ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಣಿಜ್ಯ ನಗರಕ್ಕೆ ಸಾಹಿತ್ಯ ಲೇಪಿಸಿದ ಕವಿ ಡಾ.ನರೋಡೆ

ಅಥಣಿ ತಾಲ್ಲೂಕು ಮೂರನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ.ಅಶೋಕ ನರೋಡೆ ಸಾಹಿತ್ಯ ಯಾತ್ರೆಯ ಹಲವು ಹೆಜ್ಜೆಗಳು.
Last Updated 14 ಜೂನ್ 2014, 6:40 IST
ಅಕ್ಷರ ಗಾತ್ರ

ಮಹಾಲಿಂಗಪುರ: ಡಾ.ಅಶೋಕ ನರೋಡೆ ಕಾವ್ಯ ಹಾಗೂ ವಿಮರ್ಶೆಯ ಕ್ಷೇತ್ರದಲ್ಲಿ ಈಗ ಗಮನಿಸ ಬಹುದಾದ ಹೆಸರು.

ವಿದ್ಯಾರ್ಥಿ ಜೀವನದಲ್ಲಿಯೇ ಪ್ರಕಟಗೊಂಡ ಇವರ ಮೊದಲ ಕಾವ್ಯ ಸಂಕಲನ ಬೇಡಿಕೆ ಹಾಗೂ ತದ ನಂತರದಲ್ಲಿ ಬಂದ ಆಸ್ಪೋಟ ಇವರ ಬಂಡಾಯ ಮನೋಭೂಮಿಕೆ ಯನ್ನು ಚನ್ನಾಗಿ ಪರಿಚಯಿಸಿದ್ದವು. ಎರಡೂವರೆ ದಶಕಗಳ ಹಿಂದೆ ಮಹಾಲಿಂಗಪುರಕ್ಕೆ ಕನ್ನಡ
ಉಪನ್ಯಾಸಕರಾಗಿ ಬಂದು ಕೇವಲ ವಿದ್ಯಾರ್ಥಿ ಗಳಿಗೆ ಕನ್ನಡ ಬೋಧನೆ ಮಾತ್ರ ಮಾಡದೇ ತಾನಿರುವ ಪರಿಸರವನ್ನೂ ಸಾಹಿತ್ಯ ಹಾಗೂ ಸಂಸ್ಕೃತಿಯ ಬೀಡನ್ನಾಗಿಸಬೇಕು ಎಂಬ ಕನಸು ಕಾಣುತ್ತಾರೆ.

ರಾಜ್ಯದ ವಾಣಿಜ್ಯ ನಗರಗಳಲ್ಲಿ ಮಹಾಲಿಂಗ ಪುರಕ್ಕೆ ಒಂದು ವಿಶಿಷ್ಟ ಸ್ಥಾನವಿದೆ. ಮಂಡ್ಯ ಬಿಟ್ಟರೆ ಇಲ್ಲಿಯಷ್ಟು ಬೆಲ್ಲ,  ರಾಜ್ಯದ ಬೇರಾವ ಪ್ರದೇಶ ದಲ್ಲೂ ತಯಾರಾಗುವುದಿಲ್ಲ. ರಾಜ್ಯದ ಬೊಕ್ಕಸಕ್ಕೆ ಅತ್ಯಂತ ಹೆಚ್ಚು ತೆರಿಗೆ ನೀಡುವ ಪಟ್ಟಣಗಳಲ್ಲಿ ಇದೂ ಒಂದು. ಆದರೆ ಸಾಹಿತ್ಯ ಕ್ಷೇತ್ರದಲ್ಲಿ ಮಾತ್ರ ಹೇಳಿಕೊಳ್ಳುವ ಯಾವ ದೊಡ್ಡ ಸಾಧನೆಗಳೂ ಆಗಿರಲಿಲ್ಲ.

ಡಾ.ಅಶೋಕಗೆ ಎರಡು ಕವನ ಸಂಕಲನಗಳ ಹಿನ್ನೆಲೆ ಇತ್ತು. ಪ್ರಕಟಗೊಂಡ ಕವನ ಸಂಕಲನಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿ ಕೊಂಡಾಗ ವಿದ್ಯಾರ್ಥಿಗಳೂ ಸಾಹಿತಿಯೊಬ್ಬರು ನಮ್ಮ ಗುರುಗಳು ಎಂಬ ಹೆಮ್ಮೆಯನ್ನು ಪ್ರದರ್ಶಿ ಸುತ್ತಿದ್ದರು. ನಿಧಾನವಾಗಿ ಇವರ ಪ್ರತಿಭೆಯನ್ನು ಗುರುತಿಸಿದ ಸ್ಥಳೀಯರು ಇವರೊಂದಿಗೆ ಸಾಹಿತ್ಯದ ವಿಷಯಗಳನ್ನು ಹಂಚಿಕೊಳ್ಳಲಾರಂಭಿಸಿದರು. 

ಮಹಾಲಿಂಗಪುರದ ಅನೇಕ ಸಂಘ ಸಂಸ್ಥೆಗಳು ದಶಮಾನೋತ್ಸವ, ಬೆಳ್ಳಿ ಹಬ್ಬ, ಸುವರ್ಣ ಮಹೋತ್ಸವ ಹಾಗೂ ಶತಮಾನೋತ್ಸವ ಕಾರ್ಯಕ್ರಮಗಳನ್ನು ಆಚರಿಸಿಕೊಳ್ಳುತ್ತಿರು ವಾಗ ಡಾ.ನರೋಡೆ ಅಲ್ಲಿ ಕಾರ್ಯಕ್ರಮದ ಸಲಹೆ ಸೂಚನೆ ನೀಡುವಾಗ ಸಾಂದರ್ಭಿಕವಾಗಿ ಸ್ಮರಣ ಸಂಚಿಕೆಗಳನ್ನು ಹೊರ ತರುವ ಕಾರ್ಯವನ್ನು ಮಾಡಿದರು. ಇದರಿಂದ ಅವರು ಸ್ಥಳೀಯ ಅನೇಕ ಬರಹಗಾರರನ್ನು ಹೊರತೆಗೆದು ಬರವಣಿಗೆಯ ಕಡೆಗೆ ವಾಲಿಸಿದರು. ತಲೆಯಲ್ಲಿ ಬುದ್ಧಿ ಬರುವ ಮುಂಚೆ ಕಿಸೆಯಲ್ಲಿ ದುಡ್ಡು ಬಂದು ಬೀಳುತ್ತಿದ್ದ ಇಲ್ಲಿಯ ಯುವಕರು ಬುದ್ಧಿಯಿಂದ ವಿಮುಖ ರಾಗುವುದನ್ನು ಸಾಹಿತ್ಯದ ಅಸಕ್ತಿ ಬೆಳೆಸುವ ಮೂಲಕ ತಡೆದರು.

ನದಿ ತಾನು ಹರಿದಲ್ಲೆಲ್ಲ ತನ್ನ ತೆಕ್ಕೆಗೆ ಸಿಕ್ಕ ಪಾತ್ರದ ಭೂಮಿಯನ್ನು ಫಲವತ್ತಾಗಿಸುವಂತೆ ತಮ್ಮ ಸಂಪರ್ಕಕ್ಕೆ ಬಂದ ಎಲ್ಲರನ್ನೂ ಸಾಹಿತ್ಯ ಹಾಗೂ ಸಂಸ್ಕೃತಿಯೆಡೆಗೆ ಕರೆದೊಯ್ದರು. ಎರಡೂವರೆ ದಶಕದ ಮಹಾಲಿಂಗಪುರ ವಾಸ್ತವ್ಯ ಅವರಿಂದ ಎಂಟು ಕವನ ಸಂಕಲನಗ ಳನ್ನು ಬರೆಯಿಸಿದೆ, ಇವರ ಏಕಲವ್ಯನ ಪಾತ್ರದ ಕುರಿತು ಮಾಡಿದ ಸಂಶೋಧನೆ ಮಹಾಲಿಂಗಪು ರದಲ್ಲಿ ಅರವತ್ತರ ದಶಕದ ನಂತರ ಬಂದ ಮೊದಲ ಪಿಎಚ್‌ಡಿ. ವಿಮರ್ಶಾ ಕ್ಷೇತ್ರ ಇವರನ್ನು ಸಶಕ್ತವಾಗಿ ಬಳಸಿಕೊಂಡು ಹದಿಮೂರು ಕೃತಿಗಳನ್ನು ಬರೆಸಿದೆ. ಎಂಟು ಮಹಾ ಮಹಿಮರ ಜೀವನ ಚರಿತ್ರೆಗಳ ಮೇಲೆ ಬೆಳಕು ಚೆಲ್ಲುವ ಕೃತಿ ಗಳು ಇವರ ವ್ಯಕ್ತಿ ಸಾಧಕರನ್ನು ಗುರುತಿಸಿವೆ.

ಪ್ರವಾಸದ ಹವ್ಯಾಸ ಇವರಿಂದ ಮೂರು ಪ್ರವಾಸ ಕಥನಗಳನ್ನು ರಚಿಸುವಂತೆ ಮಾಡಿದೆ. ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಸಂಶೋ ಧನಾ ಮಾರ್ಗದರ್ಶಿ ಯಾಗಿ ಅನೇಕ ಸಂಶೋಧ ಕರನ್ನು ಡಾ.ನರೋಡೆ ನೀಡಿದ್ದಾರೆ. ಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆ ಯುವ ಮೂಲಕ ತಮ್ಮ ವಿವಿಧ ಆಸಕ್ತಿಗಳನ್ನು ಅಭಿವ್ಯಕ್ತಿಸುತ್ತ ಬಂದಿರುವ ಡಾ.ಅಶೋಕ ನರೋಡೆ ಅಥಣಿಯಲ್ಲಿ ಜರುಗುತ್ತಿರುವ ಮೂರನೇ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು. ಅವರ ತವರು ಅವರ ಸಾಹಿತ್ಯ ಸಾಧನೆ ಗಮನಿಸಿ ಅವರಿಗೆ ಈ ಗೌರವದ ಅವಕಾಶ ನೀಡಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT