ತೋರಣಗಲ್ಲು: ಬಿಟಿಪಿಎಸ್‌ನಲ್ಲಿ ಹಲವು ವರ್ಷಗಳಿಂದ ನಿರಂತರವಾಗಿ ಕೆಲಸ ಮಾಡುತ್ತಿರುವ ಗುತ್ತಿಗೆ ನೌಕರರನ್ನು ವಜಾ ಮಾಡದೇ ಮತ್ತೆ ನೇಮಿಸಿಕೊಳ್ಳಬೇಕು ಎಂದು ಆಗ್ರಹಿಸಿ ಗುತ್ತಿಗೆ ಕಾರ್ಮಿಕರ ಸಂಘದ ಮುಖಂಡರು ಕುಡುತಿನಿಯ ಕೆಪಿಸಿಎಲ್ ಗೇಟ್ ಮುಂದೆ ಬುಧವಾರ ಧರಣಿ ನಡೆಸಿದರು.

‘ನೌಕರರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದರ ಜೊತೆಗೆ, ಲಾಕ್‍ಡೌನ್ ಅವಧಿಯಲ್ಲಿನ ಎಂಟು ತಿಂಗಳ ವೇತನವನ್ನು ತಕ್ಷಣ ಪಾವತಿಸಬೇಕು’ ಎಂದು ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ ಒತ್ತಾಯಿಸಿದರು.

‘ಸುಮಾರು 550 ನೌಕರರು ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದು, ಅವರನ್ನು ಏಕಾಏಕಿ ವಜಾಗೊಳಿಸಲಾಗಿದೆ. ಕಾರ್ಮಿಕ ಇಲಾಖೆಯ ನಿಯಮಕ್ಕೆ ವಿರುದ್ಧವಾಗಿ ಕ್ರಮ ಕೈಗೊಳ್ಳಲಾಗಿದೆ’ ಎಂದು ದೂರಿದರು.

‘ಗುತ್ತಿಗೆ ಕಾರ್ಮಿಕರಿಗೆ 8 ತಿಂಗಳ ವೇತನವನ್ನು ನಿಗಮವು ಶೀಘ್ರವಾಗಿ ಬಿಡುಗಡೆ ಮಾಡಬೇಕು. ಬಡ ಕಾರ್ಮಿಕರ ಅನುಕೂಲಕ್ಕಾಗಿ ಇಎಸ್‍ಐ ವ್ಯವಸ್ಥೆಯನ್ನು ತಕ್ಷಣ ಜಾರಿಗೆ ತರಬೇಕು’ ಎಂದು ಕರ್ನಾಟಕ ರಾಜ್ಯ ವಿದ್ಯುತ್ ಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಜೆ.ಸತ್ಯಬಾಬು ಒತ್ತಾಯಿಸಿದರು.

ಮುಖಂಡರಾದ ಜಗದೀಶ್, ಮಲಿಯಪ್ಪ, ಪ್ರಕಾಶ್‍ಬಾಬು, ವೆಂಕಟೇಶ್, ಅಂಜಿನಿ, ಪ್ರಸಾದ್, ವೆಂಕಟೇಶ್, ರಾಮು, ರುದ್ರಮ್ಮ, ಮಲ್ಲಮ್ಮ, ಪದ್ಮಜಾ, ಹುಚ್ಚಮ್ಮ ಮತ್ತು ಕುಡುತಿನಿಯ ಪೋಲಪ್ಪ, ಗುರುಮೂರ್ತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.