ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೂರ: ಮೂಲಸೌಕರ್ಯ ಒದಗಿಸಲು ಶಾಸಕ ಜೆ.ಟಿ.ಪಾಟೀಲಗೆ ಮನವಿ

Published 30 ನವೆಂಬರ್ 2023, 15:21 IST
Last Updated 30 ನವೆಂಬರ್ 2023, 15:21 IST
ಅಕ್ಷರ ಗಾತ್ರ

ಕೆರೂರ: ‘ಅಬಿವೃದ್ದಿ ಹಾಗೂ ಪ್ರಾಮಾಣಿಕತೆಯ ಮುಂದೆ ಹಣ ಬಲದ ಪ್ರಯೋಗ ನಡೆಯಲ್ಲ ಎಂದು ಬೀಳಗಿ ಮತಕ್ಷೇತ್ರದ ಮತದಾರರು ತೋರಿಸಿಕೊಟ್ಟಿದ್ದಾರೆ’ ಎಂದು ಶಾಸಕ ಜೆ.ಟಿ.ಪಾಟೀಲ ಹೇಳಿದರು.

ಸಮೀಪದ ಅನವಾಲ ಗ್ರಾಮದಲ್ಲಿ ಬುಧವಾರ ನಡೆದ ಶಾಸಕರ ಅಭಿನಂದನಾ ಸಮಾರಂಭದಲ್ಲಿ ಅವರು  ಮಾತನಾಡಿ,  ಅನವಾಲ ಏತ ನೀರಾವರಿ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದರು

ಗ್ರಾಮದ ಮೂಲಸೌಕರ್ಯಗಳಾದ ಕುಡಿಯುವ ನೀರಿನ ಯೋಜನೆ, ಪ್ರಾಥಮೀಕ ಆರೋಗ್ಯ ಕೇಂದ್ರ, ಪ್ರೌಢ ಶಾಲೆ, ರಸ್ತೆ ಡಾಂಬರೀಕರಣ, ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಸಮುದಾಯ ಭವನಗಳ ಬಗ್ಗೆ ಗ್ರಾಮಸ್ಥರು ಶಾಸಕರ ಮುಂದೆ ಅಹವಾಲು ನೀಡಿದರು.

ಅಹವಾಲು ಸ್ವೀಕರಿಸಿ ಮಾತನಾಡಿದ ಶಾಸಕರು, ಗ್ರಾಮ ಪಂಚಾಯತಿಗೆ ಸಾಕಷ್ಟು ಅನುದಾನ ಬರುತ್ತದೆ, ಕೆಲವು ಮೂಲ ಸೌಕರ್ಯಗಳನ್ನು ನರೇಗಾ ಯೋಜನೆಯಡಿ ಮಾಡುವಂತೆ ಸ್ಥಳದಲ್ಲಿಯೇ ಇದ್ದ ಗ್ರಾಮ ಪಂಚಾಯ್ತಿ ಕಾರ್ಯದರ್ಶಿಗೆ ತಿಳಿಸಿದರು. ಉಳಿದ ಯೋಜನೆಗಳನ್ನು ಹಾಗೂ ಸ್ಮಾರ್ಟಕ್ಲಾಸ್ ಶಾಸಕ ಅನುದಾನದಲ್ಲಿ ಮಾಡಿಕೊಡುತ್ತೇನೆ’ ಎಂದರು.

ಬಸವಪ್ರಭು ಸರನಾಡಗೌಡ, ಕಮಲಗೌಡ ಪಾಟೀಲ, ಮಂಜು ಪಮ್ಮಾರ, ರವಿ ಮಠ,ಅ ಶೋಕ ರೂಗಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT