ಜಮಖಂಡಿ: ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವವರು ಕಡ್ಡಾಯವಾಗಿ ಟ್ರೇಡ್ ಲೈಸನ್ಸ್ ಪಡೆದುಕೊಳ್ಳಬೇಕು. ಇಲ್ಲದಿದ್ದರೆ ತಂಬಾಕು ನಿರ್ವಹಣಾ ಕಾಯ್ದೆ 2003ರನ್ವಯ ಅವರ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಪೌರಾಯುಕ್ತ ಜ್ಯೋತಿ ಗಿರೀಶ ಎಸ್ ಹೇಳಿದರು.

ನಗರದ ನಗರಸಭೆ ಸಭಾ ಭವನದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿ ನಗರದ ಅಂಗಡಿಗಳಲ್ಲಿ, ಬೀದಿ ಬದಿಗಳಲ್ಲಿ, ಗೂಡಂಗಡಿಗಳಲ್ಲಿ ಮಾರಾಟ ಮಾಡುವವರಿದ್ದರೆ ಲೈಸನ್ಸ್ ಕಡ್ಡಾಯವಾಗಿ ಪಡೆದುಕೊಳ್ಳಬೇಕು ಎಂದರು.

ನಗರ ಸ್ವಚ್ಛತೆಯಲ್ಲಿ ರಾಜ್ಯದಲ್ಲಿ ನಂ.1 ಸ್ಥಾನ ಕಳೆದ ಮೂರು ವರ್ಷದಿಂದ ಪಡೆಯುತ್ತಾ ಬಂದಿದೆ, ನಗರಸಭೆಯಿಂದ ಮೊಬೈಲ್ ಆ್ಯಪ್ ಅಭಿವೃದ್ದಿ ಪಡಿಸಲಾಗುತ್ತದೆ. ನಗರದಲ್ಲಿ ಎಲ್ಲೆಂದರಲ್ಲಿ ಕಸ ಬಿದ್ದಿದ್ದರೆ, ಬೀದಿ ದೀಪ ನಿರ್ವಹಣೆ ಸೇರಿದಂತೆ ವಿವಿಧ ಸೌಕರ್ಯಕ್ಕಾಗಿ ಕೂಡಲೆ ಸ್ಪಂದಿಸಲಾಗುವದು ಎಂದರು.

ಶುದ್ದ ಕುಡಿಯುವ ನೀರಿನ ಘಟಕಗಳನ್ನು ಈಗಾಗಲೇ ಸರಿಯಾಗಿ ನಿರ್ವಹಣೆ ಮಾಡದೆ ಹಣ ಸಂದಾಯ ಮಾಡದವರನ್ನು ತೆಗೆದು ಹೊಸ ಟೆಂಡರ್ ಕರೆಯಲಾಗುವದು, ಎಲ್ಲ ವಾರ್ಡಗಳಲ್ಲಿ ಘಟಕಗಳನ್ನು ತೆರೆಯಲಾಗುವದು, ನಗರಸಭೆಯ ನಿರುಪಯುಕ್ತ ವಾಹನ ಸೇರಿ ವಿವಿಧ ವಸ್ತುಗಳನ್ನು ಹರಾಜು ಹಾಕುವ ಮುಂಚೆ ಅವುಗಳನ್ನು ಮತ್ತೊಮ್ಮೆ ಪರಿಶೀಲಿಸಿ ಹರಾಜು ಹಾಕಿ ಎಂದು ಸದಸ್ಯರು ಸೂಚಿಸಿದರು.

‘ನಗರದ ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕ ಶೌಚಗೃಹಗಳನ್ನು ನಿರ್ಮಿಸಿ. ಸಾರ್ವಜನಿಕರಿಗೆ ಬಹಳಷ್ಟು ತೊಂದರೆ ಉಂಟಾಗುತ್ತಿದೆ’ ಎಂದು ಸದಸ್ಯರು ಸಭೆಯ ಗಮನ ಸೆಳೆದರು. ಇದಕ್ಕೆ ನಗರದ ಪ್ರಮುಖ ಬೀದಿಗಳಲ್ಲಿ ಸುಮಾರು 9ಕ್ಕೂ ಅಧಿಕ ಶೌಚಗೃಹಗಳನ್ನು ನಿರ್ಮಿಸಲಾಗುತ್ತಿದೆ ಎಂದು ಪೌರಾಯುಕ್ತ ಜ್ಯೋತಿ ಗಿರೀಶ ತಿಳಿಸಿದರು.

ನಿರ್ಮಾಣವಾಗಿರುವ ಶಕುಂತಲಾ ಮಾರ್ಕೆಟ್ನ್ನು ಮೂರು ತಿಂಗಳಲ್ಲಿ ಉದ್ಘಾಟಿಸಬೇಕು ಎಂದು ಸದಸ್ಯ ದಿಲಾವರ ಶಿರೋಳ ಹೇಳಿದಾಗ ಪ್ರಯತ್ನಿಸಲಾಗುವುದು ಎಂದು ಪೌರಾಯುಕ್ತರು ತಿಳಿಸಿದರು. ಬೀದಿ ದೀಪ ನಿರ್ವಹಣೆ ಮಾಡುವ ಗುತ್ತಿಗೆದಾರ ಪೋನ್ ತೆಗೆದುಕೊಳ್ಳುವದಿಲ್ಲ, ಸರಿಯಾಗಿ ಸ್ಪಂದಿಸುವದಿಲ್ಲ, ನಮಗೆ ಈ ರೀತಿ ಯಾದರೆ ಇನ್ನೂ ಸಾರ್ವಜನಿಕರ ಗತಿ ಏನು ಎಂದು ಸದಸ್ಯರು ಒಕ್ಕೂರಲಿನಿಂದ ಪೌರಾಯುಕ್ತರನ್ನು ಪ್ರಶ್ನಿಸಿದರು.

ಸದಸ್ಯ ಕುಶಾಲ ವಾಗ್ಮೋರೆ ಮಾತನಾಡಿ ನಗರದಲ್ಲಿ ವೀರ ಸಾವರಕರ್, ಜ್ಯೋತಿಬಾ ಫುಲೆ, ಬಾಬುಜಗಜೀವನ್ ರಾಮ್, ಸಂಬಾಜಿ ಮಹಾರಾಜ್ ವೃತ್ತ ನಿರ್ಮಿಸಬೇಕು ಎಂದರು. ದಿಲಾವರ ಶಿರೋಳ ಮಾತನಾಡಿ, ಕಳೆದ 20 ವರ್ಷಗಳಿಂದ ಮುಧೋಳ ರಸ್ತೆಯಲ್ಲಿರುವ ಮೌಲಾನಾ ಅಬ್ದುಲ್ ಕಲಾಂ ಆಜಾದ್ ವೃತ್ತವನ್ನು ರಸ್ತೆಯ ಪಕ್ಕದಲ್ಲಿ ನಿರ್ಮಿಸಬೇಕು ಎಂದಾಗ ದಾನೇಶ ಘಾಟಗೆ ಮಾತನಾಡಿ, ಈ ಹಿಂದೆ ಮಾಡಿದ ಠರಾವುಗಳನ್ನು ಪರಿಶೀಲಿಸಿ ಯಾವ ಜಾಗದಲ್ಲಿ ವೃತ್ತಗಳನ್ನು ಮಾಡಬೇಕು ಎಂಬುದನ್ನು ನಿರ್ಧರಿಸಿ ಮಾಡಿ ಎಂದು ಸಲಹೆ ಇತ್ತರು.

ವೇದಿಕೆಯಲ್ಲಿ ನಗರಸಭೆ ಅಧ್ಯಕ್ಷ ಈಶ್ವರ ವಾಳೆನ್ನವರ, ಉಪಾಧ್ಯಕ್ಷೆ ರೇಖಾ ಕಾಂಬಳೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.