ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಸೇರಿದಂತೆ ಅನೇಕ ಮುಖಂಡರೊಂದಿಗೆ ಮೂರ್ತಿ ಅನಾವರಣಗೊಳಿಸಲು ಮನವಿ ಮಾಡಿದ್ದೇವೆ. ಮುಖ್ಯಮಂತ್ರಿಗಳನ್ನು ಆಮಂತ್ರಿಸಿ ಬೇಗ ಉದ್ಘಾಟನೆ ಮಾಡಬೇಕು
ಭೀಮಸಿ ತಳವಾರ ಅಧ್ಯಕ್ಷ ತಾಲ್ಲೂಕು ವಾಲ್ಮೀಕಿ ಸಮಾಜ
ಆಕರ್ಷಕ ಪ್ರತಿಮೆಗಳು:
ಬ್ರಿಟಿಷರಿಗೆ ಸೋಲುನಿಸಿ ಸ್ವಾತಂತ್ರ್ಯದ ಕಹಳೆ ಮೊಳಗಿಸಿದ್ದ ಹಲಗಲಿ ಬೇಡರ ನಾಯಕರೆನಿಸಿಕೊಂಡಿದ್ದ ಜಡಗಣ್ಣ-ಬಾಲಣ್ಣ ಮೂರ್ತಿ ಅಜಾನುಬಾಹುವಿನಂತೆ ನಿರ್ಮಾಣವಾಗಿದೆ. ಅಂದಾಜು ₹ 18 ಲಕ್ಷ ವೆಚ್ಚದ 9 ಅಡಿ ಎತ್ತರದ ಬೆಳಗಾವಿ ಮೂಲದ ಕಲಾವಿದರೊಬ್ಬರು ಕಂಚಿನ ಮೂರ್ತಿ ನಿರ್ಮಾಣ ಮಾಡಿದ್ದಾರೆ. ದೊರೆಯದ ಮಾಹಿತಿ: ಜಡಗಣ್ಣ-ಬಾಲಣ್ಣ ಪ್ರತಿಮೆಗಳಿರುವ ವೃತ್ತ ವಿಜಯಪುರ-ಬೆಳಗಾವಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿದೆ. ಬೇರೆ ಬೇರೆ ಪ್ರದೇಶದಿಂದ ವಾಹನದಲ್ಲಿ ಪ್ರಯಾಣಿಸುವ ಜನರು ಅವು ಯಾರ ಪ್ರತಿಮೆಗಳು ಎನ್ನುವ ಬಗ್ಗೆ ಸ್ಥಳೀಯರಲ್ಲಿ ಪ್ರಶ್ನಿಸುತ್ತಿರುವುದು ಸಾಮಾನ್ಯವಾಗಿಬಿಟ್ಟಿದೆ.