ಜಮಖಂಡಿ: ‘ವಿದ್ಯಾರ್ಥಿಗಳು ಕಾನೂನು ಜ್ಞಾನ ಬೆಳೆಸಿಕೊಳ್ಳಬೇಕು, ನಿತ್ಯ ಜ್ಞಾನಾರ್ಜನೆಯಲ್ಲಿ ತೊಡಗಬೇಕು. ಆಟ– ಪಾಠಗಳ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳನ್ನು ಮೈಗೂಡಿಸಿಕೊಳ್ಳಬೇಕು’ ಎಂದು ರಾಯಚೂರು ಡಿವೈಎಸ್ಪಿ ಶಾಂತವೀರ ಹೇಳಿದರು.

ತಾಲ್ಲೂಕಿನ ಶೂರ್ಪಾಲಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು, ನಿವೃತ್ತ ಶಿಕ್ಷಕರಿಗೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಶೂರ್ಪಾಲಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದರೆ ₹25 ಸಾವಿರ ಪ್ರೋತ್ಸಾಹಧನ ನೀಡಲಾಗುವುದು. ಶಾಲಾ ಚಟುವಟಿಕೆಗಳಿಗೆ ಅಗತ್ಯ ಬಿದ್ದರೆ ಕೈಲಾದಷ್ಟು ಸಹಾಯ ಮಾಡುತ್ತೇನೆ’ ಎಂದರು.

ಸಾವಳಗಿ ಠಾಣೆಯ ಪಿಎಸ್ಐ ಅಪ್ಪಣ್ಣ ಐಗಳಿ ಮಾತನಾಡಿ, ‘ವಿದ್ಯಾರ್ಥಿಗಳು ಪಾಲಕರಿಗೆ ರಸ್ತೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಹೇಳಬೇಕು. ದ್ವಿಚಕ್ರ ವಾಹನ ಸವಾರರು ಹೆಲ್ಮೇಟ್ ಧರಿಸಬೇಕು. ಸೈಬರ್ ಕ್ರೈಂ ಹೆಚ್ಚಳವಾಗುತ್ತಿದ್ದು, ಮಕ್ಕಳು ಅನಗತ್ಯವಾಗಿ ಮೊಬೈಲ್ ಬಳಕೆ ಮಾಡಬಾರದು. ಬಾಲ್ಯವಿವಾಹ ನಡೆಯುತ್ತಿದ್ದರೆ ಅವುಗಳ ಬಗ್ಗೆ ಮಾಹಿತಿ ನೀಡಬೇಕು’ ಎಂದು ತಿಳಿಸಿದರು.

ಪ್ರೌಢ ಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ನರಸಿಂಹ ಕಲ್ಲೋಳಿ, ಮುಖ್ಯಶಿಕ್ಷಕ ಎನ್.ಎಸ್.ಶೇಡಶ್ಯಾಳ, ಡಾ.ಈಶ್ವರ ಕಣಬೂರ ಮಾತನಾಡಿದರು.

ನಿವೃತ್ತ ಶಿಕ್ಷಕ ಎಚ್.ಎಂ.ಉಸ್ತಾದ, ಪಿಕೆಪಿಎಸ್ ಕಾರ್ಯದರ್ಶಿ ದುಂಡಪ್ಪ ಕುಂಚನೂರ, ಲಕ್ಷಿಕಾಂತ ದುದಗಿ, ಬಸವರಾಜ ತಿಪ್ಪನ್ನವರ, ಆದಿ ಬಳಗಾನೂರ, ಕಾರ್ತಿಕ ಧನ್ಯಾಳ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿನಿ ನಂದಿನಿ ಜಮಖಂಡಿ ಅವರನ್ನು ಸನ್ಮಾನಿಸಲಾಯಿತು.

ಎಸ್ಡಿಎಂಸಿ ಉಪಾಧ್ಯಕ್ಷ ರಾಜು ಕುಂಚನೂರ, ಪಿಕೆಪಿಎಸ್ ಅಧ್ಯಕ್ಷ ರಮೇಶ ಕಣಬೂರ, ಗಿರಿಮಲ್ಲಪ್ಪ ಅರಕೇರಿ, ಈಶ್ವರ ಕಂಕಣವಾಡಿ, ಎಸ್.ಐ.ಲೋಣಿ, ಶೇಖರ ಪಾಟೀಲ, ನರಸಿಂಹ ಪಾಟೀಲ, ಸಿದ್ದು ಕುಂಚನೂರ, ಮಹಾದೇವ ಇಂಗಳಗಿ, ಎಂ.ಎನ್.ನದಾಫ್ ಇದ್ದರು.

ಬಸವರಾಜ ತಿಪ್ಪನ್ನವರ ಸ್ವಾಗತಿಸಿದರು. ಸಿ.ಕೆ. ಗೊಸೂರ ನಿರೂಪಿಸಿದರು. ಗುರಲಿಂಗ ಕೊಕ್ಕನವರ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.