ರಾಂಪುರ: ದೇಶ ಸೇವೆ ಮಾಡುವ ಹಂಬಲವುಳ್ಳ ಯುವಕರು ಸೇನೆಗೆ ಸೇರಬೇಕು ಎಂದು ನಿವೃತ್ತ ಸುಬೇದಾರ, ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಗದಿಗೆಪ್ಪ ಅರಕೇರಿ ಹೇಳಿದರು.

ಸೇನಾ ಪಡೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಮಂಗಳವಾರ ತವರಿಗೆ ಬಂದ ಶಿರಗುಂಪಿ ಗ್ರಾಮದ ಹವಾಲ್ದಾರ್ ಮಂಜುನಾಥ ಜೋಗಿ ಅವರಿಗೆ ಏರ್ಪಡಿಸಿದ್ದ ಸ್ವಾಗತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಂದು ಯುವಕರಿಗೆ ಸೇನೆಗೆ ಸೇರಲು ಸಾಕಷ್ಟು ಅವಕಾಶಗಳಿವೆ. ದೇಶ ಸೇವೆಯೇ ಈಶ ಸೇವೆ ಎಂಬಂತೆ ದೇಶ ರಕ್ಷಣೆಯಲ್ಲಿ ತೊಡಗಲು ಮುಂದಾಗಬೇಕು. ಇಂದು ಮಹಿಳೆಯರು ಸಹ ಸೈನ್ಯ ಸೇರಿ ದೇಶ ಸೇವೆಗೆ ಮುಂದಾಗಿದ್ದಾರೆ ಎಂದು ಹೇಳಿದರು.

ತಳಗಿಹಾಳ ಪ್ರೌಢಶಾಲಾ ಮುಖ್ಯಶಿಕ್ಷಕ ಎಸ್.ಎಸ್.ನಾಗರಾಳ ಹಾಗೂ ನಿವೃತ್ತ ಶಿಕ್ಷಕ ಗಣೇಶ ಹೊರಪೇಟೆ ಮಾತನಾಡಿ, ಹಗಲು ರಾತ್ರಿಯೆನ್ನದೆ ಸೈನಿಕರು ದೇಶದ ಗಡಿ ಕಾಯುತ್ತಿರುವುದರಿಂದ ನಾವೆಲ್ಲ ಸುರಕ್ಷಿತವಾಗಿದ್ದೇವೆ. ಯೋಧರ ಸೇವೆ ಅವಿಸ್ಮರಣೀಯ ಎಂದರು.

ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಕಾರ್ಯಾಧ್ಯಕ್ಷ ಪ್ರಕಾಶ ಸಿಂಗರಡ್ಡಿ, ಕ್ಯಾಪ್ಟನ್ ಯಂಕಣ್ಣ ಹಟ್ಟಿ, ಗ್ಯಾನಪ್ಪ ದಳವಾಯಿ, ಸುಬೇದಾರ ಶಂಕ್ರಪ್ಪ ಬಾರಕೇರ, ಮಾಜಿ ಸೈನಿಕರಾದ ಮಂಜುನಾಥ ಮನಗೂಳಿ, ಯಲ್ಲಪ್ಪ ಕಡೆಮನಿ, ನಾಗಪ್ಪ ಮುಳಗುಂದ, ಗುರುರಾಜ್ ರೊಳ್ಳಿ, ನಿವೃತ್ತ ಶಿಕ್ಷಕ ಆರ್.ಎಸ್.ಗಾಡದ ಅತಿಥಿಗಳಾಗಿದ್ದರು.

ಕಾರ್ಯಕ್ರಮಕ್ಕೂ ಮೊದಲು ಗ್ರಾಮಕ್ಕೆ ಆಗಮಿಸಿದ ಹವಾಲ್ದಾರ್ ಮಂಜುನಾಥ ಜೋಗಿ ಅವರನ್ನು ಇಲಾಳ, ತಳಗಿಹಾಳ ಮತ್ತು ಶಿರಗುಂಪಿ ಗ್ರಾಮಗಳ ಜನತೆ ಮೆರವಣಿಗೆ ಮೂಲಕ ಗ್ರಾಮ ದೇವತೆಯ ದೇವಸ್ಥಾನಕ್ಕೆ ಕರೆತಂದರು. ಮೂರೂ ಗ್ರಾಮಗಳ ಪರವಾಗಿ ಯೋಧನನ್ನು ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.