ತೇರದಾಳ: ಪಟ್ಟಣ ಸೇರಿದಂತೆ ತಾಲ್ಲೂಕು ವ್ಯಾಪ್ತಿಯ ಗ್ರಾಮಗಳಲ್ಲಿ ನೀರಿನ ತಾಪತ್ರಯವಿಲ್ಲ. ಆದರೆ ಜನರಲ್ಲಿ ಜಾಗೃತಿಯ ಕೊರತೆಯಿಂದ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮೂಲಕ ಗ್ರಾಮೀಣ ಪ್ರದೇಶಗಳಿಗೆ ನೀರು ಹರಿದರೆ, ಪಟ್ಟಣಕ್ಕೂ ಕೃಷ್ಣಾ ನದಿಯಿಂದ ಸಮರ್ಪಕ ನೀರು ಪೂರೈಕೆಯಾಗುತ್ತಿದೆ.

ಪಟ್ಟಣ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ, ಮನೆಗಳಗಳಿಗನುಗುಣವಾಗಿ ನಿತ್ಯ ನೀರು ಪೂರೈಕೆ ಮಾಡಲಾಗುತ್ತಿಲ್ಲ. 24/7 ನೀರು ಪೂರೈಕೆಗೆಂದು ಸಿದ್ದವಾಗಿದ್ದ ಯೋಜನೆ ಸರ್ಕಾರದ ಮಟ್ಟದಲ್ಲೆ ರದ್ದಾಗುವ ಮೂಲಕ ಪೈಪ್ ಅಳವಡಿಸಲು ತೆಗೆದ ಗುಂಡಿಗಳನ್ನು ಜನತೆಗೆ ಕಾಣಿಕೆಯಾಗಿ ನೀಡಿದೆ. 2005ಕ್ಕೂ ಪೂರ್ವದಲ್ಲಿ ಪಟ್ಟಣಕ್ಕೆ ಎರಡು ಐತಿಹಾಸಿಕ ಕೆರೆಗಳು ನೀರಿನ ಮೂಲಗಳಾಗಿದ್ದವು. ಕೆಲವರು ಕೆರೆಯ ನೀರು ಕುಡಿದರೆ ಇನ್ನೂ ಕೆಲವರು ಸಮೀಪದ ಸಸಾಲಟ್ಟಿ, ಗೊಲಬಾವಿ ಹಾಗೂ ಕಾಲತಿಪ್ಪಿಯ ಖಾಸಗಿ ಕೊಳವೆ ಬಾವಿಗಳಿಂದ ಕುಡಿಯಲು ನೀರು ತರುತ್ತಿದ್ದರು.

2005ರಲ್ಲಿ ಇಲ್ಲಿನ ದೇವರಾಜ ನಗರದಲ್ಲಿ ಫಿಲ್ಟರ್ ಹೌಸ್ ಆರಂಭಿಸಿ ಅಲ್ಲಿಗೆ ಹಳಿಂಗಳಿಯ ಬಳಿ ಹರಿಯುವ ಕೃಷ್ಣಾನದಿಯ ನೀರನ್ನು ನಲ್ಲಿಗಳಿಂದ ಮನೆಮನೆಗೆ ಹರಿಸುವ ಮೂಲಕ ನೀರಿನ ಬವಣೆ ತಪ್ಪಿಸಲಾಯಿತು. ಆದರೆ 2019ರ ಉಂಟಾದ ಭೀಕರ ಬರಗಾಲದಲ್ಲಿ ನದಿಯಲ್ಲಿ ನೀರಿನ ಕೊರತೆಯಾಗಿ ಪಟ್ಟಣದ ಪ್ರಮುಖ ಜಾಗಗಳಲ್ಲಿ ಕೊಳವೆ ಬಾವಿ ಕೊರೆಸಲು ಆರಂಭಿಸಲಾಯಿತು. ಈಗ ಅವುಗಳ ಸಂಖ್ಯೆ 148ಕ್ಕೆರಿದೆ. ದೇವರಾಜ ನಗರ ವ್ಯಾಪ್ತಿಯು ಗುಡ್ಡದ ಪ್ರದೇಶದಲ್ಲಿದ್ದು ಇಲ್ಲಿ ಕೊರೆಸಿದ ಕೊಳವೆ ಬಾವಿಗಳು ವಿಫಲವಾಗಿದ್ದರಿಂದ ಆಗಾಗ ಇಲ್ಲಿ ನೀರಿನ ತೊಂದರೆ ಉಂಟಾಗುತ್ತದೆ.

ಕೊಳವೆ ಬಾವಿಯ ಸಂಪರ್ಕವನ್ನು ಈಗ ಮನೆ ಮನೆಗೂ ನೀಡಲಾಗಿದ್ದು, ಪುರಸಭೆಯ ನಲ್ಲಿಯ ನೀರಿನ ಕರ ತುಂಬಲು ಸಹ ಮುಂದೆ ಬರುತ್ತಿಲ್ಲ. ಹೀಗಾಗಿ ಪುರಸಭೆಯ ಪ್ರಮುಖ ಆದಾಯ ಸಂಗ್ರಹವಾಗುತ್ತಿಲ್ಲ. ಕೊಳವೆ ಬಾವಿಗಳ ನೀರು ಸ್ಥಗಿತಗೊಳಿಸಿ ನಲ್ಲಿ ನೀರು ಪೂರೈಕೆಗೆ ಆಯಾ ವಾರ್ಡ್ ಮುಖಂಡರು, ಜನಪ್ರತಿನಿಧಿಗಳು ಅಡ್ಡಿಪಡಿಸುತ್ತಿದ್ದಾರೆ. 1500ಕ್ಕೂ ಅನಧಿಕೃತ ನಲ್ಲಿಗಳ ಸಂಪರ್ಕವಿದ್ದು ಆದಾಯಕ್ಕೆ ಮತ್ತೊಂದು ಬರೆ ಎಳೆದಂತಾಗಿದೆ.

ನಲ್ಲಿಗಳ ಮೂಲಕ ನೀರು ಪೂರೈಕೆ ಮಾಡಲು 20 ವರ್ಷಗಳ ಹಿಂದೆ ಅಳವಡಿಸಲಾದ ಪೈಪ್ಲೈನ್ ಹಳೆಯದಾಗಿದ್ದು, ಆಗಾಗ ಅಲ್ಲಲ್ಲಿ ಒಡೆದು ನೀರು ಸರಬರಾಜಿನಲ್ಲಿ ವ್ಯತ್ಯಯವಾಗುತ್ತದೆ. ಸದ್ಯ ಪಟ್ಟಣದ ಜನಸಂಖ್ಯೆಗನುಗುಣವಾಗಿ ನಿತ್ಯ30 ಲಕ್ಷ ಲೀಟರ್ ನೀರಿನ ಬೇಡಿಕೆಯಿದೆ. ಆದರೆ ಪ್ರತಿ ಮೂರು ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ ಎನ್ನುತ್ತಾರೆ ಪುರಸಭೆ ನೀರು ಸರಬರಾಜು ವಿಭಾಗದ ಪ್ರತಾಪ ಕೊಡಗೆ.

ಇನ್ನೂ ಶೇ 90ರಷ್ಟು ಜನತೆ ಪುರಸಭೆ ಸರಬರಾಜು ಮಾಡುವ ನೀರನ್ನು ಕುಡಿಯಲು ಬಳಸುವುದಿಲ್ಲ. ಬದಲಾಗಿ ಶುದ್ದ ಕುಡಿಯುವ ನೀರಿನ ಘಟಕಗಳಿಂದ ನೀರನ್ನು ಬಳಸುತ್ತಾರೆ. ಇದಕ್ಕಾಗಿ ಪುರಸಭೆಯ ಮೂರು ನೀರಿನ ಘಟಕಗಳು ಪಟ್ಟಣದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಒಂದು ಘಟಕ ದುರಸ್ತಿಗೊಳಿಸಬೇಕಿದೆ.

ಜನರೂ ನಲ್ಲಿಗೆ ಬಂದ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ. ತಮಗೆ ಅವಶ್ಯವಿರುವಷ್ಟನ್ನು ಸಂಗ್ರಹಿಸಿದ ನಂತರ ನಲ್ಲಿ ಬಂದ್ ಮಾಡದೆ ಚರಂಡಿಗೆ, ಶೌಚಾಲಯಕ್ಕೆ ಹರಿಸಿರುವುದರಿಂದ ಸಾಕಷ್ಟು ನೀರು ವ್ಯರ್ಥ ಮಾಡುತ್ತಿದ್ದಾರೆ ಎನ್ನುತ್ತಾರೆ ಸ್ಥಳೀಯ ಸುರೇಶ ಕೊಟಬಾಗಿ.

ತಾಲ್ಲೂಕಿನ ಗೋಲಬಾವಿಯ ಗ್ರಾಮ ಪಂಚಾಯಿತಿಯ ಶುದ್ದ ಕುಡಿಯುವ ನೀರಿನ ಘಟಕ ಬಂದ್ ಆಗಿ ಬಹಳ ವರ್ಷಗಳೇ ಕಳೆದಿದ್ದು, ಅದರ ಕಟ್ಟಡ ಖಾಸಗಿಯಾಗಿ ಬಳಕೆಯಾಗುತ್ತಿದೆ. ಪಟ್ಟಣದ ಅನೇಕರು ಈಗಲೂ ಸಸಾಲಟ್ಟಿಯ ಕೊಳವೆ ಬಾವಿಗಳಿಂದ ಕುಡಿಯಲು ನೀರು ತರುವುದು ಸಾಮಾನ್ಯವಾಗಿದೆ. ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಣಸೆ ಗಿಡದ ಬಳಿಯ ಕೈಪಂಪು ಸುಮಾರು ವರ್ಷಗಳಿಂದ ಜನರ ದಾಹ ತಣಿಸಿದ್ದು ಅದಕ್ಕೆ ಸೂಕ್ತ ವ್ಯವಸ್ಥೆಯನ್ನು ಗ್ರಾಮ ಪಂಚಾಯಿತಿ ಮಾಡಬೇಕಿದೆ.

‘ನೀರು ಸಮರ್ಪಕವಾಗಿ ಬಳಸಿ ಸಹಕರಿಸಿ’ `ಪುರಸಭೆ ಸರಬರಾಜು ಮಾಡುವ ನೀರನ್ನು ಸಾರ್ವಜನಿಕರು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಸಮಯಕ್ಕೆ ಸರಿಯಾಗಿ ನೀರಿನ ಕರ ಪಾವತಿಸಬೇಕು. ಅಧಿಕೃತ ನಲ್ಲಿ ಸಂಪರ್ಕ ಪಡೆದು ನೀರು ಪಡೆಯುವ ಮೂಲಕ ಪಟ್ಟಣದ ಅಭಿವೃದ್ಧಿಗೆ ಸಹಕರಿಸಬೇಕು. ನೀರು ಸರಬರಾಜಿಗಾಗಿ ಸಿಬ್ಬಂದಿ ನಿರಂತರ ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದು ಪುರಸಭೆ ಕಚೇರಿ ವ್ಯವಸ್ಥಾಪಕ ಮಲ್ಲಿಕಾರ್ಜುನ ಬಿರಾದಾರ ಪಾಟೀಲ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.