ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲಂಬಾಣಿ ಸಮುದಾಯದಲ್ಲಿ ಜಾಗೃತಿ ಮೂಡಿಸಿದ ಸಂತ

Published 15 ಫೆಬ್ರುವರಿ 2024, 16:26 IST
Last Updated 15 ಫೆಬ್ರುವರಿ 2024, 16:26 IST
ಅಕ್ಷರ ಗಾತ್ರ

ಹುನಗುಂದ: ಸಂತ ಸೇವಲಾಲ್ ಅವರು ಬಂಜಾರ (ಲಂಬಾಣಿ) ಸಮುದಾಯದಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಿದರು ಎಂದು ತಹಶೀಲ್ದಾರ್ ನಿಂಗಪ್ಪ ಬಿರಾದಾರ ಹೇಳಿದರು.

ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದ ಸಭಾ ಭವನದಲ್ಲಿ ಗುರುವಾರ ನಡೆದ ಸಂತ ಸೇವಲಾಲ್ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಹುನಗುಂದ ಮತ್ತು ಇಳಕಲ್ ತಾಲ್ಲೂಕು ಬಂಜಾರ ನೌಕರರ ಸಂಘದ ಅಧ್ಯಕ್ಷ ಸತೀಶ ರಾಠೋಡ ಮಾತನಾಡಿ, ‘ಸೇವಾಲಾಲ್ ಅವರು ಒಬ್ಬ ಶ್ರೇಷ್ಠ ಸಮಾಜ ಸುಧಾರಕ. ಅವರೊಬ್ಬ ಮಹಾನ ಪುರುಷ. ಅವರು ನಮ್ಮ ಸಮಾಜಕ್ಕೆ ಮಾತ್ರ ಸಿಮೀತವಾಗಿಲ್ಲ. ಇಡೀ ಸಮಾಜದ ಆಸ್ತಿ. ಅವರ ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ಮುನ್ನಡೆಯೋಣ’ ಎಂದರು.

ಅಮೀನಗಡ ಹೆಸ್ಕಾಂ ಅಧಿಕಾರಿ ಗೋಪಾಲ ಪೂಜಾರಿ, ಅಮೀನಗಡ ಪಟ್ಟಣ ಪಂಚಾಯ್ತಿ ಸದಸ್ಯೆ ಬೇಬಿ ಚವ್ಹಾಣ್, ವಿ.ಎ. ಗಿರಿತಿಮ್ಮಣ್ಣವರ, ಎಸ್.ಎ. ಮುಂಡೇವಾಡಿ, ರವಿ ರಾಠೋಡ, ಸಂತೋಷ್ ಪವಾರ್, ಪ್ರಕಾಶ ಚವ್ಹಾಣ್, ಸಂತೋಷ್ ಪಮ್ಮಾರ, ರಾಹುಲ್ ಚವ್ಹಾಣ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT