ಭಾನುವಾರ, ಸೆಪ್ಟೆಂಬರ್ 19, 2021
22 °C

ತೇರದಾಳದಲ್ಲಿ ಅಲ್ಲಮಪ್ರಭು ಜಾತ್ರೆ ವೈಭವ: ಪಾಲನೆಯಾಗದ ಕೋವಿಡ್ ನಿಯಮಾವಳಿ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಕಡೆಯ ಶ್ರಾವಣ ಸೋಮವಾರ ರಬಕವಿ-ಬನಹಟ್ಟಿ ತಾಲ್ಲೂಕಿನ ತೇರದಾಳ ಪಟ್ಟಣದಲ್ಲಿ ಅಲ್ಲಮಪ್ರಭುಗಳ ಜಾತ್ರೆ ವೈಭವದಿಂದ ನೆರವೇರಿತು.

ಸಾವಿರಾರು ಮಂದಿ ಪಾಲ್ಗೊಂಡು ನಂದಿಕೋಲು ಉತ್ಸವ, ದೇವರ ಪಾಲಕಿ ಸೇವೆಯನ್ನು ಕಣ್ತುಂಬಿಕೊಂಡರು. 

ಹುಬ್ಬಳ್ಳಿ- ಧಾರವಾಡ, ಜಮಖಂಡಿ, ರಬಕವಿ-ಬನಹಟ್ಟಿ, ಬೆಳಗಾವಿ ನಗರ, ಅಥಣಿ, ರಾಯಭಾಗ ಹಾಗೂ ನೆರೆಯ ಮಹಾರಾಷ್ಟ್ರದಿಂದ ಖಾಸಗಿ ವಾಹನಗಳಲ್ಲಿ ಭಕ್ತರು ಬಂದು ಜಾತ್ರೆಯಲ್ಲಿ ಪಾಲ್ಗೊಂಡರು.

ಜಾತ್ರೆಯಲ್ಲಿ ಎಲ್ಲಿಯೂ ಕೋವಿಡ್ ನಿಯಮಾವಳಿ ಪಾಲನೆಯಾಗಿರುವುದು ಕಂಡುಬರಲಿಲ್ಲ. ಸುರಕ್ಷಿತ ಅಂತರ ಮಾಯವಾಗಿತ್ತು. ಈ ವರ್ಷ ಕೋವಿಡ್ ಹಿನ್ನೆಲೆಯಲ್ಲಿ ಜಾತ್ರೆ ನಡೆಯುವುದಿಲ್ಲ ದೇವಸ್ಥಾನ ಸಮಿತಿ ಹಾಗೂ ಸ್ಥಳೀಯ ಪುರಸಭೆ ಆಡಳಿತ ಹೇಳಿತ್ತು. ಆದರೆ ನಿರ್ಬಂಧಗಳನ್ನು ಗಾಳಿಗೆ ತೂರಿ ಧಾರ್ಮಿಕ ಕಾರ್ಯಕ್ರಮ ಆಚರಿಸಲಾಯಿತು. ಜಾತ್ರೆಯಲ್ಲಿ ಎಲ್ಲಿಯೂ ಪೊಲೀಸ್ ಬಂದೋಬಸ್ತ್ ಕಂಡುಬರಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು