ಸೋಮವಾರ, 24 ನವೆಂಬರ್ 2025
×
ADVERTISEMENT
ADVERTISEMENT

ಬಳ್ಳಾರಿ | ಮತ್ತೆ ಮರಳು ಅಭಾವ: ಜನರ ಪರದಾಟ

Published : 24 ನವೆಂಬರ್ 2025, 5:41 IST
Last Updated : 24 ನವೆಂಬರ್ 2025, 5:41 IST
ಫಾಲೋ ಮಾಡಿ
Comments
ಒಂದು ಟ್ರಿಪ್‌ಶೀಟ್‌ನಲ್ಲಿ ಒಂದೇ ಲೋಡ್‌ ಸಾಗಣೆಯಾಗಬೇಕೆಂದು ಗಣಿ ಅಧಿಕಾರಿಗೆ ತಿಳಿಸಿದ್ದೇನೆ. ಇದನ್ನು ಪರಿಶೀಲಿಸಲು ಅಗತ್ಯ ಸಿಬ್ಬಂದಿ ಕೊಡುತ್ತೇನೆ. 2023ರ ಆದೇಶದ ಬಗ್ಗೆ ಜಿಲ್ಲಾಧಿಕಾರಿಯೊಂದಿಗೆ ಚರ್ಚೆ ಮಾಡಲಾಗುವುದು.
ಶೋಭಾರಾಣಿ ವಿ.ಜೆ ಬಳ್ಳಾರಿ ಪೊಲೀಸ್‌ ವರಿಷ್ಠಾಧಿಕಾರಿ 
ಅಕ್ರಮ ಆರಂಭ 
ಅಧಿಕೃತ ಮರಳು ಉದ್ಯಮಿಗಳಿಂದ ಪೂರೈಕೆ ನಿಲ್ಲುತ್ತಲೇ ಪರಿಸ್ಥಿತಿಯ ಲಾಭ ಮಾಡಿಕೊಳ್ಳಲು ಬಂದಿರುವ ಕೆಲ ದಂಧೆಕೋರರು ಅಕ್ರಮವಾಗಿ ಮರಳು ಪೂರೈಕೆ ಮಾಡಲು ಆರಂಭಿಸಿದ್ದಾರೆ. ಇವರೂ 18 ಟನ್‌ ಲೋಡ್‌ಗೆ ₹30 ಸಾವಿರದಷ್ಟು ಪಡೆಯುತ್ತಿದ್ದಾರೆ. ಆದರೆ ರಾಜ್ಯದ ಖಜಾನೆಗೆ ಸಂದಾಯವಾಗಬೇಕಾದ ಹಣ ಡಿಎಂಎಫ್‌ ನಿಧಿ ತೆರಿಗೆಯನ್ನು ವಂಚಿಸಲಾಗುತ್ತಿದೆ. ಇತ್ತೀಚೆಗಷ್ಟೇ ಬಳ್ಳಾರಿ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿರುವ ಎರಡು ಪ್ರಕರಣಗಳು ಅಕ್ರಮ ಮರಳುಗಾರಿಕೆಯನ್ನು ಸಾಕ್ಷೀಕರಿಸುತ್ತಿವೆ.  ಅಕ್ರಮ ಮಾಡಲು ರಾಜಕಾರಣಿಗಳು ಅಧಿಕಾರಿಗಳ ಅಭಯ ಇದೆ ಎಂಬ ಆರೋಪವಿದೆ ಎನ್ನಲಾಗಿದೆ. 
ನಿಗಾ ವಹಿಸದ ಗಣಿ ಇಲಾಖೆ
ಮರಳು ಪೂರೈಕೆಯಲ್ಲಿ ಇಷ್ಟು ಸಮಸ್ಯೆಯಾಗುತ್ತಿದ್ದರೂ ನೋಡಿಕೊಂಡು ಸುಮ್ಮನಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಯಾವುದೇ ಸುಧಾರಣಾ ಕ್ರಮಗಳಿಗೆ ಕೈ ಹಾಕಿದಂತೆ ಕಾಣುತ್ತಿಲ್ಲ. ಸಮಸ್ಯೆ ನಿವಾರಣೆಗೆ ಪ್ರಯತ್ನಿಸಿದಂತೆಯೂ ಕಾಣುತ್ತಿಲ್ಲ. ವಿಚಾರವನ್ನು ಜಿಲ್ಲೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹರಿಸುವ ಧೈರ್ಯವನ್ನೂ ತೋರಿಲ್ಲ. ಹೀಗಾಗಿ ಸಮಸ್ಯೆ ಬೆಳೆಯುತ್ತಿದೆ ಎನ್ನಲಾಗಿದೆ.    ‌ ಬಳ್ಳಾರಿಯಲ್ಲಿ ಗಣಿ ಜೀನ್ಸ್‌ ಕಾರ್ಮಿಕರಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿರುವವರು ಕಟ್ಟಡ ನಿರ್ಮಾಣ ಕಾರ್ಮಿಕರು. ಮರಳಿನ ಸಮಸ್ಯೆಯು ನೇರವಾಗಿ ಕೂಲಿಕಾರರ ಮೇಲೆ ದುಷ್ಪರಿಣಾಮ ಬೀರುತ್ತದೆ. ಹೀಗಾಗಿ ಜಿಲ್ಲಾಡಳಿತ ಕೂಡಲೇ ಸಮಸ್ಯೆಯ ಬಗೆಹರಿಸಬೇಕು ಎಂಬ ಒತ್ತಾಯ ಕೇಳಿಂದಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT