಾದಿ, ಸಚಿನ್ ಸಾಲಿಮಠ ಪಾಲ್ಗೊಂಡಿದ್ದರು.

‘ಕಳಂಕಿತರಾಗದೆ ಉತ್ತಮ ಪತ್ರಕರ್ತರಾಗಿ’

ಮಹಾಲಿಂಗಪುರ: ‘ಪತ್ರಕರ್ತರು ತಪ್ಪಿಲ್ಲದಂತೆ ಬರೆಯುವ ಸಾಮರ್ಥ್ಯ ಹೊಂದಿರಬೇಕು. ಪತ್ರಕರ್ತರು ಕಳಂಕಿತರಾಗಿರದೇ ಉತ್ತಮ ಪತ್ರಕರ್ತರಾಗಬೇಕು. ಬಲಿಷ್ಠ ಭಾರತ ಕಟ್ಟಲು ಪತ್ರಕರ್ತರ ಪಾತ್ರ ಪ್ರಮುಖವಾಗಿದೆ’ ಎಂದು ಹಿರಿಯ ಪತ್ರಕರ್ತ ಮನೋಹರ ಯಡವಟ್ಟಿ ಹೇಳಿದರು.

ಪಟ್ಟಣದ ಕೆಎಲ್ಇ ಸಂಸ್ಥೆಯ ಎಸ್ಸಿಪಿ ಪದವಿ ಕಾಲೇಜಿನಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವತಿಯಿಂದ ಪತ್ರಿಕಾ ದಿನಾಚರಣೆ ಅಂಗವಾಗಿ ಮಂಗಳವಾರ ಹಮ್ಮಿಕೊಂಡ ‘ಪ್ರಸ್ತುತ ಪತ್ರಿಕೋದ್ಯಮ’ ಎಂಬ ವಿಷಯ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಪತ್ರಿಕಾ ರಂಗದಲ್ಲಿ ಸಾಕಷ್ಟು ಜನ ಪತ್ರಕರ್ತರಾಗಿ ಜೊತೆಗೆ ಸ್ವತಂತ್ರ ಹೋರಾಟಗಾರರಾಗಿದ್ದರು. ತುರ್ತು ಪರಿಸ್ಥಿತಿಯಲ್ಲಿ ಪತ್ರಿಕೆಗಳ ಹಾಗೂ ಪತ್ರಕರ್ತರ ಜವಾಬ್ದಾರಿ ತುಂಬಾ ಮಹತ್ವದ್ದಾಗಿತ್ತು. ಪತ್ರಕರ್ತರು ಸಮಸ್ಯೆಗಳನ್ನು ಗುರುತಿಸಿ ಅದನ್ನು ಪತ್ರಿಕೆಗಳ ಮೂಲಕ ಪರಿಹರಿಸಬೇಕು’ ಎಂದರು.

ಪ್ರಾಚಾರ್ಯ ಕೆ.ಎಂ.ಅವರಾದಿ ಅಧ್ಯಕ್ಷತೆ ವಹಿಸಿದ್ದರು. ಐಕ್ಯೂಎಸಿ ಸಂಯೋಜಕಿ ಸುನಂದಾ ಸೋರಗಾಂವಿ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಆರ್.ವಿ.ಚೌಗಲಾ, ಬಿ.ಐ.ಪಾಗದ ಇದ್ದರು.

ಪತ್ರಿಕಾ ವಿತರಕರಿಗೆ ರೇನ್ಕೋಟ್ ವಿತರಣೆ ಶಾಲಾ ಮಕ್ಕಳಿಂದ ಕಿರು ನಾಟಕ ಪ್ರದರ್ಶನ ರ್ಯಾಂಪ್ ವಾಕ್ ಪ್ರದರ್ಶನ

ಗಾಂಧೀಜಿ ಅಂಬೇಡ್ಕರ್ ಸೇರಿದಂತೆ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಪತ್ರಕರ್ತರಾಗಿ ಹೆಸರು ಮಾಡಿದವರು. ಅವರ ಆದರ್ಶದ ಹಾದಿಯಲ್ಲಿ ನಾವು ಸಾಗಬೇಕು
ಮನೋಹರ ಯಡವಟ್ಟಿ ಹಿರಿಯ ಪತ್ರಕರ್ತ

ಪತ್ರಿಕಾ ವೈದ್ಯರ ದಿನಾಚರಣೆ

ಮಹಾಲಿಂಗಪುರ: ‘ಸಮಾಜದ ಅಂಕುಡೊಂಕು ತಿದ್ದುವ ಪತ್ರಕರ್ತರು ಹಾಗೂ ಸಮಾಜದ ಸ್ವಾಸ್ಥ್ಯ ಕಾಪಾಡುವ ವೈದ್ಯರು ಸಮಾಜದ ಎರಡು ಕಣ್ಣುಗಳಿದ್ದಂತೆ’ ಎಂದು ಪತ್ರಕರ್ತ ಶಿವಲಿಂಗ ಸಿದ್ನಾಳ ಹೇಳಿದರು. ಪಟ್ಟಣದ ಅಕ್ಷರ ವಿದ್ಯಾವಿಹಾರ ಮಾಡರ್ನ್ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡ ಪತ್ರಿಕಾ ಹಾಗೂ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ‘ತಮ್ಮ ವೈಯಕ್ತಿಕ ಬದುಕನ್ನು ಬದಿಗೊತ್ತಿ ಸಮಾಜ ನಿರ್ಮಾಣದಲ್ಲಿ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿರುವ ಪತ್ರಕರ್ತರು ಹಾಗು ವೈದ್ಯರ ಕೆಲಸ ಶ್ಲಾಘನೀಯ. ಪ್ರಸ್ತುತ ದಿನಗಳಲ್ಲಿ ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳು ಜನಸಾಮಾನ್ಯರಿಗೆ ತಲುಪಲು ಪತ್ರಕರ್ತರ ಪಾತ್ರ ಬಹುಮುಖ್ಯವಿದೆ’ ಎಂದರು. ಪತ್ರಿಕಾ ಹಾಗೂ ವೈದ್ಯರ ದಿನಾಚರಣೆ ಅಂಗವಾಗಿ ಮಕ್ಕಳಿಂದ ಮೂರು ಕಿರುನಾಟಕಗಳು ಪ್ರದರ್ಶನಗೊಂಡವು. ಮಕ್ಕಳು ವೈದ್ಯರ ವೇಷದಲ್ಲಿ ರ್ಯಾಂಪ್ ವಾಕ್ ಮಾಡಿದರು. ಉಷಾ ಬೆಳಗಲಿ ಅವರನ್ನು ಸನ್ಮಾನಿಸಲಾಯಿತು. ಪ್ರಾಚಾರ್ಯ ಶರಣಪ್ಪ ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷೆ ಡಾ.ತೇಜಸ್ವಿತಾ ಮೇತ್ರಿ ಕಾರ್ಯದರ್ಶಿ ಡಾ.ವಿನೋದ ಮೇತ್ರಿ ಅಶ್ವಿನಿ ಬಡಿಗೇರ ಪತ್ರಕರ್ತರಾದ ಚಂದ್ರಶೇಖರ ಮೋರೆ ಮೀರಾ ತಟಗಾರ ಮಹೇಶ ಆರಿ ಜಯರಾಮಶೆಟ್ಟಿ ಹಣಮಂತ ನಾವಿ ಲಕ್ಷ್ಮಣ ಕಿಶೋರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.