ಹರಪನಹಳ್ಳಿ : ತಾಲ್ಲೂಕಿನ ಅರಸೀಕೆರೆ ಕೋಲಶಾಂತೇಶ್ವರ ಮಠದ ಆವರಣದ ಮೂಲಕ ತೆರಳಿದ ಕೊಟ್ಟೂರೇಶ್ವರ ಭಕ್ತರಿಗೆ ಮಂಗಳವಾರ ಪ್ರಸಾದ ವಿತರಿಸಲಾಯಿತು.

ಶಿವಮೊಗ್ಗ, ಚನ್ನಗಿರಿ, ಹೊನ್ನಾಳಿ, ಹರಿಹರ, ದಾವಣಗೆರೆ ಮೂಲಕ ತೆರಳಿದ ಭಕ್ತರಿಗೆ ಕೋಲಶಾಂತೇಶ್ವರ ಮಠದ ಆವರಣದಲ್ಲಿ ವಿಶ್ರಾಂತಿಗೆ ವ್ಯವಸ್ಥೆ ಕಲ್ಪಿಸಿ, ಊಟೋಪಚಾರ ನೀಡಲಾಯಿತು. ಊಟ, ತಿಂಡಿ, ನೀರು, ಮಜ್ಜಿಗೆ, ಬಿಸ್ಕೇಟ್, ಹಣ್ಣ, ಹಂಪಲು ವಿತರಿಸಿದರು. ಮಠದಲ್ಲಿ ರೊಟ್ಟಿ, ಪಾಯಸ, ಕಾಯಿಪಲ್ಯ, ಹೆಸರುಕಾಳು ಪಲ್ಲೆ, ಚಟ್ನಿ, ಅನ್ನ ಸಾಂಬಾರ್, ಪಲಾವ್, ಮಜ್ಜಿಗೆ ವ್ಯವಸ್ಥೆ ಮಾಡಲಾಗಿತ್ತು.

ಕೋಲಶಾಂತೇಶ್ವರ ಮಠದ ಶಾಂತಲಿಂಗ ಸ್ವಾಮೀಜಿ ಚಾಲನೆ ನೀಡಿದರು. ಮೈಸೂರು ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಡೀನ್ ಚಂದ್ರೆಗೌಡ ಮಾತನಾಡಿದರು. ಶಾಂತಾ ಪಾಟೀಲ್, ವೈ. ಅಣ್ಣಪ್ಪ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ಎಂ.ಸುರೇಶ್, ಐ.ಸಲಾಂ ಸಾಹೇಬ್, ನಾರನಗೌಡ, ಹೆಚ್. ಸಿದ್ದೇಶ್ವರ, ಬೆಟ್ಟಪ್ಪ ಪ್ರಶಾಂತ್,ಎ. ಹೆಚ್. ಕೊಟ್ರೇಶ್, ಎ.ಎಚ್. ಈಶಣ್ಣ, ನಂದೀಶ್, ಯೋಗೀಶ್, ಹಾದಿಮನಿ ಪ್ರದೀಪ್, ಮಂಜಪ್ಪ, ವಿನಾಯಕ, ರಮೇಶ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.