ರಬಕವಿ ಬನಹಟ್ಟಿ: ‘ಇಂದಿನ ದಿನಗಳಲ್ಲಿ ವ್ಯಾಪಾರಸ್ಥರಲ್ಲಿ ಆರೋಗ್ಯಕರ ಪೈಪೋಟಿ ಅಗತ್ಯವಾಗಿದ್ದು, ಇದರಿಂದ ಗ್ರಾಹಕರಿಗೂ ಅನುಕೂಲವಾಗುತ್ತದೆ. ವ್ಯಾಪಾರಸ್ಥರು ಸಂಘಟಿತರಾದರೆ ಮಾತ್ರ ತಮ್ಮ ಹಕ್ಕುಗಳನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ’ ಎಂದು ಇಲ್ಲಿನ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಬದ್ರಿನಾರಾಯಣ ಭಟ್ಟಡ ತಿಳಿಸಿದರು.

ಅವರು ಶನಿವಾರ ಸ್ಥಳೀಯ ಜೇಡರ ದಾಸಿಮಯ್ಯ ಸಭಾಭವನದಲ್ಲಿ ನಡೆದ ವ್ಯಾಪಾರಸ್ಥರ ಸಂಘದ ದ್ವಿತೀಯ ವಾರ್ಷಿಕ ಸಭೆಯಲ್ಲಿ ಮಾತನಾಡಿದರು.

ಸಂಘದ ಉಪಾಧ್ಯಕ್ಷ ಗಿರೀಶ ಕಾಡದೇವರ ಮಾತನಾಡಿ, ‘ಮಾರುಕಟ್ಟೆಯಲ್ಲಿ ಟ್ರಾಫಿಕ್ ಸಮಸ್ಯೆಯಾಗುತ್ತಿದೆ. ಗ್ರಾಹಕರು ತಮ್ಮ ವಾಹನಗಳನ್ನು ಎಲ್ಲೆಂದರಲ್ಲಿ ಪಾರ್ಕ್ ಮಾಡುತ್ತಿದ್ದಾರೆ. ಅಂಗಡಿಕಾರರು ತಮ್ಮ ಅಂಗಡಿಗಳ ಮುಂದೆ ವಾಹನಗಳು ಸರಿಯಾಗಿ ನಿಲ್ಲುವಷ್ಟು ಸ್ಥಳದ ಅವಕಾಶ ಮಾಡಿಕೊಳ್ಳಬೇಕು’ ಎಂದರು.

ವಿಆರ್ಎಲ್ ಸಮೂಹ ಸಂಸ್ಥೆಯ ವ್ಯವಸ್ಥಾಪಕ ಬಸಯ್ಯ ವಸ್ತ್ರದ ಮಾತನಾಡಿದರು. ಸಂಘದ ಕಾರ್ಯದರ್ಶಿ ಈರಣ್ಣ ಬಾಣಕಾರ, ಹಿರಿಯ ವ್ಯಾಪಾರಸ್ಥರಾದ ಸೋಮು ಗೊಂಬಿ, ಶಂಕ್ರಯ್ಯ ಕಾಡದೇವರ, ಪ್ರಕಾಶ ಮಂಡಿ, ಮುರಳಿ ಕಾಬರಾ, ಅಶೋಕ ಮಹಾಜನ, ರವಿ ಪತ್ತಾರ, ಚಿದಾನಂದ ಪತ್ತಾರ, ಶಂಕರ ಕೆಸರಗೊಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.