ಕಂಪ್ಲಿ: ಇಲ್ಲಿಯ ಸರ್ಕಾರಿ ಪರಿಶಿಷ್ಟ ವರ್ಗಗಳ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯದಲ್ಲಿ ಜೆಸಿಐ ಕಂಪ್ಲಿ ಸೋನಾ ಸಂಸ್ಥೆ ವತಿಯಿಂದ ಮಂಗಳವಾರ ಸೆಲ್ಯೂಟ್ ಟು ಸೈಲೆಂಟ್ ಸ್ಟಾರ್ಸ್ (ಸದ್ದಿಲ್ಲದ ಸಾಧಕರಿಗೊಂದು ನಮನ) ಕಾರ್ಯಕ್ರಮ ಜರುಗಿತು.

ಸ್ಥಳೀಯ ಪ್ರಗತಿಪರ ರೈತರಾದ ಅಂಡಿ ಹುಲಿಗೆಮ್ಮ, ಯುಗಂಧರ ನಾಯ್ಡು ಮತ್ತು ಕೊಟ್ಟೂರು ರಮೇಶ್ ಅವರನ್ನು ಸನ್ಮಾನಿಸಲಾಯಿತು.

ಜೆಸಿಐ ಕಂಪ್ಲಿ ಸೋನಾ ಅಧ್ಯಕ್ಷ ಬಿ. ರಸೂಲ್ ಮಾತನಾಡಿ, ‘ರೈತರು ಬೆಳೆದ ಬೆಳೆಗಳಿಗೆ ಸಕಾಲಕ್ಕೆ ಬೆಂಬಲ ಬೆಲೆ ಘೋಷಿಸಬೇಕು. ಪರಿಹಾರಧನ, ವಿಮೆ, ಕೃಷಿ ನೀತಿಗಳು ಕೇವಲ ಘೋಷಣೆಗೆ ಸೀಮಿತಗೊಳ್ಳದೆ ಕಾರ್ಯರೂಪಕ್ಕೆ ತರುವ ಮೂಲಕ ರೈತರ ನೋವುಗಳಿಗೆ ಸ್ಪಂದಿಸುವ ಕೆಲಸ ಸರ್ಕಾರ ಮಾಡಬೇಕು’ ಎಂದರು.

ಜೆಸಿಐ ವಲಯ 24ರ ಪೂರ್ವ ಉಪಾಧ್ಯಕ್ಷರಾದ ಸಂತೋಷ ಕೊಟ್ರಪ್ಪ ಸೋಗಿ, ಸಂಸ್ಥೆ ಪದಾಧಿಕಾರಿಗಳಾದ ಬಿ.ಎಚ್.ಎಂ. ಅಮರನಾಥ ಶಾಸ್ತ್ರಿ, ಮನೋಜ್ ಕುಮಾರ್, ವಿದ್ಯಾರ್ಥಿಗಳು, ವಸತಿ ನಿಲಯ ಸಿಬ್ಬಂದಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.