ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದರ್ಶನ ಪರ ವಕೀಲರು ವಾದ ಮಾಡಬಾರದು: ಟಿ.ಎಚ್.ಎಂ.ರಾಜಕುಮಾರ್

ವೀರಶೈವ ಸಮಾಜದಿಂದ ಪ್ರತಿಭಟನೆ: ಹತ್ಯೆಗೆ ಆಕ್ರೋಶ
Published 18 ಜೂನ್ 2024, 14:21 IST
Last Updated 18 ಜೂನ್ 2024, 14:21 IST
ಅಕ್ಷರ ಗಾತ್ರ

ಕಂಪ್ಲಿ: ಚಿತ್ರದುರ್ಗದ ರೇಣುಕಸ್ವಾಮಿ ಹತ್ಯೆ ಖಂಡಿಸಿ ಕಂಪ್ಲಿ ತಾಲ್ಲೂಕು ವೀರಶೈವ ಸಂಘ, ಶ್ರೀಆದಿ ಜಗದ್ಗುರು ರೇಣುಕಾಚಾರ್ಯ ಸೇವಾ ಟ್ರಸ್ಟ್ ಹಾಗೂ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಪದಾಧಿಕಾರಿಗಳು ಬೈಕ್ ರ್‍ಯಾಲಿ ನಡೆಸಿ ತಹಶೀಲ್ದಾರ್ ಶಿವರಾಜ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ವೀರಶೈವ ಸಮಾಜದ ಮುಖಂಡ ಕೆ.ಎಂ.ಹೇಮಯ್ಯಸ್ವಾಮಿ ಮಾತನಾಡಿ, ಹತ್ಯೆ ಮಾಡಿದ ಮತ್ತು ಈ ಕೃತ್ಯಕ್ಕೆ ಸಹಕರಿಸಿದವರೆಲ್ಲರಿಗೂ ಗಲ್ಲು ಶಿಕ್ಷೆ ವಿಧಿಸಬೇಕು. ಯಾವುದೇ ಪ್ರಭಾವಿಗಳ ಒತ್ತಡಕ್ಕೆ ಮಣಿಯದೆ ಪಾರದರ್ಶಕ ತನಿಖೆಗೆ ಸರ್ಕಾರ ಸಹಕರಿಸಬೇಕು ಎಂದು ಆಗ್ರಹಿಸಿದರು.

ರೇಣುಕಾಚಾರ್ಯ ಸೇವಾ ಟ್ರಸ್ಟ್ ಅಧ್ಯಕ್ಷ ಟಿ.ಎಚ್.ಎಂ.ರಾಜಕುಮಾರ್ ಮಾತನಾಡಿ, ಪ್ರಸ್ತುತ ಹತ್ಯೆ ಪ್ರಕರಣದ ಆರೋಪಿಗಳ ಪರವಾಗಿ ಯಾವ ವಕೀಲರು ನ್ಯಾಯ ಮಂಡನೆ ಮಾಡಬಾರದು. ವಿಚಾರಣೆ ಹಂತದಲ್ಲಿರುವ ಆರೋಪಿಗಳಿಗೆ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಎಂದು ಒತ್ತಾಯಿಸಿದರು.

ವೀರಶೈವ ಸಮಾಜದ ಪ್ರಮುಖರಾದ ಅರವಿ ಬಸವನಗೌಡ, ವಾಲಿ ಕೊಟ್ರಪ್ಪ, ಎಸ್.ಎಸ್.ಎಂ. ಚನ್ನಯ್ಯಸ್ವಾಮಿ, ಬಿ.ವಿ. ಗೌಡ, ಎನ್.ಎಂ. ಪತ್ರೆಯ್ಯಸ್ವಾಮಿ, ಬಳೆ ಮಲ್ಲಿಕಾರ್ಜುನ, ಗೌಳೇರು ಶೇಖರಪ್ಪ, ಎಲಿಗಾರ ವೆಂಕಟರೆಡ್ಡಿ, ನಂದಿಕೋಲು ಶಿವಾನಂದ, ಎಸ್. ಬಂಡೆಯ್ಯಸ್ವಾಮಿ, ಯು.ಎಂ. ವಿದ್ಯಾಶಂಕರ, ಸಾಮಾಜಿಕ ಕಾರ್ಯಕರ್ತರ ವೇದಿಕೆ ಪದಾಧಿಕಾರಿಗಳಾದ ಗೋಪಿನಾಥ್, ಶ್ರೀನಿವಾಸ್, ವೀರಭದ್ರ ಸೇರಿ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT