ಬಳ್ಳಾರಿ: ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೊ) ಚಂದ್ರಯಾನ–3 ಯಶಸ್ವಿಗೊಳಿಸಿದ ಹಿನ್ನೆಲೆಯಲ್ಲಿ ನಗರದ ‘ಪಿಸ್ಟನ್ ಬುಲ್ ರೈಡರ್ಸ್‘ ತಂಡ ಭಾನುವಾರ ನಗರದಲ್ಲಿ ಬುಲೆಟ್ ಬೈಲ್ ರ‍್ಯಾಲಿ ನಡೆಸಿತು.
ನಗರದ ತಾರಾನಾಥ ಆಯುರ್ವೇದ ಕಾಲೇಜು ಬಳಿಯ ರಾಯಲ್ ಎನ್‌ಫೀಲ್ಡ್ ಶೋ ರೂಮ್ ಬಳಿ ತಂಡದ ಅಧ್ಯಕ್ಷ, ಪಾಲಿಕೆ ಸದಸ್ಯ ಮುಂಡ್ಲೂರು ಪ್ರಭಂಜನ್ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ರ‍್ಯಾಲಿಗೆ ನಗರ ಶಾಸಕ ನಾರಾ ಭರತ್‌ರೆಡ್ಡಿ ಚಾಲನೆ ನೀಡಿದರು.
ಬೈಕ್ ರ‍್ಯಾಲಿ ಡಾ. ರಾಜ್ ಕುಮಾರ್ ರಸ್ತೆ, ಗಡಗಿ ಚನ್ನಪ್ಪ ವೃತ್ತ, ಬೆಂಗಳೂರು ರಸ್ತೆ, ಬ್ರೂಸ್‌ಪೇಟೆ ವೃತ್ತ, ಮೋತಿ ವೃತ್ತ, ಸುಧಾವೃತ್ತ, ಇನ್‌ಫ್ಯಾಂಟ್ರಿ ರಸ್ತೆ, ಕನಕ ದುರ್ಗಮ್ಮ ದೇವಸ್ಥಾನ ವೃತ್ತದ ಮೂಲಕ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ಚಂದ್ರಯಾನ ಯಶಸ್ವಿಯನ್ನು ಸಂಭ್ರಮಿಸಿದರು.
ಬಳಿಕ ಮಾತನಾಡಿದ ಮುಂಡ್ಲೂರು ಪ್ರಭಂಜನ್ ಕುಮಾರ್, ಇಸ್ರೊ ಚಂದ್ರನ ಮೇಲೆ ಭಾರತದ ಹೆಜ್ಜೆ ಗುರುತುಗಳನ್ನು ದಾಖಲಿಸಿದ್ದು, ಇದು ನಮ್ಮೆಲ್ಲರ ಹೆಮ್ಮೆ ಎಂದು ಅಭಿಪ್ರಾಯಪಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.