ಬಳ್ಳಾರಿ: ಡಿಜಿಟಲ್ ವಂಚನೆಯಿಂದ ಸಿಕ್ಕ ಹಣವನ್ನು ಅಕ್ರಮವಾಗಿ ವರ್ಗಾಯಿಸಲು, ಸ್ವೀಕರಿಸಲು ಅಥವಾ ಅಡಗಿಸಿಡಲು ಸೈಬರ್ ಅಪರಾಧಿಗಳು ಬಳಸುತ್ತಿರುವ ‘ಮ್ಯೂಲ್ ಖಾತೆ’ಗಳ ವಿರುದ್ಧ ಬಳ್ಳಾರಿಯ ಸೈಬರ್ ಕ್ರೈಂ ಪೊಲೀಸ್ ಠಾಣೆ (ಸಿಸಿಪಿಎಸ್–ಈ ಮೊದಲು ಸಿಇಎನ್) ಕಾರ್ಯಾಚರಣೆ ಕೈಗೊಂಡಿದೆ.

ರಾಜ್ಯ ಗೃಹ ಇಲಾಖೆ ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಿನ ಸಿಐಡಿ ಕಚೇರಿಯಲ್ಲಿ ಅತ್ಯಾಧುನಿಕ ‘ಸೈಬರ್ ಕಮಾಂಡ್ ಸೆಂಟರ್ (ಸಿಸಿಸಿ)’ ಅನ್ನು ಸ್ಥಾಪಿಸಿದೆ. ಈ ಘಟಕವು ರಾಜ್ಯದಲ್ಲಿರಬಹುದಾದ ‘ಮ್ಯೂಲ್ ಖಾತೆ’ಗಳನ್ನು ಪತ್ತೆ ಮಾಡುವಲ್ಲಿ ನಿರತವಾಗಿದೆ. ರಾಜ್ಯದಾದ್ಯಂತ ಭಾರಿ ಸಂಖ್ಯೆಯ ‘ಮ್ಯೂಲ್ ಖಾತೆ’ಗಳಿರುವುದು ಪತ್ತೆ ಮಾಡಿರುವ ಈ ಘಟಕ, ಅವುಗಳನ್ನು ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಲು ಪ್ರತಿ ಜಿಲ್ಲೆಗಳ ಸಿಸಿಪಿಎಸ್ಗಳಿಗೆ ಸೂಚಿಸಿದೆ.

ಅದರಂತೆ, ಬಳ್ಳಾರಿ ಜಿಲ್ಲೆಯ ವ್ಯಾಪ್ತಿಯಲ್ಲಿ ಒಟ್ಟು 4,596 ಮ್ಯೂಲ್ ಖಾತೆಗಳಿರುವುದನ್ನು ಪತ್ತೆ ಮಾಡಿರುವ ಸಿಐಡಿ ಘಟಕ, ಇವುಗಳನ್ನು ಪರಿಶೀಲಿಸಲು ತಿಳಿಸಿದೆ.

ಬಳ್ಳಾರಿ ಸಿಸಿಪಿಎಸ್ಗೆ ಸಿಕ್ಕ 4,596 ಮ್ಯೂಲ್ ಅಕೌಂಟ್ಗಳ ಪೈಕಿ 1,140 ಖಾತೆಗಳು ವಿಜಯನಗರ ಜಿಲ್ಲೆಗೆ ಸೇರಿದವಾಗಿದ್ದು, ಅವುಗಳ ಪರಿಶೀಲನೆಯನ್ನು ಅಲ್ಲಿನ ಪೊಲೀಸ್ ಇಲಾಖೆಗೆ ವರ್ಗಾಯಿಸಲಾಗಿದೆ. ಉಳಿದ 3,456 ಖಾತೆಗಳು ಮಾತ್ರ ಬಳ್ಳಾರಿಗೆ ಸಂಬಂಧಿಸಿದ್ದಾಗಿವೆ. ಇವುಗಳ ಪರಿಶೀಲನೆಯನ್ನು ಸಿಸಿಪಿಎಸ್ ಪೊಲೀಸರು ತೀವ್ರಗೊಳಿಸಿದ್ದಾರೆ.

ಈ ಖಾತೆಗಳಿಗೆ ಸಂಬಂಧಿಸಿದಂತೆ ಪೊಲೀಸರು ಮೊದಲಿಗೆ ಬ್ಯಾಂಕ್ಗಳಿಂದ ವಿವರ ಕೇಳಿದ್ದಾರೆ. ಸದ್ಯ 175 ಖಾತೆಗಳ ಕೆವೈಸಿ ತರಿಸಿಕೊಳ್ಳಲಾಗಿದ್ದು, ಇವುಗಳಲ್ಲಿ 40 ಖಾತೆಗಳನ್ನು ತೀವ್ರ ತಪಾಸಣೆಗೆ ಗುರಿಪಡಿಸಲಾಗಿದೆ. ಈ ವೇಳೆ 2 ಖಾತೆಗಳಲ್ಲಿ ಹಣದ ಅಕ್ರಮ ವಹಿವಾಟು ನಡೆದಿರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಎರಡೂ ಪ್ರಕರಣಗಳಲ್ಲಿ ಒಟ್ಟು ಐವರು ಆರೋಪಿಗಳನ್ನು ಪತ್ತೆ ಮಾಡಲಾಗಿದೆ.

ಕಾರ್ಯವಿಧಾನ: ಕಡಿಮೆ ಆದಾಯವುಳ್ಳ ಕೂಲಿ ಕಾರ್ಮಿಕರು, ಮನೆಗೆಲಸದವರು, ಚಿಲ್ಲರೆ ವ್ಯಾಪಾರಿಗಳಿಗೆ ಕಮಿಷನ್ ಆಮಿಷವೊಡ್ಡುವ ಆನ್ಲೈನ್ ವಂಚಕರು, ಖಾತೆಗಳನ್ನು ತೆರೆಯಲು ಅವರ ವೈಯಕ್ತಿಕ ದಾಖಲೆಗಳನ್ನು (ಆಧಾರ್/ಪ್ಯಾನ್) ಪಡೆಯುತ್ತಾರೆ. ಈ ದಾಖಲೆಗಳ ಆಧಾರದಲ್ಲಿ ಖಾತೆಗಳನ್ನು ತೆರೆಯುತ್ತಾರೆ. ಆನ್ಲೈನ್ ವಂಚನೆಯಲ್ಲಿ ಸಿಗುವ ಹಣವನ್ನು ಈ ಖಾತೆಗಳಿಗೆ ಹಾಕಿಸಿಕೊಳ್ಳಲಾಗುತ್ತದೆ.

ಲೇಯರ್ಗಳಲ್ಲಿ ವರ್ಗಾವಣೆ: ಸೈಬರ್ ವಂಚನೆಯಿಂದ ಬಂದ ಹಣವನ್ನು ನೇರವಾಗಿ ಪಡೆದುಕೊಂಡ ಖಾತೆಗಳನ್ನು ಲೇಯರ್ –1 ಎಂದು ಗುರುತಿಸಲಾಗುತ್ತದೆ. ಹಣವನ್ನು ವಿವಿಧ ಹಂತಗಳಲ್ಲಿ ಸುತ್ತಿ ಬಳಸಿ ವರ್ಗಾವಣೆ ಮಾಡುವುದನ್ನು ನಂತರದ ಲೇಯರ್ಗಳಲ್ಲಿ ಗುರುತಿಸಲಾಗುತ್ತದೆ. ಅಂತಿಮ ಹಂತದ ಲೇಯರ್ನಲ್ಲಿ ಹಣವನ್ನು ಕ್ರಿಪ್ಟೊಕರೆನ್ಸಿಗಳಾಗಿ ಪರಿವರ್ತಿಸಲಾಗುತ್ತದೆ ಎಂದು ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿವೆ. ಲೇಯರ್ಗಳು ಹೆಚ್ಚಾದಂತೆ ವಂಚನೆ ಪತ್ತೆಮಾಡುವುದು ಕಷ್ಟವಾಗುತ್ತಾ ಹೋಗುತ್ತದೆ ಎನ್ನಲಾಗಿದೆ. ಸಿಐಡಿ ಸೂಚನೆ ಮೇರೆಗೆ ಖಾತೆಗಳ ಪರಿಶೀಲನೆ ನಡೆಯುತ್ತಿದೆ. ಹಲವರು ಕಮಿಷನ್ ಆಸೆಗೆ ಖಾತೆ ಮಾಡಿಸಿಕೊಟ್ಟಿದ್ದಾರೆ. ಅವರಿಂದಲೇ ದೂರು ಪಡೆದು ಪ್ರಕರಣ ದಾಖಲು ಮಾಡಲಾಗಿದೆ. – ಸುಮನ್ ಡಿ.ಪಿ ಬಳ್ಳಾರಿ ಎಸ್ಪಿ

ಸಿಐಡಿ ಸೂಚನೆ ಮೇರೆಗೆ ಖಾತೆಗಳ ಪರಿಶೀಲನೆ ನಡೆಯುತ್ತಿದೆ. ಹಲವರು ಕಮಿಷನ್ ಆಸೆಗೆ ಖಾತೆ ಮಾಡಿಸಿಕೊಟ್ಟಿದ್ದಾರೆ. ಅವರಿಂದಲೇ ದೂರು ಪಡೆದು ಪ್ರಕರಣ ದಾಖಲು ಮಾಡಲಾಗಿದೆ.
– ಸುಮನ್ ಡಿ.ಪಿ ಬಳ್ಳಾರಿ ಎಸ್ಪಿ

ಸಾಲದ ಆಮಿಷವೊಡ್ಡಿ ಬಳ್ಳಾರಿಯಲ್ಲಿ ಖಾತೆ

ಬಳ್ಳಾರಿಯಲ್ಲಿ ಸದ್ಯ ಪತ್ತೆಯಾಗಿರುವ ಎರಡು ಪ್ರಕರಣಗಳಲ್ಲಿ ಸಾಲ ಕೊಡಿಸುವ ಆಮಿಷವೊಡ್ಡಿ ವ್ಯಕ್ತಿಗಳಿಂದ ನಕಲಿ ಕಂಪನಿಗಳನ್ನು ಸೃಷ್ಟಿ ಮಾಡಿ ಬ್ಯಾಂಕ್ಗಳಲ್ಲಿ ಚಾಲ್ತಿ ಖಾತೆ ಮಾಡಿಸಿರುವುದು ಪತ್ತೆಯಾಗಿದೆ. ಫೆ. 20ರಂದು ಸಿಸಿಪಿಎಸ್ನಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದ ಖಾತೆಯ ಮೇಲೆ ದೇಶದಾದ್ಯಂತ 35 ಸೈಬರ್ ವಂಚನೆ ಪ್ರಕರಣಗಳಿದ್ದದ್ದು ಗೊತ್ತಾಗಿದೆ. ಮಾ. 2ರಂದು ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದ ಖಾತೆಯಲ್ಲಿ ಒಟ್ಟು ₹64.62 ಲಕ್ಷ ಹಣ ವರ್ಗಾವಣೆ ಆಗಿರುವುದು ತಿಳಿದುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.