ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೇರದಾಳ: ದಾಖಲೆ ಇಲ್ಲದ ₹1.99ಲಕ್ಷ ಜಪ್ತಿ

Published 24 ಮಾರ್ಚ್ 2024, 15:58 IST
Last Updated 24 ಮಾರ್ಚ್ 2024, 15:58 IST
ಅಕ್ಷರ ಗಾತ್ರ

ತೇರದಾಳ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣದ ನಾಲ್ಕನೇ ಕಾಲುವೆ ಬಳಿಯಿರುವ ಚೆಕ್‌ ಪೋಸ್ಟ್‌ನಲ್ಲಿ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಭಾನುವಾರ ಎರಡು ವಾಹನಗಳ ಪ್ರತ್ಯೇಕ ತಪಾಸಣೆ ಸಂದರ್ಭದಲ್ಲಿ ₹1.99ಲಕ್ಷ ದಾಖಲೆಯಿಲ್ಲದ ಹಣ ವಶಪಡಿಸಿಕೊಳ್ಳಲಾಗಿದೆ ಎಂದು ತೇರದಾಳ ತಹಶೀಲ್ದಾರ್‌ ವಿಜಯಕುಮಾರ ಕಡಕೋಳ ತಿಳಿಸಿದ್ದಾರೆ.

ಮಹಾರಾಷ್ಟ್ರದ ದತ್ತವಾಡದ ಅಭಿಷೇಕ ಕಲ್ಲೊಳ್ಳಿ ಅವರಿಂದ ₹99ಸಾವಿರ ಮತ್ತು ಗೋಕಾಕನ ಅಭಿಜಿತ ಬೊಂಗಾಳೆ ಅವರಿಂದ ಒಂದು ಲಕ್ಷ ಹಣ ಜಪ್ತಿ ಮಾಡಲಾಗಿದೆ.

 ತೇರದಾಳ ಪಿಎಸ್‌ಐ ಅಪ್ಪು ಐಗಳಿ, ಎಎಸ್‌ಐ ಎಲ್.ಬಿ.ಮಾಳಿ, ವಿವೇಕ ಸುವರ್ಣಖಂಡಿ, ಅಬಕಾರಿ ಇಲಾಖೆಯ ಅರುಣಕುಮಾರ ಜುಲ್ಪಿ, ಫ್ಲೈಯಿಂಗ್ ಸ್ಕ್ವಾಡ್ ಶಿವಮೂರ್ತಿ, ಪುರಸಭೆ ಅಧಿಕಾರಿ ಪ್ರತಾಪ ಕೊಡಗೆ ಸೇರಿದಂತೆ ಪೊಲೀಸ್ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT