ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಬಕವಿ ಬನಹಟ್ಟಿ: ಭಾರಿ ಮಳೆ

Published : 16 ಆಗಸ್ಟ್ 2024, 16:28 IST
Last Updated : 16 ಆಗಸ್ಟ್ 2024, 16:28 IST
ಫಾಲೋ ಮಾಡಿ
Comments

ರಬಕವಿ ಬನಹಟ್ಟಿ: ಶುಕ್ರವಾರ ಮಧ್ಯಾಹ್ನ 2.30ರ ಸುಮಾರಿಗೆ ಒಂದು ಗಂಟೆ ಕಾಲ ಭಾರಿ ಮಳೆ ಸುರಿಯಿತು.

ಮಳೆಯಿಂದಾಗಿ ಸ್ಥಳೀಯ ಮಂಗಳವಾರ ಪೇಟೆ ಮತ್ತು ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ನೀರು ನುಗ್ಗಿತು. ಇಲ್ಲಿಯ ಮಂಗಳವಾರ ಪೇಟೆ, ಸೋಮವಾರ ಪೇಟೆ ಮತ್ತು ಜಮಖಂಡಿ ಕುಡಚಿ ರಾಜ್ಯ ಹೆದ್ದಾರಿ ಸಂಪೂರ್ಣವಾಗಿ ಜಲಾವೃತಗೊಂಡಿದ್ದವು.

ಗುಡ್ಡ ಪ್ರದೇಶದಿಂದ ರಭಸದ ಮಳೆ ನೀರು ಮಗ್ಗದ ಮನೆಗಳಿಗೆ ನುಗ್ಗಿದ ಪರಿಣಾಮವಾಗಿ ಬಹಳಷ್ಟು ಬೀಮ್‌ಗಳಿಗೆ ತೊಂದರೆಯಾಗಿದೆ.

ಭಾರಿ ಮಳೆಯಿಂದಾಗಿ ಸ್ಥಳೀಯ ಎಸ್‌ಆರ್‌ಎ ಮೈದಾನ ನೀರಿನಿಂದ ತುಂಬಿತ್ತು. ನೀರಿನ ರಭಸಕ್ಕೆ ಕಾಲೇಜು ತಡೆಗೋಡೆ ಕೊಚ್ಚಿಕೊಂಡು ಹೋಗಿದೆ.

ಬನಹಟ್ಟಿಯಲ್ಲಿ ಸುರಿದ ಭಾರಿ ಮಳೆಗೆ ಸೋಮವಾರ ಪೇಟೆಯ ಪ್ರಮುಖ ರಸ್ತೆ ಸಂಪೂರ್ಣ ಜಲಾವೃತಗೊಂಡಿರುವುದು
ಬನಹಟ್ಟಿಯಲ್ಲಿ ಸುರಿದ ಭಾರಿ ಮಳೆಗೆ ಸೋಮವಾರ ಪೇಟೆಯ ಪ್ರಮುಖ ರಸ್ತೆ ಸಂಪೂರ್ಣ ಜಲಾವೃತಗೊಂಡಿರುವುದು
ಬನಹಟ್ಟಿಯಲ್ಲಿ ಸುರಿದ ಭಾರಿ ಮಳೆಗೆ ಸ್ಥಳೀಯ ಎಸ್‌ಆರ್‌ ಮೈದಾನದ ಕಂಪೌಂಡ್‌ಗೆ ಹಾನಿಯಾಗಿದೆ
ಬನಹಟ್ಟಿಯಲ್ಲಿ ಸುರಿದ ಭಾರಿ ಮಳೆಗೆ ಸ್ಥಳೀಯ ಎಸ್‌ಆರ್‌ ಮೈದಾನದ ಕಂಪೌಂಡ್‌ಗೆ ಹಾನಿಯಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT