ಬಳ್ಳಾರಿ: ಇಲ್ಲಿನ ಎಂ.ಕೆ ನಗರದ ಮನೆಯೊಂದರಲ್ಲಿ ಮಂಗಳವಾರ ರಾತ್ರಿ ಯುವಕ ಮತ್ತು ಲಿಂಗತ್ವ ಅಲ್ಪಸಂಖ್ಯಾತರೊಬ್ಬರ ಮೃತದೇಹ ಪತ್ತೆಯಾಗಿದೆ. ಲಿಂಗತ್ವ ಅಲ್ಪಸಂಖ್ಯಾತರಾದ ಸುಹಾಸಿನಿ ಅಲಿಯಾಸ್ ದೇವರಾಜ (29) ಮತ್ತು ಶೇಖರ್ ಅಲಿಯಾಸ್ ಮಣಿ (30) ಮೃತರು.

ಬಳ್ಳಾರಿ ಹೊರವಲಯದ ಚಾಗನೂರು ಮೂಲದ ದೇವರಾಜ 9 ವರ್ಷದ ಹಿಂದೆ ಲಿಂಗಪರಿವರ್ತನೆ ಮಾಡಿಸಿಕೊಂಡಿದ್ದರು. ಬಳಿಕ ಸುಹಾಸಿನಿ ಎಂಬ ಹೆಸರಿನೊಂದಿಗೆ ಹೊಸಪೇಟೆಯಲ್ಲಿ ನೆಲೆಸಿದ್ದರು. ಅಲ್ಲಿ ಶೇಖರ್ ಎಂಬಾತನೊಂದಿಗೆ ಪರಿಚಯವಾಗಿತ್ತು.

ಬಳ್ಳಾರಿಯಲ್ಲಿ ಮನೆ ಮಾಡಿದ್ದ ಇಬ್ಬರೂ, ಆಗಾಗ ಭೇಟಿಯಾಗುತ್ತಿದ್ದರು. ಸೋಮವಾರವೂ ಇಬ್ಬರೂ ಬಳ್ಳಾರಿ ಮನೆಗೆ ಬಂದಿದ್ದದ್ದರು. ಜಗಳ ಮಾಡಿಕೊಂಡಿದ್ದರು. ಆದರೆ, ಮಂಗಳವಾರ ರಾತ್ರಿ ಹೊತ್ತಿಗೆ ಇಬ್ಬರೂ ಶವವಾಗಿ ಪತ್ತೆಯಾಗಿದ್ದಾರೆ’ ಎಂದು ಸುಹಾಸಿನಿ ಸೋದರ ವಿಜಯಕುಮಾರ್ ಪೊಲೀಸರಿಗೆ ದೂರು ನೀಡಿದ್ದಾರೆ. ಬ್ರೂಸ್ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.