‘ವಾಲ್ಮೀಕಿ ಹಗರಣ: ಪುರಾವೆ ಲಭ್ಯ’
‘ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಅವರು ಇದ್ದಾರೆ. ಮೂರು ವರ್ಷಗಳ ನಂತರ ಬದಲಾವಣೆ ಮಾಡುವ ಅವಶ್ಯಕತೆ ಬಂದರೆ ಮುಂದಿನ ನಿರ್ಧಾರ ಪಕ್ಷದಿಂದ ಕೈಗೊಳ್ಳಲಿದೆ. ವಾಲ್ಮೀಕಿ ಹಗರಣಕ್ಕೆ ಸಂಬಂಧಿಸಿದಂತೆ ಶಾಸಕ ಭರತ್ ರೆಡ್ಡಿ ಜೆ.ಎನ್.ಗಣೇಶ್ ಬಿ.ನಾಗೇಂದ್ರ ಡಾ.ಶ್ರೀನಿವಾಸ್ ಅವರು ವಾಲ್ಮೀಕಿ ನಿಗಮದ ಹಣವನ್ನು ತಂದು ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ಸೋಲಿಸಿದ್ದಾರೆ. ಈ ಬಗ್ಗೆ ಡಿಜಿಟಲ್ ಪುರಾವೆಗಳು ಸಹ ಸಿಕ್ಕಿವೆ. ಇಡಿ ತನಿಖೆ ನಡೆಸಿದ ಬಳಿಕ ಈಗ ಸಿಬಿಐ ಪ್ರವೇಶಿಸಿದೆ. ತನಿಖೆ ವೇಳೆ ನಾಗೇಂದ್ರ ಅವರು ಪುನಃ ಜೈಲಿಗೆ ಹೋದರೂ ಆಶ್ಚರ್ಯವಿಲ್ಲ’ ಎಂದು ಹೇಳಿದರು. ‘ದೇಶದಲ್ಲಿ ಸರ್ಕಾರದ ಹಣವನ್ನು ತಿಂದವರು ತಪ್ಪಿಸಿಕೊಂಡ ಇತಿಹಾಸವಿಲ್ಲ. ಹೀಗಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ’ ಎಂದು ಶ್ರೀರಾಮುಲು ತಿಳಿಸಿದರು.