ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಳ್ಳಾರಿ | ಕಾಂಗ್ರೆಸ್‌ಗೆ ಮರಳಿದ 500 ಪಕ್ಷೇತರರು

Published 25 ಮಾರ್ಚ್ 2024, 8:28 IST
Last Updated 25 ಮಾರ್ಚ್ 2024, 8:28 IST
ಅಕ್ಷರ ಗಾತ್ರ

ಅರಸೀಕೆರೆ: ಹೋಬಳಿಯ ಯು. ಬೇವಿನಹಳ್ಳಿ ಸಮೀಪದ ಎಂ.ಜಿ ರೆಸಾರ್ಟ್‌ನಲ್ಲಿ ಭಾನುವಾರ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷ ತೊರೆದಿದ್ದ 500ಕ್ಕೂ ಹೆಚ್ಚಿನ ಮುಖಂಡರು ಮರಳಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಕಾರ್ಯಕ್ರಮದಲ್ಲಿ ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ, ‘ವಿಧಾನ ಸಭಾ ಕ್ಷೇತ್ರ ಚುನಾವಣೆಯಲ್ಲಿ ಸಿಕ್ಕ ಗೆಲುವು ಆಶಾದಾಯಕವಾಗಿರಲಿಲ್ಲ. ನಿಷ್ಠಾವಂತ ಕಾರ್ಯಕರ್ತರ ಮರು ಸೇರ್ಪಡೆಯಿಂದ ಗೆಲುವಿನ ಸಂತಸ ತಂದಿದೆ. ಚುನಾವಣೆಯಲ್ಲಿ ದುಡುಕಿನ ನಿರ್ಧಾರದಿಂದ ಶತಮಾನದ ಇತಿಹಾಸವಿರುವ ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ. ಮರು ಸೇರ್ಪಡೆಗೊಂಡು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಗೆಲ್ಲಿಸಿ ಪಕ್ಷದ ಋಣ ತೀರಿಸಬೇಕು’ ಎಂದರು.

ಕ್ಷೇತ್ರದ 57 ಕೆರೆ ತುಂಬಿಸುವ ಯೋಜನೆ ಮುಂಗಾರಿನ ಮುನ್ನವೇ ಸಾಕಾರಗೊಳ್ಳಲಿದೆ. ಶೇ90ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಬಾಕಿ ಕಾಮಗಾರಿಗೆ ತ್ವರಿತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಚುನಾವಣಾ ಉಸ್ತುವಾರಿ ಕಲ್ಲೇಶ್ ರಾಜ್ ಪಾಟೀಲ, ‘ವಿಧಾನ ಸಭಾ ಕ್ಷೇತ್ರ ಚುನಾವಣೆಯಲ್ಲಿ ಪ್ರಭಾವಕ್ಕೆ ಒಳಗಾಗಿ ಪಕ್ಷ ತೊರೆದಿದ್ದು, ಮರಳಿ ಪಕ್ಷಕ್ಕೆ ಹಿಂತಿರುಗಿ ಬರುತ್ತಿರುವುದು ಪಕ್ಷದ ಬಲವರ್ಧನೆಗೆ ಹೆಚ್ಚಿಸಿದೆ’ ಎಂದರು

ಎಸ್.ಟಿ ಘಟಕದ ರಾಜ್ಯ ಉಪಾಧ್ಯಕ್ಷ ಕೆ.ಪಿ ಪಾಲಯ್ಯ , ಮುಖಂಡ ಯಶವಂತ ಗೌಡ, ಎಸ್.ಎಸ್. ಸಮರ್ಥ ಮಾತನಾಡಿದರು. ಅರಸೀಕೆರೆ ಬ್ಲಾಕ್ ಅಧ್ಯಕ್ಷ ಎಸ್.ಮಂಜುನಾಥ್ ಜಗಳೂರು ಬ್ಲಾಕ್ ಅಧ್ಯಕ್ಷ ಸಂಶೀರ್, ಮುಖಂಡ ತಿಪ್ಪೇಸ್ವಾಮಿ, ಮಹಾಂತೇಶ್ ನಾಯ್ಕ, ಶಿವಕುಮಾರ್ ಸ್ವಾಮಿ, ಮಹೇಶ್ವರಪ್ಪ, ಹನುಮಂತಪ್ಪ, ಪಲ್ಲಗಟ್ಟಿ ಶೇಖರಪ್ಪ, ನಾಗರತ್ನಮ್ಮ, ವಿಜಯ್, ಸಲಾಂ ಸಾಬ್ ಇದ್ದರು.

ಅರಸೀಕೆರೆ ಹೋಬಳಿಯ ಯು. ಬೇವಿನಹಳ್ಳಿ ಸಮೀಪದ ಎಂ.ಜಿ ರೆಸಾರ್ಟ್ ನಲ್ಲಿ ಭಾನುವಾರ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷ ತೊರೆದಿದ್ದ 500ಕ್ಕೂ ಹೆಚ್ಚಿನ ಮುಖಂಡರು ಮರಳಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಅರಸೀಕೆರೆ ಹೋಬಳಿಯ ಯು. ಬೇವಿನಹಳ್ಳಿ ಸಮೀಪದ ಎಂ.ಜಿ ರೆಸಾರ್ಟ್ ನಲ್ಲಿ ಭಾನುವಾರ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷ ತೊರೆದಿದ್ದ 500ಕ್ಕೂ ಹೆಚ್ಚಿನ ಮುಖಂಡರು ಮರಳಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT