ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಪ್ಲಿ: ಬಿಸಿಲ ಝಳಕ್ಕೆ ಮೀನುಗಳ ಸಾವು

Published 9 ಮಾರ್ಚ್ 2024, 16:25 IST
Last Updated 9 ಮಾರ್ಚ್ 2024, 16:25 IST
ಅಕ್ಷರ ಗಾತ್ರ

ಕಂಪ್ಲಿ (ಬಳ್ಳಾರಿ): ತಾಲ್ಲೂಕಿನ ನಂ.10 ಮುದ್ದಾಪುರ ವ್ಯಾಪ್ತಿಯ ಗೌರಮ್ಮ ಕೆರೆಯಲ್ಲಿ ನೀರು ಸಂಗ್ರಹ ಕಡಿಮೆಯಾಗಿದ್ದು, ಅತಿಯಾದ ತಾಪಮಾನದಿಂದ ಮೀನುಗಳು ಸಾವನ್ನಪ್ಪುತ್ತಿವೆ. ಕೆರೆ ಸುತ್ತ ದುರ್ನಾತ ವ್ಯಾಪಿಸಿದೆ.

ಕೆರೆ ಸುತ್ತಲಿನ ಜಮೀನಿನಲ್ಲಿ ಬೆಳೆದ ಬೆಳೆಗೆ ಹಾಕಿದ ರಾಸಾಯನಿಕ ಗೊಬ್ಬರದ ಮಿಶ್ರಣಯುಕ್ತ ನೀರು ಕೆರೆಗೆ ಸೇರಿರುವುದು ಕೂಡ ಮೀನುಗಳಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.

‘ಕಳೆದ ವಾರ ಮೀನು ಬೇಟೆಯಾಡುವಾಗ, ಬಲೆಗೆ ಬಿದ್ದ ಮೀನುಗಳನ್ನು ಬೇರ್ಪಡಿಸುವಾಗ ಸತ್ತ ಮೀನುಗಳನ್ನು ಕೆರೆಯಲ್ಲೇ ಎಸೆದಿರಬಹುದು. ಆದರೆ, ಬಿಸಿಲು ಹೆಚ್ಚಾಗಿದ್ದರಿಂದ ಝಳಕ್ಕೆ ಮೀನು ಸಾಯುತ್ತಿವೆ’ ಎಂದು ಕೆರೆ ಗುತ್ತಿಗೆ ಪಡೆದಿರುವ ತುಂಗಭದ್ರಾ ಅಲೆಮಾರಿ ಜನಾಂಗದ ಮೀನುಗಾರ ಸಹಕಾರ ಸಂಘದ ಅಧ್ಯಕ್ಷ ಜಿ.ಮಾಧವರಾವ್ ತಿಳಿಸಿದರು.

‘ಹವಾಮಾನ ವೈಪರಿತ್ಯ, ಕೆರೆಯಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಮೀನುಮರಿ ಬಿತ್ತನೆ, ನೀರಿನಲ್ಲಿ ಆಮ್ಲಜನಕ ಕೊರತೆಯಿಂದ ಮೀನುಗಳು ಸಾವನ್ನಪ್ಪಿರಬಹುದು. ಸದ್ಯ ಲಭ್ಯವಿರುವ ಮೀನುಗಳನ್ನು ಹಿಡಿದು ಮಾರಾಟ ಮಾಡುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗುವುದು’ ಬಳ್ಳಾರಿ ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕ ಶಿವಣ್ಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT