ಬಳ್ಳಾರಿ: ಬಳ್ಳಾರಿ ಮಹಾನಗರ ಪಾಲಿಕೆಯ 2023–24ನೇ ಸಾಲಿನ ಲೆಕ್ಕ ಪರಿಶೋಧನಾ ಕರಡು ವರದಿಯಲ್ಲಿ ಪಾಲಿಕೆಯ ಆರ್ಥಿಕತೆ ಕುರಿತ ಗಂಭೀರವಾದ ನ್ಯೂನತೆಗಳು ಬಯಲಾಗಿವೆ.

ರಾಜ್ಯ ಲೆಕ್ಕಪರಿಶೋಧನಾ ಮತ್ತು ಲೆಕ್ಕಪತ್ರ ಇಲಾಖೆ ನಿಯೋಜಿಸಿದ ಬಳ್ಳಾರಿಯ ಸ್ಥಳೀಯ ಲೆಕ್ಕಪತ್ರಪರಿಶೋಧನಾ ವಲಯದ ಸಹಾಯಕ ನಿಯಂತ್ರಕರು ಪಾಲಿಕೆಯ ಹತ್ತಾರು ಲೋಪದೋಷಗಳು, ಆಕ್ಷೇಪಣೆಗಳು ಮತ್ತು ವಸೂಲಾತಿಗೆ ಸೂಚಿಸಲಾದ ಖಂಡಿಕೆಗಳ ಬಗ್ಗೆ ತಮ್ಮ ಕರಡು ವರದಿಯಲ್ಲಿ ಉಲ್ಲೇಖಿಸಿದ್ದಾರೆ.

2023–24ನೇ ಸಾಲಿನ ಲೆಕ್ಕ ಪರಿಶೋಧನೆಯನ್ನು ಒಟ್ಟು 7 ಲೆಕ್ಕ ಪರಿಶೋಧಕರು 2025ರ ಫೆ. 3ರಿಂದ ಮಾರ್ಚ್ 29ರ ವರೆಗೆ ಪರಿಶೋಧನೆ ಮಾಡಿದ್ದಾರೆ. ವರದಿಯಲ್ಲಿ ಒಟ್ಟು 44 ಬಗೆಯ ಲೋಪದೋಷಗಳನ್ನು ಪಟ್ಟಿ ಮಾಡಲಾಗಿದೆ.

ಸಂಸ್ಥೆಯ ನಗದು ಪುಸ್ತಕವನ್ನು ಆಯಾ ದಿನವೇ ಮುಕ್ತಾಯಗೊಳಿಸಿ ದೃಢೀಕರಿಸದಿರುವುದು, ಆಕ್ಷೇಪಿಸಲಾದ ಮತ್ತು ವಸೂಲಿಗೆ ಸೂಚಿಸಿದ ಮೊತ್ತಗಳಲ್ಲಿ ಅಜಗಜಾಂತರ ಇರುವುದು, ಬಜೆಟ್ ಮಂಡನೆಯಲ್ಲಿ ಆಗಿರುವ ವಿಳಂಬ, ಮಂಡಿಸಿದ ಬಜೆಟ್ನಲ್ಲೂ ನ್ಯೂನತೆ, ಬಜೆಟ್ ನಿಯಂತ್ರಣಾ ವಹಿ ನಿರ್ವಹಿಸದೇ ಇರುವುದನ್ನು ಬೊಟ್ಟು ಮಾಡಲಾಗಿದೆ. ಇದು ಬಳ್ಳಾರಿ ಪಾಲಿಕೆಯ ಅಶಿಸ್ತನ್ನು ಬಟಾಬಯಲು ಮಾಡಿದೆ.

ವರದಿಯಲ್ಲಿ ಒಟ್ಟು 82 ಆಕ್ಷೇಪಣೆಗಳಿಂದ ₹63 ಕೋಟಿ ವಸೂಲಾತಿಗೆ ಸೂಚಿಸಲಾಗಿತ್ತು. ಆದರೆ, ₹19 ಕೋಟಿ ಮಾತ್ರ ವಸೂಲಿ ಮಾಡಲಾಗಿದೆ.

ಮಾಹಿತಿ ಹಕ್ಕಿನ ವಿವರಗಳನ್ನು ಹಾಜರುಪಡಿಸುವಂತೆ ವಿಚಾರಣಾ ಪತ್ರದ ಮೂಲಕ ಪಾಲಿಕಗೆ ಸೂಚಿಸಲಾಗಿತ್ತು. ಆದರೆ, ಸಂಬಂಧಪಟ್ಟ ಅಧಿಕಾರಿಯು ಮಾಹಿತಿ ಹಕ್ಕಿನ ಕುರಿತ ಸ್ವೀಕೃತ ಅರ್ಜಿಗಳು ಮತ್ತು ಸ್ವೀಕೃತ ಮೊತ್ತದ ವಿವರಗಳನ್ನು ನೀಡಿಲ್ಲ ಎಂದು ದಾಖಲಿಸಲಾಗಿದೆ.

ಚರ–ಸ್ಥಿರಾಸ್ತಿಯ ರಿಜಿಸ್ಟರ್ ಇಲ್ಲ: 2023–24ರ ಹೊತ್ತಿಗೆ ಪಾಲಿಕೆಯು ಹೊಂದಿದ್ದ ಚರ–ಸ್ಥಿರಾಸ್ತಿ ಎಷ್ಟು ಎಂದು ಕೇಳಲಾದ ವಿವರಣೆಗೆ ಪಾಲಿಕೆ ಉತ್ತರವನ್ನೇ ನೀಡಿಲ್ಲ. ಪಾಲಿಕೆ ನಡೆಯನ್ನು ಲೆಕ್ಕಪರಿಶೋಧಕರು ಕಟುವಾಗಿ ಟೀಕಿಸಿದ್ದಾರೆ. ಚರ–ಸ್ಥಿರಾಸ್ತಿ ರಿಜಿಸ್ಟರ್ಗಳನ್ನು ನಿರ್ವಹಿಸದೇ ಇರುವುದರಿಂದ ಪಾಲಿಕೆ ಹೊಂದಿರುವ ಆಸ್ತಿ ಎಷ್ಟು ಎಂದು ಪಾಲಿಕೆಗೆ ತಿಳಿಯುವುದಿಲ್ಲ. ಈ ವಹಿಗಳ ಅನುಪಸ್ಥಿತಿಯಲ್ಲಿ ಪಾಲಿಕೆಯ ಆಸ್ತಿಗಳ ಅತಿಕ್ರಮಣ ಹಾಗೂ ಪರಭಾರೆಯಾಗುವ ಸಾಧ್ಯತೆಗಳು ಇವೆ. ಈ ವಹಿ ನಿರ್ವಹಿಸುವಲ್ಲಿ ಪಾಲಿಕೆಯ ನಿರಾಸಕ್ತಿಯು ತೀವ್ರ ಆಕ್ಷೇಪಾರ್ಯ ಎಂದು ಟೀಕಿಸಲಾಗಿದೆ. ಈ ಕೂಡಲೇ ತುರ್ತು ಕ್ರಮ ಜರುಗಿಸಿ, ಲೆಕ್ಕ ಪರಿಶೋಧನೆಗೆ ಹಾಜರುಪಡಿಸಬೇಕು ಎಂದು ಕರಡು ಲೆಕ್ಕಪರಿಶೋಧನಾ ವರದಿಯಲ್ಲಿ ಸೂಚಿಸಿದೆ.

ನಷ್ಟ, ಹಣ ದುರುಪಯೋಗದ ವರದಿ ಮಾಡಿಲ್ಲ: ಇದರ ಜತೆಗೆ, ಹಣ ದುರುಪಯೋಗ, ನಷ್ಟ, ಉಗ್ರಾಣದಲ್ಲಿ ಹಣ ದುರ್ವಿನಿಯೋಗ, ಸ್ಥಿರಾಸ್ತಿ, ಗಂಭೀರವಾದ ಅಕ್ರಮಗಳ ಬಗ್ಗೆ ಸರ್ಕಾರಕ್ಕೆ ವರದಿ ನೀಡುವಲ್ಲಿಯೂ ಪಾಲಿಕೆ ವಿಫಲವಾಗಿದೆ. ಇಂಥ ಅಕ್ರಮಗಳು ನಡೆದಾಗ ವಸೂಲಿಗೆ ಕೈಗೊಂಡ ಕ್ರಮಗಳ ಕುರಿತ ಸಂಪೂರ್ಣ ವಿವರವನ್ನು ಸರ್ಕಾರಕ್ಕೆ ಸಲ್ಲಿಸಲು ಶಾಸನಬದ್ಧ ನಿಯಮದಲ್ಲಿ ಸೂಚಿಸಲಾಗಿದೆ. ಆದರೆ, ಪಾಲಿಕೆ ಇದನ್ನು ಪಾಲಿಸಿಲ್ಲ ಎಂದು ಲೆಕ್ಕ ಪರಿಶೋಧನಾ ಕರಡು ವರದಿ ಹೇಳುತ್ತಿದೆ.

ಲೇಔಟ್ಗಳ ಮಾಹಿತಿಯನ್ನೇ ಕೊಟ್ಟಿಲ್ಲ

2023–24ನೇ ಆವಧಿಯಲ್ಲಿ ಅಭಿವೃದ್ಧಿಪಡಿಸಿ ಪಾಲಿಕೆ ಸುಪರ್ದಿಗೆ ಪಡೆದುಕೊಂಡ ಬಡಾವಣೆಗಳ ಕಡತಗಳ ವಿವರಗಳನ್ನು ಹಾಗೂ ಕಟ್ಟಡ ಪರವಾನಗಿ ನೀಡಿದ ವಿವರಗಳನ್ನು ಒದಗಿಸುವಂತೆ ಲೆಕ್ಕ ಪರಿಶೋಧಕರು ಸೂಚನೆ ನೀಡಿದ್ದರು. ಆದರೆ ಈ ವಿವರಗಳನ್ನೂ ಲೆಕ್ಕ ಪರಿಶೋಧಕ ತಂಡಕ್ಕೆ ಪಾಲಿಕೆ ನೀಡಿಲ್ಲ. ಬಡಾವಣೆ ನಿರ್ಮಾಣಕ್ಕೆ ಸಂಬಂಧಿಸಿದ ಮಹಾನಗರ ಪಾಲಿಕೆಯಲ್ಲಿನ ಪ್ರಕ್ರಿಯೆ ಪೂರ್ಣಗೊಳಿಸಲು ಲಂಚಕ್ಕೆ ಬೇಡಿಕೆ ಇಡುತ್ತಿದ್ದ ಇಬ್ಬರು ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಪೊಲೀಸರು ಜುಲೈ 6ರಂದು ಎಫ್ಐಆರ್ ದಾಖಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಬಡಾವಣೆ ನಿರ್ಮಾಣ ಮಾಡಬೇಕಿದ್ದರೆ ರಸ್ತೆ ಮತ್ತು ಉದ್ಯಾನಕ್ಕೆಂದು ನಿಗದಿತ ಪ್ರದೇಶವನ್ನು ಮೀಡಲಿಡಬೇಕಾಗುತ್ತದೆ. ಈ ಜಾಗವನ್ನು ಪಾಲಿಕೆಗೆ ಹಸ್ತಾಂತರಿಸಲಾಗುತ್ತದೆ. ಈ ಪ್ರಕ್ರಿಯೆಗೂ ಲಂಚ ಪಡೆಯುತ್ತಿರುವ ಆರೋಪ ಪಾಲಿಕೆ ಅಧಿಕಾರಿಗಳ ಮೇಲೆ ಬಂದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.