ರಾಂಪುರ ಸಮೀಪದ ಶಿರೂರ ಪಟ್ಟಣದ ಮಠದ ರಸ್ತೆಯ ಡಾಂಬರ್ ಕಿತ್ತು ಹೋಗಿದೆ
ಶಾಸಕರ ಅನುದಾನಕ್ಕಾಗಿ ಬೇಡಿಕೆ
ಮಠದ ರಸ್ತೆ ಬಹಳಷ್ಟು ಹಾಳಾಗಿದ್ದು ದುರಸ್ತಿಯಾಗಬೇಕಿದೆ. ಈ ವಿಷಯಕ್ಕೆ ಸಂಬಂಧಿಸಿ ಶಾಸಕ ಮೇಟಿ ಅವರೊಂದಿಗೆ ಮಾತನಾಡಿ ಅವರ ಅನುದಾನದಡಿ ಮಠದ ರಸ್ತೆ ದುರಸ್ತಿ ಮಾಡಿಸುವಂತೆ ಮನವಿ ಮಾಡುತ್ತೇವೆ ರಂಗಪ್ಪ ಮಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಯಾವುದೇ ಅನುದಾನವಿಲ್ಲ ಮಠದ ರಸ್ತೆ ದುರಸ್ತಿ ಮಾಡಬೇಕಿದೆ. ಸದ್ಯಕ್ಕೆ ನಮ್ಮ ಬಳಿ ಯಾವುದೇ ಅನುದಾನವಿಲ್ಲ. ಸರ್ಕಾರದಿಂದ ಯಾವುದಾದರೂ ಅನುದಾನ ಬಂದರೆ ಖಂಡಿತವಾಗಿ ರಸ್ತೆ ದುರಸ್ತಿ ಮಾಡಲಾಗುವುದು ಶಿವಾನಂದ ಆಲೂರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ