ಹುನಗುಂದ: ಇತ್ತೀಚೆಗೆ ಪ್ರಶಸ್ತಿಗಳ ಸಂಖ್ಯೆಯ ಜೊತೆಗೆ ಮೊತ್ತವು ಹೆಚ್ಚಾಗಿದೆ. ಆದರೆ ಪ್ರಶಸ್ತಿಗಳ ಮೌಲ್ಯ ಬಹಳ ಕುಸಿದಿದೆ ಎಂದು ಬನಹಟ್ಟಿ ಜಾನಪದ ವಿದ್ವಾಂಸ ಬಿ.ಆರ್ ಪೊಲೀಸ ಪಾಟೀಲ ಹೇಳಿದರು.

ಶನಿವಾರ ಪಟ್ಟಣದ ಬಸವ ಮಂಟಪದಲ್ಲಿ ತಾಲ್ಲೂಕು ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆ ಸಹಯೋಗದಲ್ಲಿ ನಡೆದ 38ನೇ ಮನೆ ಮನಗಳಿಗೆ ವಚನ ಸೌರಭ, ಚೆನ್ನಮ್ಮ ಹಾಗೂ ನೀಲಕಂಠಪ್ಪ ಹಾದಿಮನಿ ಶರಣ ದಂಪತಿಗಳ 9ನೇ ಪುಣ್ಯಸ್ಮರಣೆ, ದತ್ತಿ ಉಪನ್ಯಾಸಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಿಂದಿನ ದಿನಗಳಲ್ಲಿ ಶಿಕ್ಷಕನ ಸೇವೆಗಳನ್ನು ಗುರುತಿಸುವ ವ್ಯಕ್ತಿಗಳಿದ್ದರು. ಆದರೆ ಇಂದು ಶಿಕ್ಷಕರ ಸೇವೆಗಳನ್ನು ಗುರುತಿಸುವುದು ಕಡಿಮೆಯಾಗಿದೆ. ಕಾರಣ ಅಲ್ಲಿಯೂ ರಾಜಕಾರಣ ಆವರಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮುದ್ದೇಬಿಹಾಳ ತಾಲ್ಲೂಕು ಪಂಚಾಯಿತಿ ಪಿ. ಎಂ.ಪೋಷಣ ಸಹ ನಿರ್ದೇಶಕ ಮಲ್ಲಿಕಾರ್ಜುನ ಬೆಳಗಲ್ ಮಾತನಾಡಿ, ನೀಲಕಂಠಪ್ಪ ಹಾದಿಮನಿ ಶರಣರು ತಮ್ಮ ವೃತ್ತಿ ಜೀವನದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಜೊತಗೆ ಕಾಯಕದ ಮಹತ್ವವನ್ನು ತಿಳಿಸಿದರು ಎಂದರು.

ಶಿರೂರು ಮಹಾಂತ ತೀರ್ಥದ ಬಸವಲಿಂಗ ಸ್ವಾಮೀಜಿ ಮಾತನಾಡಿ, ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ಮುನ್ನಡೆದಾಗ ನಮ್ಮ ಬದುಕು ಸುಂದರವಾಗುತ್ತದೆ ಎಂದರು.

ಲೇಖಕಿ ಲಲಿತಾ ಹೊಸಪ್ಯಾಟಿ ಮಾತನಾಡಿದರು.

ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್ ಎನ್. ಹಾದಿಮನಿ ಪ್ರಸ್ತಾವಿಕ ನುಡಿಗಳನ್ನಾಡಿದರು.

ಸುಳೇಬಾವಿ ಸರ್ಕಾರಿ ಬಾಲಕಿಯರ ಮಾದರಿ ಪ್ರಾಥಮಿಕ ಶಾಲೆ ಶಿಕ್ಷಕಿ ಸಂಗಮ್ಮ ದಾಸಪ್ಪನವರ ಹಾಗೂ ಹೊನ್ನರಹಳ್ಳಿ ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆ ಮುಖ್ಯ ಶಿಕ್ಷಕ ಪ್ರಭು ಮಾಲಗಿತ್ತಿಮಠ ಅವರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪಟ್ಟಣದ ಗಚ್ಚಿನಮಠದ ಅಮರೇಶ್ವರ ದೇವರು, ವಿಜಯಪುರ -ಬಾಗಲಕೋಟೆ ಹಾಲು ಒಕ್ಕೂಟದ ಕೆ.ಎಂ.ಎಫ್ ನ ನಿವೃತ್ತ ವ್ಯವಸ್ಥಾಪಕ ಎಸ್.ಎನ್. ಹಾದಿಮನಿ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಶಿವಗಂಗಾ ರಂಜಣಗಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.