636 ತಾಣಗಳಿಗೆ ಲಾರ್ವಾಹಾರಿ ಮೀನು
ಬಳ್ಳಾರಿ ಜಿಲ್ಲೆಯ ಕೆರೆ, ಹೊಂಡ, ಕುಂಟೆ, ಕಲ್ಯಾಣಿ, ಬಾವಿ ಮತ್ತು ತಾತ್ಕಾಲಿಕವಾಗಿ ನೀರು ನಿಲ್ಲುವ ಸ್ಥಳಗಳೂ ಸೇರಿದಂತೆ ಒಟ್ಟು 636 ತಾಣಗಳಲ್ಲಿ ಲಾರ್ವಾಹಾರಿ ಗಪ್ಪಿ ಮತ್ತು ಗ್ಯಾಂಬೂಜಿಯಾ ಮೀನುಗಳನ್ನು ಬಿಡಲಾಗಿದೆ. ಈ ಮೀನುಗಳು ಈಡಿಸ್ ಈಜಿಪ್ಟಿ ಸೊಳ್ಳೆಯ ಮೊಟ್ಟೆ ಮತ್ತು ಲಾರ್ವಾಗಳೇನಾದರೂ ನೀರಿನಲ್ಲಿ ಉತ್ಪತ್ತಿಯಾಗುತ್ತಿದ್ದರೆ ಅವುಗಳನ್ನು ತಿಂದು ಜೀವಿಸುತ್ತವೆ.
ಬಳ್ಳಾರಿಯ 166 ತಾಣಗಳಲ್ಲಿ, ಕುರುಗೋಡು–76, ಕಂಪ್ಲಿಯ 101, ಸಿರುಗುಪ್ಪದ–137, ಸಂಡೂರಿನ 152 ತಾಣಗಳಲ್ಲಿ ಈ ಮೀನುಗಳನ್ನು ಬಿಡಲಾಗಿದೆ. ಆರೋಗ್ಯ ಇಲಾಖೆಯೇ ಈ ಮೀನುಗಳನ್ನು ಬೆಳೆಸಿ ಅಗತ್ಯವಿರುವ ಕಡೆ ಬಿಡುತ್ತದೆ.