ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಳದ ಫಸಲಿನ ಚಿಗುರು ತಿಂದು 12 ಕುರಿಗಳು ಸಾವು

Published 3 ನವೆಂಬರ್ 2023, 14:38 IST
Last Updated 3 ನವೆಂಬರ್ 2023, 14:38 IST
ಅಕ್ಷರ ಗಾತ್ರ

ಕುಡತಿನಿ (ತೋರಣಗಲ್ಲು): ಸಮೀಪದ ತಿಮ್ಮಲಾಪುರ ಗ್ರಾಮದ ಎಚ್‍ಎಲ್‍ಸಿ ಕಾಲುವೆ ಬಳಿ ಜಮೀನಿನಲ್ಲಿನ  ಗುರುವಾರ ಜೋಳದ ಫಸಲಿನ ಚಿಗುರು ತಿಂದು 12 ಕುರಿಗಳು ಸ್ಥಳದಲ್ಲೇ ಮೃತಪಟ್ಟಿವೆ.

ತಿಮ್ಮಲಾಪುರ ಗ್ರಾಮದ ಕುರಿಗಾಯಿಗಳಾದ ಪ್ರಕಾಶ, ನಿಂಗಪ್ಪ, ಮಲ್ಲಿ ಅವರಿಗೆ ಸೇರಿದ್ದ ತಲಾ ನಾಲ್ಕರಂತೆ ಒಟ್ಟು 12 ಕುರಿಗಳು ಮೃತಪಟ್ಟಿವೆ.

‘ಈ ಬಾರಿ ಮಳೆಯ ಕೊರತೆಯಿಂದ ಜಾನುವಾರುಗಳಿಗೆ ಮೇವಿನ ಕೊರತೆಯಿದ್ದು, ಮೇಯಿಸಲು ಗ್ರಾಮದ ಹೊರವಲಯದ ಕಾಲುವೆಯ ಬಳಿಯ ಗುಡ್ಡಕ್ಕೆ ತೆರಳಲಾಗಿತ್ತು. ಗುಡ್ಡದ ಪಕ್ಕದಲ್ಲಿನ ಜಮೀನಿನಲ್ಲಿನ  ಹಸರಿನ ಮೇವು ಕಂಡ ತಕ್ಷಣ ಕುರಿಗಳು ಓಡಿಹೋಗಿ ಜೋಳದ ಫಸಲಿನ ಚಿಗುರು ತಿಂದು ಹೊಟ್ಟೆ  ಉಬ್ಬರದಿಂದ ಮೃತಪಟ್ಟಿವೆ. ಸರ್ಕಾರ ಸೂಕ್ತ ಪರಿಹಾರ ನೀಡಿದರೆ ಅನುಕೂಲವಾಗುತ್ತದೆ’ ಎಂದು ಕುರಿಗಾಯಿ ಪ್ರಕಾಶ್ ಹೇಳಿದರು.

‘ಕುರಿಗಳು ಮೃತಪಟ್ಟ ಸ್ಥಳಕ್ಕೆ ನಮ್ಮ ಇಲಾಖೆಯ ಸಿಬ್ಬಂದಿ ತೆರಳಿ, ಮೃತಪಟ್ಟ ಎಲ್ಲ ಕುರಿಗಳ  ಪರೀಕ್ಷೆ ನಡೆಸಿದ್ದಾರೆ. ಕುರಿಗಾಯಿಗಳಿಂದ ಸರ್ಕಾರದ ಪರಿಹಾರಕ್ಕಾಗಿ ಅಗತ್ಯ ದಾಖಲೆಗಳನ್ನು ಪಡೆದು ಒಂದು ಕುರಿಗೆ ₹5000 ಪರಿಹಾರ ನೀಡಲು ಸೂಕ್ತ ಕ್ರಮವಹಿಸಲಾಗುವುದು’ ಎಂದು ಸಿದ್ಧಮ್ಮನಹಳ್ಳಿ ಗ್ರಾಮದ ಪಶುಚಿಕಿತ್ಸಾ ಕೇಂದ್ರದ ವೈದ್ಯಾಧಿಕಾರಿ ಡಾ.ಪ್ರದೀಪ್ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT