ಹೊಸಪೇಟೆ (ವಿಜಯನಗರ): ಕರ್ನಾಟಕ ಪ್ರದೇಶ ಬಲಿಜ ಸಂಘ ತಾಲ್ಲೂಕು ಘಟಕದಿಂದ ಗುರುವಾರ ನಗರದಲ್ಲಿ ತಾಲ್ಲೂಕು ಆರೋಗ್ಯ ಇಲಾಖೆಗೆ ಆಮ್ಲಜನಕ ಸಾಂದ್ರಕ ಯಂತ್ರ ಹಾಗೂ ₹2 ಲಕ್ಷ ಮೊತ್ತದ ಔಷಧ ನೀಡಲಾಯಿತು.

ಸಂಘದ ಮುಖಂಡರಾದ ಆರ್.ಕೆ. ರವಿಕುಮಾರ್, ಮಧುಸೂದನ್ ಅವರು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಭಾಸ್ಕರ್ ಅವರಿಗೆ ಆಮ್ಲಜನಕ ಸಾಂದ್ರಕ ಯಂತ್ರ, ಔಷಧ, ಮಾಸ್ಕ್, ಸ್ಯಾನಿಟೈಸರ್ ಹಸ್ತಾಂತರಿಸಿದರು.

ಮಧುಸೂದನ್ ಮಾತನಾಡಿ, ‘ಬಲಿಜ ಸಂಘದಿಂದ ಇಡೀ ರಾಜ್ಯದಾದ್ಯಂತ ಎಲ್ಲ ಆರೋಗ್ಯ ಕೇಂದ್ರಗಳಿಗೆ ಅಗತ್ಯ ಸಾಧನ, ಔಷಧ ವಿತರಿಸಲಾಗುತ್ತಿದೆ. ಅದರ ಭಾಗವಾಗಿ ತಾಲ್ಲೂಕು ಆರೋಗ್ಯ ಇಲಾಖೆಗೆ ₹2 ಲಕ್ಷ ಮೊತ್ತದ ವಸ್ತುಗಳನ್ನು ನೀಡಲಾಗಿದೆ. ಕೋವಿಡ್ ರೋಗಿಗಳಿಗೆ ಸಕಾಲಕ್ಕೆ ಚಿಕಿತ್ಸೆ, ಔಷಧ ಸಿಕ್ಕು, ಅವರ ಜೀವ ಉಳಿಯಬೇಕು’ ಎಂದು ಹೇಳಿದರು.

ಸಂಘದ ಜಗದೀಶ್ವರ, ಆದಿತ್ಯ, ಸತೀಶ್ ಕಾಂಡ್ರ, ಸುಮಿತ್ರಮ್ಮ, ಗೀತಾ, ಶ್ರೀನಿವಾಸ, ಕೀರ್ತಿರಾಜ, ಜಿಲ್ಲಾ ಆರೋಗ್ಯ ನಿರೀಕ್ಷಣಾಧಿಕಾರಿ ಎಂ. ಧರ್ಮನಗೌಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.