ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ-ಸೊಲ್ಲಾಪುರ ಸ್ಲೀಪರ್‌ ಬಸ್‌ ಆರಂಭ

Published 15 ಮಾರ್ಚ್ 2024, 15:47 IST
Last Updated 15 ಮಾರ್ಚ್ 2024, 15:47 IST
ಅಕ್ಷರ ಗಾತ್ರ

ಬಳ್ಳಾರಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಳ್ಳಾರಿ ವಿಭಾಗದ ಒಂದನೇ ಘಟಕದಿಂದ ಬಳ್ಳಾರಿ-ಸೊಲ್ಲಾಪುರ(ಮಹಾರಾಷ್ಟ್ರ)ಕ್ಕೆ ನೂತನ ನಾನ್ ಎ.ಸಿ ಸ್ಲೀಪರ್‌ನ ಅಂತರರಾಜ್ಯ ಸಾರಿಗೆ ಕಾರ್ಯಾಚರಣೆ ಬಸ್‌ ಶುಕ್ರವಾರದಿಂದ ಪ್ರಾರಂಭಿಸಲಾಗಿದೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಳ್ಳಾರಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಇನಾಯತ್ ಬಾಗ್‍ಬಾನ್ ಅವರು ತಿಳಿಸಿದ್ದಾರೆ.

ಬಳ್ಳಾರಿಯಿಂದ ರಾತ್ರಿ 9.30ಕ್ಕೆ ಹೊರಟು ವಯಾ ಹೊಸಪೇಟೆ, ವಿಜಯಪುರ ಮಾರ್ಗವಾಗಿ ಬೆಳಿಗ್ಗೆ 5.30ಕ್ಕೆ ಸೊಲ್ಲಾಪುರ ತಲುಪಲಿದೆ. ಸೊಲ್ಲಾಪುರದಿಂದ ರಾತ್ರಿ 8.45 ಕ್ಕೆ ಹೊರಟು ಬೆಳಿಗ್ಗೆ 4.45ಕ್ಕೆ ಬಳ್ಳಾರಿಗೆ ತಲುಪಲಿದೆ.

ಆಸನಗಳ ಮುಂಗಡ ಕಾಯ್ದಿರಿಸುವಿಕೆಗಾಗಿ www.ksrtc.inಗೆ ಭೇಟಿ ನೀಡಬಹುದು. ಈ ಸಾರಿಗೆ ವ್ಯವಸ್ಥೆಯನ್ನು ಪ್ರಯಾಣಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT